ಆರೋಗ್ಯ

ಪೆರಂಗಿ ಮರ ಮನೆಮದ್ದು

  • ಪೆರಂಗಿಯ ಎಲೆಯನ್ನು ಅರೆದು ಕಟ್ಟುವುದರಿಂದ ಅಥವಾ ಲೇಪಿಸುವುದರಿಂದ ನರಗಳ ನೋವು ಕಡಿಮೆಯಾಗುತ್ತದೆ ಆಗಿರುವ ಇರುವ ಕಡೆ ಲೇಪಿಸಿದರು ನೋವು ಕಡಿಮೆಯಾಗುತ್ತದೆ . ಬಿದ್ದು ನೋವಾಗಿರುವ ಕಡೆ ಲೇಪಿಸಿದರೂ ನೋವು ಕಡಿಮೆ ಮಾಡುತ್ತದೆ.
  • ಪೆರಂಗಿ ಗಿಡದ ಅಥವಾ ಎಳೆ ಕಾಯಿ ಹಾಲನ್ನು ಒಂದು ಚಮಚ ಸಂಗ್ರಹಿಸಿ ಅದಕ್ಕೆ ಸಕ್ಕರೆ ಸೇರಿಸಿ ನಿತ್ಯ ಎರಡು ಹೊತ್ತಿನಂತೆ ಎರಡರಿಂದ ಮೂರು ವಾರ ಸೇವಿಸುವುದರಿಂದ ಪಚನ ಶಕ್ತಿ ಹೆಚ್ಚಾಗುತ್ತದೆ.
  • ಸ್ತ್ರೀಯರಲ್ಲಿ ಅನ್ಯ ಕಾರಣದಿಂದ ಮುಟ್ಟು ತಡೆ ಯಾಗಿದ್ದರೆ ಮುಟ್ಟು ಪ್ರಾರಂಭವಾಗುತ್ತದೆ
  • ಪೆರಂಗಿ ಹಣ್ಣನ್ನು ಮಾತ್ರ ನಿತ್ಯ ಬೆಳಿಗ್ಗೆ ಮೇಲೆ ಬಿಸಿ ನೀರು ಕುಡಿಯುವುದರಿಂದ ಅರುಚಿ, ಅಜೀರ್ಣ ನಿವಾರಣೆಯಾಗುತ್ತದೆ.
  • ಪೆರಂಗಿ ಕಾಯಿಯ ಹಾಲನ್ನು ಹಚ್ಚುವುದರಿಂದ ಕಜ್ಜಿ ಮತ್ತು ಹುಳುಕಡ್ಡಿ ಗುಣವಾಗುತ್ತದೆ.
  • ಪೆರಂಗಿ ಎಲೆಯ ರಸವನ್ನು ನಿಯಮಿತವಾಗಿ ಸೇವಿಸಿದರೆ ಡೆಂಗ್ಯೂ ಜ್ವರ ಶಮನವಾಗುತ್ತದೆ
  • ಪೆರಂಗಿ ಮರದ ಎಳೆ ಕಾಯಿಯನ್ನು ಕಚ್ಚು ಮಾಡಿದಾಗ ಬಸೆರುವ ಹಾಲನ್ನು ಚೇಳು ಕಡಿದ ಜಾಗದ ಮೇಲೆ ಲೇಪಿಸುವುದರಿಂದ ವಿಷವು ಇಳಿಯುತ್ತದೆ.
  • ಎಳೆ ಪೆರಂಗಿ ಕಾಯಿಯಿಂದ ಸುರಿವ ಹಾಲಿಗೆ ಸಟಕದ ಚೂರ್ಣ ಸೇರಿಸಿ ಹಚ್ಚುವುದರಿಂದ ಕಲ್ಲೋತ್ತು ಹಾಗೂ ನರೋಲಿ ವಾಸಿಯಾಗುತ್ತದೆ 
  • ಪೆರಂಗಿ ಹೂವುಗಳನ್ನು ಕೈಯಲ್ಲಿ ಹೊಸಕಿ ಕಟ್ಟಿರುವೆ ಮತ್ತು ಇತರ ಹುಳುಗಳು ಕಡೆದಿರುವ ಸ್ಥಳಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *