ರಾಜ್ಯ

ದೆಹಲಿಯಿಂದ ಧಾರವಾಡಕ್ಕೆ ಆಗಮಿಸಿದ ಇಬ್ಬರು ಯುವಕರಿಗೆ ಕರೋನಾ

ಧಾರವಾಡ prajakiran.com  : ವಿದ್ಯಾನಗರಿ  ಧಾರವಾಡದ ಜಿಲ್ಲೆಯಲ್ಲಿ ಶುಕ್ರವಾರ ಮತ್ತಿಬ್ಬರಿಗೆ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಸೋಂಕಿತರನ್ನು ಪಿ-1609ನೇ ಸೋಂಕಿತ 22 ವರ್ಷದ ಪುರುಷ ಹಾಗೂ ಪಿ-1610 ಸೋಂಕಿತ 23ವರ್ಷದ ಪುರುಷ ಇವರಿಬ್ಬರು  ನವದೆಹಲಿಯಿಂದ ರೈಲಿನ ಮೂಲಕ ಹಿಂದಿರುಗಿರುವ  ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.  ಈ ಇಬ್ಬರೂ ಯುವಕರನ್ನು ಧಾರವಾಡ ಜಿಲ್ಲೆಗೆ ಆಗಮಿಸಿದ ಕೂಡಲೇ ಗಂಟಲು ದ್ರವ ಪರೀಕ್ಷೆಗೊಳಪಡಿಸಿ, ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಆ ಮೂಲಕ ಧಾರವಾಡ  ಜಿಲ್ಲೆಯಲ್ಲಿ […]

ರಾಜ್ಯ

ರಾಜ್ಯದಲ್ಲಿ ಒಂದೇ ದಿನ 105 ಪಾಸಿಟಿವ್ ಪ್ರಕರಣ ಪತ್ತೆ

ಬೆಂಗಳೂರು prajakiran.com :  ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 105 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಆ ಮೂಲಕ ರಾಜ್ಯದ ಕರೋನಾ ಸೋಂಕಿತರ ಸಂಖ್ಯೆ 1710 ಕ್ಕೆ ಏರಿಕೆಯಾಗಿದೆ . ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ 51 ಜನರಿಗೆ ಕರೋನಾ ಸೋಂಕು ತಗುಲಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಅದೇ ರೀತಿ ತುಮಕೂರಿನಲ್ಲಿ 8 ಮಂದಿಗೆ ಮಹಾಮಾರಿ ಸೋಂಕು ವಕ್ಕರಿಸಿಕೊಂಡಿದೆ. 8 ಜನರ ಪೈಕಿ ಇಬ್ಬರು ಬಾಲಕರು ಇದ್ದಾರೆ. ಆರು ಜನರು ಮುಂಬಯಿನಿಂದ ಬಂದವರಿದ್ದಾರೆ. ಕರಾವಳಿಯ […]

ರಾಜ್ಯ

ಮಂಡ್ಯದಲ್ಲಿ ಮೂರು ಪೊಲೀಸ್ ಠಾಣೆ ಸೀಲ್ ಡೌನ್

ಮಂಡ್ಯ prajakiran.com : ಕೆ.ಆರ್.ಪೇಟೆ ಟೌನ್ ಪೋಲಿಸ್ ಠಾಣೆಯ  ಮುಖ್ಯಪೇದೆಯೊಬ್ಬರಿಗೆ ಕರೋನಾ ಪಾಸಿಟೀವ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ  ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಗಳನ್ನು  ಸೀಲ್ ಡೌನ್ ಮಾಡಲಾಗಿದೆ.  ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ ಕೆಲಸಗಳು ಪರ್ಯಾಯವಾಗಿ ಕಿಕ್ಕೇರಿ ಠಾಣೆಯಲ್ಲಿ ನಡೆಯಲಿವೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು 30 ಜನ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೋವಿಡ್-19 ಕರ್ತವ್ಯಕ್ಕೆ ಧಕ್ಕೆ ಉಂಟಾಗದಂತೆ ವಿಶೇಷ […]

ರಾಜ್ಯ

ಯೋಗೀಶ್‌ಗೌಡ ಕೊಲೆ ಪ್ರಕರಣ : ಎಂಟು ಆರೋಪಿಗಳ ವಿರುದ್ದ ಸಿಬಿಐ ಚಾರ್ಜ್ ಶೀಟ್  

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಮತಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು 8 ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಧಾರವಾಡ ನ್ಯಾಯಾಲಯಕ್ಕೆ ಈ ಕುರಿತು ಹಲವು ಪುಟಗಳ ದಾಖಲೆ ಸಲ್ಲಿಸಿರುವ ಅಧಿಕಾರಿಗಳು, 8 ಜನ ಕೊಲೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು,  ಒಬ್ಬ ಆರೋಪಿ ಮಾತ್ರ ಜಾಮೀನಿನ ಮೇಲೆ ಹೊರಗಡೆಯಿದ್ದು, ಇನ್ನೂಳಿದ 7 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರೆಲ್ಲರೂ ಧಾರವಾಡ, ರಾಮನಗರ, ಮಂಡ್ಯ,ಕೊಡಗು […]

ರಾಜ್ಯ

ಬೆಳಗ್ಗೆ 116, ಸಂಜೆ ಮತ್ತೆ 27 ಪ್ರಕರಣ ಪತ್ತೆ

ಬೆಂಗಳೂರು prajakiran.com : ಕರುನಾಡಿನಲ್ಲಿ ಗುರುವಾರವೂ ಕರೋನಾ ಸೋಂಕಿತರ ಸಂಖ್ಯೆ  ಗಣನೀಯವಾಗಿ ಹೆಚ್ಚಿದ್ದು, ಒಂದೇ ದಿನ ಬರೋಬ್ಬರಿ 143 ಪ್ರಕರಣಗಳು ದಾಖಲಾಗಿವೆ. ಬೆಳಗ್ಗೆ 116  ಪ್ರಕರಣಗಳು ಬಂದಿದ್ದರೆ ಸಂಜೆ  ಮತ್ತೆ 27 ಪ್ರಕರಣಗಳು ದೃಢ ಪಟ್ಟಿದ್ದು, ಆ ಮೂಲಕ ರಾಜ್ಯದ ಕರೋನಾ ಸೋಂಕಿತರ ಸಂಖ್ಯೆ 1605 ಕ್ಕೆ ಏರಿಕೆಯಾದಂತಾಗಿದೆ. ಮಂಡ್ಯ 33, ಉಡುಪಿ 26, ಹಾಸನ 13, ಬಳ್ಳಾರಿ 11, ಬೆಳಗಾವಿ 9, ಉತ್ತರಕನ್ನಡ 7, ಬೆಂಗಳೂರು 6,ಶಿವಮೊಗ್ಗ6, ದಕ್ಷಿಣ ಕನ್ನಡ 5 , ಉತ್ತರ ಕನ್ನಡ […]

ರಾಜ್ಯ

ಧಾರವಾಡದ ಐವರು ಕರೊನಾ ಸೋಂಕಿತರ ಪ್ರಯಾಣ ಮಾಹಿತಿ

ಧಾರವಾಡ prajakiran.com : ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ  ಐವರಲ್ಲಿ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು‌ ಅವರನ್ನು  ಪಿ – 1505 , ಪಿ- 1506 , ಪಿ – 1507 , ಪಿ – 1508 ಹಾಗೂ ಪಿ – 1509 ಎಂದು ಗುರುತಿಸಲಾಗಿದೆ. ಈ ಐದು ಜನರ  ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.  ಪಿ- 1505 ಹಾಗೂ ಪಿ – 1506  ಇವರು ಹುಬ್ಬಳ್ಳಿ ಶಹರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿರುತ್ತಾರೆ. ಇವರು […]

ರಾಜ್ಯ

ಅನ್ಯರಾಜ್ಯಗಳಿಂದ ಬೆಳಗಾವಿ ಬಸ್ ನಿಲ್ದಾಣಕ್ಕೆ ಬಂದ ಮೂವರು ಕ್ವಾರಂಟೈನಿಗಳು

ಬೆಳಗಾವಿ prajakiran.com : ಅನ್ಯರಾಜ್ಯಗಳಿಂದ ಮೂವರು ಕ್ವಾರಂಟೈನಿಗಳು ನೇರವಾಗಿ ಬಸ್ ನಿಲ್ದಾಣಕ್ಕೆ ಬಂದ ಕಾರಣ ಕೆಲಕಾಲ ಆತಂಕ ನಿರ್ಮಾಣವಾದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಮೂವರ ಕೈಯಲ್ಲಿ ಕ್ವಾರಂಟೈನ್ ಸೀಲ್ ಕಂಡ ಬಸ್ ನಿಲ್ದಾಣದಲ್ಲಿದ್ದ ಜನ ಭಯಭೀತರಾಗಿ ಆತಂಕಗೊಂಡಿದ್ದರು. ಇದರಿಂದಾಗಿ ಬೆಳಗಾವಿ ಬಸ್ ನಿಲ್ದಾಣದಲ್ಲಿ ಇದ್ದ ಥರ್ಮಲ್ ಸ್ಕ್ರೀನಿಂಗ್ ಮಾಡುವ ಸಿಬ್ಬಂದಿಗೆ ಕೂಡ ಗಲಿಬಿಲಿಗೊಂಡಿದ್ದರು. ಮಹಾರಾಷ್ಟ್ರದ ವೀಟಾದಿಂದ, ಪೂನಾದಿಂದ ಒಬ್ಬ ಹಾಗೂ  ಗೋವಾದಿಂದ ಒಬ್ಬರು ಬಂದಿದ್ದರು. ಥರ್ಮಲ್ ಸ್ಕ್ರೀನಿಂಗ್ ವೇಳೆ ಒಬ್ಬನಿಗೆ 103 ಟೆಂಪರೇಚರ್ ಕಂಡು ಬಂದಿದ್ದರಿಂದ […]

ರಾಜ್ಯ

ಕಲ್ಲಿದ್ದಲು ಗಣಿಗಾರಿಕೆ ಖಾಸಗೀಕರಣದಿಂದ ಹಗಲು ದರೋಡೆ ಎಂದ ಎಸ್ ಆರ್ ಹಿರೇಮಠ

ಧಾರವಾಡ prajakiran.com : ಕಲ್ಲಿದ್ದಲು ಗಣಿಗಾರಿಕೆ ಖಾಸಗೀಕರಣ ಮಾಡಿದರೆ ಹಗಲು ದರೋಡೆ ಮಾಡಲು ಅನುಕೂಲವಾಗುತ್ತದೆ  ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಬಗ್ಗೆ ಹುಬ್ಬಳ್ಳಿಯವರೇ ಆಗಿರುವ ಕೇಂದ್ರದ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಪ್ರಹ್ಲಾದ ಜೋಶಿ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ರಾಷ್ಟ್ರದಾದ್ಯಂತ ಕಲ್ಲಿದ್ದಲು ಗಣಿಗಾರಿಕೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಗುಡುಗಿದರು. ಈ ಹಿಂದೆ ಬಳ್ಳಾರಿಯಲ್ಲಿ […]

ರಾಜ್ಯ

ಎಸಿಬಿ ದಾಳಿ : ಲಂಚಕ್ಕೆ ಬೇಡಿಕೆಯಿಟ್ಟ ಸಹಾಯಕ ಸಂಚಾರಿ ವ್ಯವಸ್ಥಾಪಕರ ಬಂಧನ

ವಿಜಯಪುರ prajakiran.com :  ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗೆ ಸಂಬಂಧಪಟ್ಟಂತೆ 20 ಸಾವಿರ  ರೂ. ಲಂಚಕ್ಕೆ ಬೇಡಿಕೆ ಇಟ್ಟು, 10 ಸಾವಿರ   ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಗುಮ್ಮಟನಗರಿ ವಿಜಯಪುರದಲ್ಲಿ ನಡೆದಿದೆ. ಫೀರ್ಯಾದಿದಾರರ ದೂರಿನ ಆಧಾರದ ಮೇಲೆ ಸಹಾಯಕ ಸಂಚಾರ ವ್ಯವಸ್ಥಾಪಕ ರಾಜಶೇಖರ ಗಜಾಕೋಶ ಇವರನ್ನು ಹಣ ಸ್ವೀಕರಿಸುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ರೆಡ್‍ಹ್ಯಾಂಡ್ ಆಗಿ ಹಿಡಿದು, ಸದರಿಯವರನ್ನು ದಸ್ತಗಿರಿ […]

ರಾಜ್ಯ

ವಿದ್ಯಾನಗರಿ ಧಾರವಾಡ ಜಿಲ್ಲೆಯ ಐವರಿಗೆ ಮತ್ತೆ ಕರೋನಾ ಸೋಂಕು

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯ ಐವರಿಗೆ ಮತ್ತೆ ಕರೋನಾ ಸೋಂಕು ತಗುಲಿರುವುದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್  ತಿಳಿಸಿದೆ. ಸೋಂಕಿತರನ್ನು ಪಿ 1505 (ಆರು ವರ್ಷದ ಬಾಲಕಿ), ಪಿ-1506 (29 ವರ್ಷದ ಮಹಿಳೆ),ಪಿ 1507 (9 ವರ್ಷದ ಬಾಲಕಿ), ಪಿ-1508 (24 ವರ್ಷದ ಮಹಿಳೆ), ಪಿ 1509 (25 ವರ್ಷದ ಪುರುಷ) ಎಂದು ಅವರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಅವರ ಪೈಕಿ ಪಿ-1505 […]