ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಬರೋಬ್ಬರಿ 5 ಸಾವು 84 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮತ್ತೆ ಹೊಸದಾಗಿ 84 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ.

ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ  2327 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. 

ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಬರೋಬ್ಬರಿ 5 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರಸಂಖ್ಯೆ  73 ಕ್ಕೆ ಏರಿದೆ.  

ಇನ್ನೂ 1544 ಸಕ್ರಿಯ ಕರೋನಾ ಸೋಂಕಿತರು ಜಿಲ್ಲೆಯಲ್ಲಿದ್ದಾರೆ  ಎಂದು ವಿವರಿಸಿದೆ.

 ಇದಲ್ಲದೆ, ಇನ್ನೂ  23  ಜನ ಸೋಂಕಿತರು ಕೋವಿಡ್ ನಿಯೋಜಿತ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಲಾಗಿದೆ.

ಸಾವನ್ನಪ್ಪಿದ್ದವರ ವಿವರ :  ಧಾರವಾಡದ ಬನಶಂಕರಿ ನಗರ ನಿವಾಸಿ ಪಿ-69246 ಸೋಂಕಿತ  91 ವರ್ಷದ ವೃದ್ದೆ, ಹುಬ್ಬಳ್ಳಿ ಅಂಚಟಗೇರಿ ಓಣಿ ಪಿ-57629 ಸೋಂಕಿತ 70ವರ್ಷದ ವೃದ್ದೆ ಸಾರಿ ಕೇಸ್ (ತೀವ್ರ ಉಸಿರಾಟ) ದ ತೊಂದರೆಯಿಂದ ಬಳಲುತ್ತಿದ್ದರು. 

ಹುಬ್ಬಳ್ಳಿ ನಿವಾಸಿ ಪಿ-59215 ಸೋಂಕಿತ   50 ವರ್ಷದ ವ್ಯಕ್ತಿ, ಹುಬ್ಬಳ್ಳಿ ಗದಗ ರಸ್ತೆ ವಿನೂತಾ ಕಾಲೋನಿ ನಿವಾಸಿ ಪಿ 58262 ಸೋಂಕಿತ 66 ವರ್ಷದ ವೃದ್ದ,

ಹುಬ್ಬಳ್ಳಿ ಕೊಂಗವಾಡ ಗೌಡರ ಓಣಿ ನಿವಾಸಿ ಪಿ-58132 ಸೋಂಕಿತ 76 ವರ್ಷದ ವೃದ್ದ, ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದರು

ಇವರೆಲ್ಲರೂ ಚಿಕಿತ್ಸೆ ಫಲಿಸದೆ ಜಿಲ್ಲೆಯ ವಿವಿಧ ನಿಯೋಜಿತ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೇಟಿನ್ ವಿವರಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *