ಅಂತಾರಾಷ್ಟ್ರೀಯ

ನಕ್ಸಲರ ಗುಂಡಿನ ದಾಳಿಗೆ 22 ಯೋಧರು ಹುತಾತ್ಮ……!

ಸುಕ್ಮಾ (ಛತ್ತಿಸ್ ಗಡ) prajakiran. com : ನಕ್ಸಲರು ನಡೆಸಿದ ಭೀಕರ  ಗುಂಡಿನ ದಾಳಿಗೆ 22 ಯೋಧರು ಹುತಾತ್ಮರಾದ ಘಟನೆ ಛತ್ತೀಸ್ ಗಡ್ ದಲ್ಲಿ ನಡೆದಿದೆ.

ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ರ್ದುಘಟನೆ ನಡೆದಿದ್ದು, ಇದರಲ್ಲಿ
32ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಕ್ಸಲ್ ನಾಯಕ ಮಾದ್ವಿ ಹಿದ್ಮಾ ನೇತೃತ್ವದಲ್ಲಿ 300ಕ್ಕೂ ಅಧಿಕ ನಕ್ಸಲರು ಸಭೆ ನಡೆಸುತ್ತಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ
ಸಿಆರ್ ಪಿಎಫ್ ಯೋಧರು ನಕ್ಸಲರು ಇದ್ದ ಅರಣ್ಯ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆಗೆ ಮುಂದಾಗಿದ್ದರು.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ 200-300 ನಕ್ಸಲರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಈ ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾದರೆ. 32 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಯೋಧರು ಹಾಗೂ ನಕ್ಸಲರ ನಡುವೆ ಸುಮಾರು 4 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ.

ಇದೇ ವೇಳೆ ಸಿ ಆರ್ ಪಿ ಎಫ್ ಯೋಧರು 15 ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲರ ಗುಂಡಿನ ದಾಳಿಗೆ ಬಲಿಯಾದ ವೀರ ಯೋಧರಿಗೆ ದೇಶದ ಜನತೆ ಕಂಬನಿ ಮಿಡಿದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *