ಅಂತಾರಾಷ್ಟ್ರೀಯ

ನಿಸರ್ಗ ಚಂಡಮಾರುತ ಎಫೆಕ್ಟ್  : ಮಹಾರಾಷ್ಟ್ರದಲ್ಲಿ ಒಂದು ಬಲಿ

ನವದೆಹಲಿ prajakiran.com : ನಿಸರ್ಗ ಚಂಡಮಾರುತಕ್ಕೆ ಗುಜರಾತ್, ಮಹಾರಾಷ್ಟ್ರ ನಲುಗಿ ಹೋಗಿದ್ದು, ಹತ್ತು ಹಲವು ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದ್ದು, ಮಹಾರಾಷ್ಟ್ರದಲ್ಲಿ ಒಬ್ಬ ಬಲಿಯಾಗಿದ್ದಾನೆ. ಉತ್ತರಕರ್ನಾಟಕ ಭಾಗಕ್ಕೆ ಇದರ ಸ್ಪರ್ಶವಾಗಿದ್ದು, ಉತ್ತರಕನ್ನಡ, ಬೆಳಗಾವಿ ಹಾಗೂ   ಧಾರವಾಡ ಜಿಲ್ಲೆಯಲ್ಲೂ ಹಾದು ಹೋಗಿದೆ. ವಾಯು ಭಾರ ಕುಸಿತದಿಂದ ಬೆಳಗ್ಗೆಯಿಂದಲೇ ಎರಡು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ಆದರೆ ಈ ವರ್ಷದ ಮೋದಲ ಪ್ರಕೃತಿ ವಿಕೋಪದಿಂದ ಉತ್ತರ ಕರ್ನಾಟಕ ತಪ್ಪಿಸಿಕೊಂಡಿದೆ ಎಂದು ಹವಾಮಾನ ತಜ್ಞ ಆರ್ […]

ಅಂತಾರಾಷ್ಟ್ರೀಯ

ಪ್ರಧಾನಿ ಮೋದಿ ಗುಣಗಾನ ಮಾಡಿದ ಸಿಎಂ ಬಿಎಸ್ ವೈ 

ಬೆಂಗಳೂರು prajakiran.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಮುಕ್ತಿ ಹಾಕಲು ಅನೇಕ ಕಾರ್ಯಕ್ರಮ ನೀಡಿದ್ದಾರೆ.  ಜಾಗತೀಕ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇಶದ ಏಕತೆಗಾಗಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ 370 ರದ್ದು, ಒಂದು ದೇಶ ಒಂದು ರೇಶನ್ ಕಾರ್ಡ್, ರಾಮಮಂದಿರ ತೀರ್ಪು, ತ್ರಿವಳಿ ತಲಾಖ್ ರದ್ದು ಸೇರಿ ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೋದಿಯವರು ಎರಡನೇ ಅವಧಿಯ ಮೊದಲ ಒಂದು […]

ಅಂತಾರಾಷ್ಟ್ರೀಯ

ರಾಜ್ಯದಲ್ಲಿ ಒಂದೇ ದಿನ 3 ಸಾವು : ದೇಶದಲ್ಲಿ 170 ಜನರ ಬಲಿ

 ನವದೆಹಲಿ prajakiran.com : ರಾಜ್ಯದಲ್ಲಿ ಕರೋನಾ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಅವಧಿಯಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ರಾಯಚೂರಿನ 69 ವರ್ಷದ ಮಹಿಳೆ ಕರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಅದೇ ರೀತಿ ಬೀದರನ 49 ವರ್ಷದ ಪುರುಷ ಕೂಡ ಸಾವನ್ನಪ್ಪಿದ್ದಾರೆ. ಇನ್ನು ಗುಮ್ಮಟನಗರಿ ವಿಜಯಪುರದಲ್ಲಿ ಸಾವು ಸಂಭವಿಸಿದ್ದು, ಅಲ್ಲಿ 82 ವರ್ಷದ ವೃದ್ದ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾನೆ. ದೇಶದಲ್ಲಿ ಕೂಡ ಕರೋನಾದಿಂದ ಬಳಲಿ ಬೆಂಡಾಗಿ […]

ಅಂತಾರಾಷ್ಟ್ರೀಯ

ಸ್ವಾತಂತ್ರ್ಯವೀರ ಸಾರ್ವಕರ್ ಫೇಸ್ ಬುಕ್ ಲೈವ್ ಕಾರ್ಯಕ್ರಮ ಮೇ 28ರಂದು

ಮುಂಬಯಿ prajakiran.com : ಸ್ವಾತಂತ್ರ್ಯವೀರ ಸಾರ್ವಕರ್ ಅವರ 137 ನೇ ಜನ್ಮದಿನದ ಅಂಗವಾಗಿ ಮುಂಬಯಿಯ ಪ್ರತಿಷ್ಠಿತ ರಾಮಭಾವು ಮ್ಹಾಳಗಿ ಪ್ರಭೋದಿನಿ (ಆರ್ ಎಂಪಿ ) ಹಾಗೂ ಸಾರ್ವಕರ್ ದರ್ಶನ ಪ್ರತಿಷ್ಠಾನ ವತಿಯಿಂದ ಮೇ 28ರಂದು ಸಂಜೆ 5ಗಂಟೆಗೆ ಫೇಸ್ ಬುಕ್ ಲೈವ್  https://www.facebook.com/rmponweb.org.  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸ ತಜ್ಞ ಹಾಗೂ ಸಾರ್ವಕರ್ ಇಕೋ ಫ್ರಮ್ ಫಾರಗಟನ್ ಫಾಸ್ಟ್ ಲೇಖಕ ಡಾ . ವಿಕ್ರಮ ಸಂಪತ್ ಅವರು ಸಭಿಕರನ್ನುದ್ದೇಶಿಸಿ, ಟೈಮ್ ಲೆಸ್ ಸಾರ್ವಕರ್ ಹಾಗೂ ಎ […]

ಅಂತಾರಾಷ್ಟ್ರೀಯ

ನಬಾರ್ಡ್ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅಧಿಕಾರ ಸ್ವೀಕಾರ

ಬೆಂಗಳೂರು prajakiran.com  ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್)ನ ಅಧ್ಯಕ್ಷರಾಗಿ ಜಿ.ಆರ್.ಚಿಂತಲ ಅವರು ಬೆಂಗಳೂರಿನಲ್ಲಿರುವ ನಬಾರ್ಡ್‍ನ ಕೇಂದ್ರ ಕಚೇರಿಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು.  ಇದುವರೆಗೆ ಚಿಂತಲ ಅವರು ನಬಾರ್ಡ್‍ನ ಅಂಗಸಂಸ್ಥೆಯಾಗಿರುವ ಎನ್‍ಎಬಿಎಫ್‍ಐಎನ್‍ಎಸ್‍ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಚಿಂತಲ ಅವರು ನವದೆಹಲಿಯಲ್ಲಿರುವ ದೇಶದ ಪ್ರತಿಷ್ಠಿತ ಇಂಡಿಯನ್ ಅಗ್ರಿಕಲ್ಚರ್ ರೀಸರ್ಚ್ ಇನ್‍ಸ್ಟಿಟ್ಯೂಟ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಬಾರ್ಡ್ ಕೇಂದ್ರ ಕಚೇರಿಯಲ್ಲಿ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.  ಇದಲ್ಲದೇ, ಅವರು ಮುಂಬೈ, ಅಂಡಮಾನ್ & ನಿಕೋಬಾರ್, ಹೈದ್ರಾಬಾದ್, ಚಂಡೀಘಡ, ಲಕ್ನೋ, ನವದೆಹಲಿ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿರುವ ಪ್ರಾದೇಶಿಕ ಕಚೇರಿಗಳಲ್ಲಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.  ಹೈದ್ರಾಬಾದ್‍ನ ಅಗ್ರಿ-ಸಿನೆಸ್ ಫೈನಾನ್ಸ್ ಲಿಮಿಟೆಡ್‍ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರು, ಲಕ್ನೋದಲ್ಲಿರುವ ಗ್ರಾಮೀಣಾಭಿವೃದ್ಧಿ ಬ್ಯಾಂಕರ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಮಾಡುವ ಬಗ್ಗೆ ರೂಪುರೇಷೆಯನ್ನು 2006 ರಲ್ಲಿ ಸಿದ್ಧಪಡಿಸಿದ್ದರು. Share on: WhatsApp