ಅಂತಾರಾಷ್ಟ್ರೀಯ

ನವೆಂಬರ್ ವರೆಗೆ ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ, ಬೆಳೆ ವಿತರಣೆ ಎಂದ ನಮೋ

ನವದೆಹಲಿ prajakiran.com : ಕರೋನಾ ಅನ್ ಲಾಕ್ 2 ಆರಂಭವಾದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಅಭಯ ನೀಡಿದ್ದಾರೆ.

ಅದರಲ್ಲೂ ಬಡವರ ಮನೆಯಲ್ಲಿ ಒಲೆ ಹತ್ತದ ಪರಿಸ್ಥಿತಿ ನಿರ್ಮಾಣವಾಗಬಾರದು. ಯಾರೊಬ್ಬರನ್ನು ಉಪವಾಸ ಮಲಗಬಾರದು. ಈನಿಟ್ಟಿನಲ್ಲಿ ಎಲ್ಲರೂ ಸೇರಿ ಹೋರಾಟ ಮಾಡಬೇಕಾದಅವಶ್ಯಕತೆಯಿದೆ ಎಂದರು.

 ಈಗಾಗಲೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ 20 ಲಕ್ಷ ಜನರ ಜನಧನ ಖಾತೆಗೆ, 9 ಕೋಟಿಗೂ ಅಧಿಕ ಕೃಷಿಕರ ಖಾತೆಗೆ ನೇರವಾಗಿ 1800 ಕೋಟಿ ಹಣ ಸಂದಾಯ ಮಾಡಲಾಗಿದೆ. 80 ಕೋಟಿಗೂ ಅಧಿಕ ಜನರಿಗೆ 3 ತಿಂಗಳ ಉಚಿತ ಪಡಿತರ ನೀಡಲಾಗಿದೆ.



ಕುಟುಂಬದ ಪ್ರತಿಯೊಬ್ಬರಿಗೆ ಐದು ಕೆ ಜಿ ಅಕ್ಕಿ ಅಥವಾ ಗೋಧಿ, ಒಂದು ಕೆ ಜಿ. ತೋಗರಿ ಬೆಳೆ ನೀಡಲಾಗುವುದು.  ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ದೀಪಾವಳಿಯ ನವೆಂಬರ್ ವೆರೆಗೆ ವಿಸ್ತರಿಸಲಾಗಿದೆ.

80 ಕೋಟಿ ಜನರಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲು ಜುಲೈ, ಅಗಸ್ಟ್, ಸೆಪ್ಟಂಬರ್ ಹಾಗೂ ಅಕ್ಟೋಬರ್, ನವೆಂಬರ್ ವರೆಗೆ ಸಿಗಲಿದೆ ಎಂದು ಅಭಯ ನೀಡಿದರು.



ವಿಶ್ವದ ವಿವಿಧ ದೇಶಗಳೊಂದಿಗೆ ಹೋಲಿಸಿದರೆ ಭಾರತ ಲಕ್ಷಾಂತರ ಜನರ ಜೀವನ ಉಳಿಸಿದೆ. ಆದರೆ, ದೇಶದಲ್ಲಿ ಅನ್ ಲಾಕ್ ಆದಾಗಿನಿಂದ ಜನರ ನಿರ್ಲಕ್ಷ್ಯತನ ಮುಂದುವರೆದಿದೆ.

ಆರಂಭದಲ್ಲಿ ಮಾಸ್ಕ್, ಸಾಮಾಜಿಕಅಂತರ, ಕೈ ತೊಳೆದುಕೊಳ್ಳುವ ಬಗ್ಗೆ ಇದ್ದ ಕಾಳಜಿ ಈಗ ಉಳಿದಿಲ್ಲ. ಅದರ ಬಗ್ಗೆ ನಿಧಾನವಾಗಿ ಉದಾಸೀನತೆ ಶುರುವಾಗಿದೆ. ಇದು ಚಿಂತೆಯನ್ನುಂಟು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.



ಲಾಕ್ ಡೌನ್ ಆರಂಭದಲ್ಲಿ ದೇಶ ಗಂಭೀರತೆಯಿಂದ ಕೂಡಿತ್ತು. ಇದು ಸರಕಾರ, ಸ್ಥಳೀಯ ಸಂಸ್ಥೆಯವರೆಗೆ, ಜನತೆಗೆ ಹಾಗೂ ಅದರಲ್ಲೂ ಕಂಟೋನ್ ಮೆಂಟ್ ಜೋನ್ ಬಗ್ಗೆ ಕಟ್ಟೇಚ್ಚರವಹಿಸಬೇಕು ಎಂದರು.

ಕರೋನಾ ಸೋಂಕಿನ ಹಿನ್ನಲೆಯಲ್ಲಿ ನಿಯಮ ಪಾಲನೆ ಮಾಡದಿದ್ದರೆ ತಡೆಯುವ, ತಿಳಿಸುವ ಹಾಗೂ ಥಳಿಸುವ ಅಗತ್ಯವಿದೆ. ಇದು 130 ಕೋಟಿ ಜನರ ರಕ್ಷಣೆಯ ಭಾಗವಾಗಿದೆ ಎಂದರು.



 ಗ್ರಾಮ ಪ್ರಧಾನ್ ಆಗಿರಲಿ ಅಥವಾ ದೇಶದ ಪ್ರಧಾನ್ ಆಗಿರಲಿ ಕಾನೂನೂ ಎಲ್ಲರಿಗೂ ಒಂದೇ ಇದೆ. ಮಾಸ್ಕ ಧರಿಸದವರ ಬಳಿ ದಂಡ ವಸೂಲಿ ಹೆಚ್ಚಳವಾಗಬೇಕಿದೆ  ಎಂದು ನಮೋ ಹೇಳಿದರು.

ಒಂದು ರಾಷ್ಟ್ರ ಒಂದು ರೇಶನ್ ಯೋಜನೆ ಶೀಘ್ರದಲ್ಲಿ ಆರಂಭವಾಗಲಿದೆ. ಅದರಿಂದ ವಲಸೆ ಕಾರ್ಮಿಕರಿಗೆ ಎಲ್ಲಿ ಇದ್ದರೂ ರೇಶನ್ ದೊರೆಯಲಿದೆ ಎಂದು ವಿವರಿಸಿದರು.

ಇದು ದೇಶದ ಆತ್ಮನಿರ್ಭರ್ ಯೋಜನೆ ಭಾಗವಾಗಿದೆ. ಎಲ್ಲರಿಗೂ ನಿಯಮಗಳು ಒಂದೇ ಇವೆ. ಕರೋನಾ ಸಾವಿನಿಂದ ನಾವು ಹೆದರುವಅಗತ್ಯವಿಲ್ಲ ಎಂದು ಹೇಳಿದರು.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *