- ಚಹಾ ಪುಡಿಯಿಂದ ಕಷಾಯ ಮಾಡಿ ಶೋಧಿಸಿ ಅದು ಆರಿದ ನಂತರ ತಲೆ ಗೆ ಲೇಪಿಸಿದರೆ ಕೂದಲು ಊದುರುವುದು ನಿಲ್ಲುತ್ತದೆ.
- ಕೂದಲು ಉದ್ದವಾಗಿ ಬೆಳೆಯಲು ನೆಲ್ಲಿಕಾಯಿ ಚಟ್ಟನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಆರಿದ ನಂತರ ತಲೆ ಕೂದಲು ಬುಡಕ್ಕೆ ತಾಗುವಂತೆ ತಿಕ್ಕಿ ಮೂರು ಗಂಟೆ ನಂತರ ಸ್ನಾನ ಮಾಡಿದರೆ ಕೂದಲು ಊದುರುವುದು ನಿಂತು ಕೂದಲು ಉದ್ದವಾಗಿ ಬೆಳೆಯುತ್ತದೆ.
- ಕೂದಲು ನೆರೆಯುವುದನ್ನು ನಿವಾರಿಸಲು ಮೆಂತ್ಯೆದ ಕಾಳನ್ನು ನಯವಾಗಿ ಚೂರ್ಣಿಸಿಕೊಂಡು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಮಾಡಿ ಚೆನ್ನಾಗಿ ಕುದಿಸಿ ತಣ್ಣಗಾದ ನಂತರ ಕೂದಲುಗಳಿಗೆ ಲೇಪಿಸುತ್ತಿದ್ದರೆ ಅಪ್ತಾಪ್ತ ವಯಸ್ಸಿನಲ್ಲಿ ಉಂಟಾಗುವ ಬಾಲ ನೆರೆಯನ್ನು ತಡೆಯಬಹುದಾಗಿದೆ.
- ಅಪ್ರಾಪ್ತ ವಯಸ್ಸಿನ ನೇರೆ ನಿವಾರಣೆಗೆ ಶುದ್ದ ಹಸುವಿನ ಬೆಣ್ಣೆಯನ್ನು ಕೂದಲುಗಳ ಬುಡಕ್ಕೆ ತಾಗುವಂತೆ ಬೆರಳಾಡಿಸಿ ತಿಕ್ಕಿ ಮಸಾಜ್ ಮಾಡಿದರೆ ನೆರೆ ಕೂದಲು ನಿವಾರಣೆಯಾಗಿ ಕೂದಲು ಕಾಂತಿಯುಕ್ತವಾಗುವುದು,
- ಭೃಂಗರಾಜ (ಗರುಗದ) ಸೊಪ್ಪಿನ ರಸ 100 ಗ್ರಾಂ ಕೊಬ್ಬರಿ ಎಣ್ಣೆ 100 ಗ್ರಾಂ. ಬಿಸಿ ಮಾಡಿ ಆರಿದ ನಂತರ ಕೂದಲಿಗೆ ಲೇಪಿಸಿಕೊಂಡು ತಲೆ ಬಾಚಿಕೊಳ್ಳುತ್ತಿದ್ದರೆ ಕೂದಲು ಕಪ್ಪಗೆ ಊದ್ದವಾಗಿ ಬೆಳೆಯುತ್ತದೆ.
- 100 ಗ್ರಾಂ ಕೊಬ್ಬರಿ ಎಣ್ಣೆ, ದೊಡ್ಡ ಗಾತ್ರದ ಲಿಂಬೆ ರಸ, ಆಲದ ಮರದ ಜೋತುಬಿದ್ದ ಬೇರಿನ ಎಳೆ ಜಗರು 100 ಗ್ರಾಂ, ಲಿಂಬೆ ರಸದಲ್ಲಿ ಅರೆದು ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಆರಿದ ನಂತರ ತಲೆಗೆ ಹಚ್ಚುವುದರಿಂದ ಕೂದಲು ಊದುರುವುದು ನಿಂತು ಕೂದಲು ಉದ್ದವಾಗಿ ಬೆಳೆದು ಕಾಂತಿಯುಕ್ತವಾಗುವುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.
https://www.facebook.com/prajakirannews