ಅಂತಾರಾಷ್ಟ್ರೀಯ

ಯೋಗೀಶ ಗೌಡ ಕೊಲೆ ಪ್ರಕರಣದ ಮಹತ್ತರ ಮಾಹಿತಿ ಸಿಬಿಐ ಎದುರು ಹೇಳುತೇನೆ ಎಂದ ಬಸವರಾಜ ಮುತ್ತಗಿ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಕುರಿತು ಸಿಬಿಐ ತನಿಖೆ ಮತ್ತೆ ಶುಕ್ರವಾರವೂ ನಡೆಯಿತು‌‌

ಧಾರವಾಡ ಉಪನಗರ ಠಾಣೆಗೆ ಆಗಮಿಸಿದ ಬಸವರಾಜ ಮುತ್ತಗಿ
ಮುತ್ತಗಿ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಪೋಟಕ ಹೇಳಿಕೆ ನೀಡಿದರು ‌

ಮತ್ತೊಬ್ಬರನ್ನು ಬಲಿ ಪಶು ಮಾಡಬೇಡಿ
ನಾನು ಕೂಡ ಅಂಥ ಮನಸ್ಥಿತಿಯವನಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು

ನಾನು ಪ್ರಾಮಾಣಿಕವಾಗಿ ಹೋರಾಟ ಮಾಡಿದವನು. ಯೋಗೀಶಗೌಡ ಹತ್ಯೆ ಪ್ರಕರಣ  ಯಾರ ರಾಜಕೀಯ ಉದ್ದೇಶಕ್ಕೆ ಆಗಿದೆ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿದೆ.

ಸಿಬಿಐ ತನಿಖೆಯಲ್ಲಿ ಎಲ್ಲವೂ ಬಯಲಿಗೆ ಬಂದಿದೆ. ಇದರ ಜೊತೆಗೆ ಇನ್ನು
ಸಾಕಷ್ಟು ವಿಷಯಗಳೂ ಬಯಲಿಗೆ ಬರಲಿವೆ ಎಂದು ಹೇಳಿದರು.

ಇವತ್ತು ನಾನು ಕೂಡ ಸಾಕಷ್ಟು ವಿಷಯ ಸಿಬಿಐ ಎದುರು ಹೇಳಲಿದ್ದೇನೆ.
ಅದನ್ನು ಮುಂದಿನ ದಿನಗಳಲ್ಲಿ ಕೋರ್ಟ್ ನಲ್ಲಿಯೂ ಹೇಳುತ್ತೇನೆ ಎಂದರು.

ನನ್ನ ನಂಬಿದ ಹುಡುಗರ ಸಲುವಾಗಿ ನಾನು ಇದನ್ನು ಮಾಡುತ್ತೇನೆ.
ನನ್ನೊಂದಿಗೆ ಬಹಳಷ್ಟು ಬಡ ಹುಡುಗರಿದ್ದಾರೆ.
ನಾನು ವಿನಯ ಪರವಾಗಲಿ ಅಥವಾ ವಿರುದ್ಧವಾಗಲಿ ಮಾತಾಡುತ್ತಿಲ್ಲ.

ನನ್ನ ಹಾಗೂ ಹುಡುಗರನ್ನು ಬಲಿ ಪಶು ಮಾಡಲು ಬಿಡೋದಿಲ್ಲ.
ಹಾಗೆ ಬಲಿ ಪಶು ಮಾಡಿ ಬದುಕಲು ಆಗೋದಿಲ್ಲ ಎಂದು ಹೇಳಿದರು.

ಎಲ್ಲರೂ ಬಡ ಹುಡುಗರಿದ್ದಾರೆ
ಇದೇ ಸಂಬಂಧ ಅನೇಕ ಸತ್ಯವನ್ನು ಹೇಳಲಿದ್ದೇನೆ.

ಸಿಬಿಐ ಮುಂದೆ ಎಲ್ಲವನ್ನು ಹೇಳಲಿದ್ದೇನೆ
ಇದುವರೆಗೂ ಹೇಳದೇ ಇರೋ ವಿಚಾರವನ್ನು ಕೂಡ ನಾನು ನ‌‌ನ್ನ ಹುಡಗರಿಗಾಗಿ ಹೇಳುತ್ತೇನೆ. ಇನ್ನೂ ಮುಂದೆ ನನ್ನ ಹೋರಾಟ ಸತ್ಯದ ಪರ ಇರುತ್ತದೆ.

ಇದರಿಂದಾಗಿ ಈಗಾಗಲೇ ಸಾಕಷ್ಟು ನೊಂದಿದ್ದೇನೆ‌. ಮುಂದೆಯೂ ನನಗೆ ತೊಂದರೆ ಆಗಬಹುದು. ಜೀವಕ್ಕಾಗಿ ಹೆದರಲ್ಲ. ಸತ್ಯದ ಪರ ಹೋರಾಟ ಮುಂದುವರೆಯುತ್ತದೆ ಎಂದರು.

ಇದೇ ವೇಳೆ ಸುಪ್ರೀಂ ಕೋರ್ಟ್ ನಲ್ಲಿ ನನಗೆ ಗೊತ್ತಿಲ್ಲದೆ, ನನ್ನ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದು ಖುಷಿ ತಂದಿದೆ.

ಆದರೆ ನಾನು ಅವರನ್ನು ವಾದಕ್ಕೆ ಕರೆಯುವಷ್ಟು ದೊಡ್ಡವನಲ್ಲ.

ಹೀಗಾಗಿ ಈಗ ನನ್ನ ವಕೀಲರಾದ ಮಹೇಶ ಠಾಕೂರ ಅವರ ಬಳಿಯಿಂದ ಎನ್.ಒ.ಸಿ ಪಡೆಯುತ್ತೇನೆ.

ಅಲ್ಲದೆ ಹಿರಿಯ ವಕೀಲ
ಕಪಿಲ್ ಸಿಬಲ್ ಅವರನ್ನು ಯಾರು ನೇಮಿಸಿದ್ದಾರೋ ನನಗೆ ಗೊತ್ತಿಲ್ಲ

ಒಂದು ಕಡೆ ಜಾಮೀನು ರದ್ದಿಗೆ ಆಗ್ರಹ ನಡೆದಿದೆ. ಅದೇ ಕೋರ್ಟ್ ನಲ್ಲಿ ನನಗೆ ಗೊತ್ತಿಲ್ಲದೆ ನನ್ನ ಪರ ಅವರು ಹಾಜರಾಗಿರುವುದು ಅಚ್ಚರಿಗೆ ಕಾರಣವಾಗಿದೆ

ತಮಗೆ ಜಾಮೀನು ಕೇಳುವುದು ಸಹಜ ಪ್ರಕ್ರಿಯೆ ಆದರೆ ಇನ್ನೊಬ್ಬರ ಜಾಮೀನು ರದ್ದು ಮಾಡಲು ಕೋರುವವರ ಮನಸ್ಥಿತಿ ಎಂತಹದ್ದು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ‌

ಅಂಥವರ ಉದ್ದೇಶ ಏನು ಅನ್ನೋದು ಕೂಡ ಗೊತ್ತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತೊಂದು ಕಡೆ ಕಪಿಲ್ ಸಿಬಲ್ ಅಂತಹ ವಕೀಲರು ನನ್ನ ಪರ ವಾದಿಸುತ್ತಿದ್ದಾರೆ ಎಂದರೆ
ಇದೆಲ್ಲವೂ ನನಗೆ ಅರ್ಥವಾಗುತ್ತಿಲ್ಲ ಎಂದು
ಧಾರವಾಡದಲ್ಲಿ ಬಸವರಾಜ ಮುತ್ತಗಿ ರೋಚಕ ಸಂಗತಿಗಳನ್ನು ಹಾಗೂ ಪ್ರಕರಣದ ಹೊಸ ತಿರುವು ಬಯಲಿಗೆ ಎಳೆದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *