ಆರೋಗ್ಯ

ಪಪ್ಪಾಯಿ ಹಣ್ಣಿನಲ್ಲಿದೆ ರೋಗ ನಿರೋಧಕ ಶಕ್ತಿ

  • ಪ್ರತಿ ದಿನ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ.
  • ಮೂಲವ್ಯಾಧಿಯವರು ಪಪ್ಪಾಯಿ ಹಣ್ಣು ತಿಂದರೆ ಬಹಳ ಒಳ್ಳೆಯದು.
  • ದೇಹದ ಬೊಜ್ಜು ಕರಗಿಸಲು ಪಪ್ಪಾಯಿ ಹಣ್ಣು ತಿನ್ನುವುದು ಉತ್ತಮ.
  • ಚರ್ಮ ರೋಗದವರು ಪಪ್ಪಾಯಿ ಹಣ್ಣು ತಿಂದರೆ ಚರ್ಮ ರೋಗ ದೂರವಾಗುವುದು.
  • ಮುಟ್ಟು ಸರಿಯಾಗಿ ಆಗದಿರುವ ಹೆಂಗಸರು ಪಪ್ಪಾಯಿ ಬೀಜವನ್ನು ಪುಡಿ ಮಾಡಿ ಜೇನು ತುಪ್ಪದೊಂದಿಗೆ ಸೇವಿಸಬೇಕು.
  • ಬಾಣಂತಿಯರು ಪಪ್ಪಾಯಿ ಹಣ‍್ಣು ಸೇವಿಸಿದರೆ ಹಾಲಿನ ಉತ್ಪತ್ತಿ ಹೆಚ್ಚಳವಾಗುತ್ತದೆ.
  • ಪ್ರತಿ ದಿನ ಊಟವಾದ ನಂತರ ಪಪ್ಪಾಯಿ ಹಣ್ಣನ್ನು ತಿಂದರೆ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
  • ಮುಖದ ಮೇಲೆ ಕಲೆ ಇರುವವರು ಪಪ್ಪಾಯಿ ಹಣ್ಣಿನ ತಿರುಳನ್ನು ಮುಖಕ್ಕೆ ಲೇಪಿಸಿದರೆ ಕಲೆ ಹೋಗುತ್ತದೆ.
  • ನರಗಳ ದೌರ್ಬಲ್ಯ ಇರುವವರು ಪಪ್ಪಾಯಿ ಹಣ್ಣಿನ ಜೊತೆಗೆ ಹಾಲು, ಜೇನುತುಪ್ಪ ಸೇರಿಸಿ ಸೇವಿಸಬೇಕು.
  • ಮಲಬದ್ದತೆಯಿಂದ ಬಳಲುವವರು ಪಪ್ಪಾಯಿ ಹಣ್ಣನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಜೀರಿಗೆ ಮೆಣಸು ನಿಂಬೆರಸದೊಂದಿಗೆ ಚಟ್ನಿ ಮಾಡಿ ಸೇವಿಸಿದರೆ ಬಹಳ ಒಳ್ಳೆಯದು.
  • ಪಪ್ಪಾಯಿ ಸೇವನೆಯಿಂದ ಕಣ್ಣಿನ ತೊಂದರೆ ನಿವಾರಣೆಯಾಗುತ್ತದೆ.
  • ಜಠರದಲ್ಲಿನ ಜಂತು ಹುಳಗಳ ನಿವಾರಣೆಗೆ ಈ ಹಣ್ಣಿನ ಬೀಜದ ಜೊತೆಗೆ ಸೇವಿಸುವುದರಿಂದ ಜಂತು ನಿವಾರಣೆಯಾಗುವುದು.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

prajakiran.com http://prajakiran.com health tips

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *