upsc topers
ಅಂತಾರಾಷ್ಟ್ರೀಯ

ರಾಜ್ಯದ 37 ಅಭ್ಯರ್ಥಿಗಳು ಯುಪಿಎಸ್ಸಿಯಲ್ಲಿ ಅತ್ಯುತ್ತಮ ಸಾಧನೆ

 ನವದೆಹಲಿ Prajakiran.com : ದೇಶದ ಅತ್ಯುನ್ನತ ನಾಗರಿಕ ಸೇವೆಗಳ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)  ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ.ಅದರಲ್ಲಿ ರಾಜ್ಯದ 37ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಟಾಪ್– 10 ಪಟ್ಟಿಯಲ್ಲಿ ಮೂವರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಹಲವರು  ಇದ್ದಾರೆ. 2019 ಸಾಲಿನಲ್ಲಿ ಒಟ್ಟು 829 ಅಭ್ಯರ್ಥಿಗಳು ವಿವಿಧ ನಾಗರೀಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಐಎಎಸ್​ಗೆ(ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) 180, ಐಎಫ್​ಎಸ್ (ಇಂಡಿಯನ್ ಫಾರಿನ್ ಸರ್ವೀಸ್) 24, ಐಪಿಎಸ್ (ಇಂಡಿಯನ್ ಪೊಲೀಸ್ […]

raghavendra swamiji
ಅಂತಾರಾಷ್ಟ್ರೀಯ

ಶ್ರೀಗುರುರಾಘವೇಂದ್ರ ಸ್ವಾಮೀಜಿಗಳ 349ನೇ ಆರಾಧನಾ ಮಹೋತ್ಸವ

ಮಂತ್ರಾಲಯ prajakiran.com : ನಾಡಿನ ಕೋಟ್ಯಾಂತರ ಭಕ್ತರ ಆರಾದ್ಯದೈವವಾಗಿರುವ  ಶ್ರೀಗುರುರಾಘವೇಂದ್ರ ಸ್ವಾಮೀಜಿಗಳ 349ನೇ ಆರಾಧನಾ ಮಹೋತ್ಸವ ಸೋಮವಾರದಿಂದ ಆರಂಭವಾಗಿದೆ. ತುಂಗಭದ್ರ ನದಿಯ ದಂಡೆಯ ಮೇಲಿರುವ  ಪುಣ್ಯಕ್ಷೇತ್ರವಾದ ಮಂತ್ರಾಲಯದಲ್ಲಿ ಪುಣ್ಯಸ್ನಾನ ಮಾಡಿ ಗುರುಗಳ ಆರ್ಶೀವಾದ ಪಡೆದು, ಅವರ ಸನ್ನಿಧಾನದಲ್ಲಿ ಕೆಲವು ಹೊತ್ತು ಕುಳಿತರೆ ಸಾಕು, ರಾಯರ ಆರ್ಶೀವಾದದ ಫಲವಾಗಿ ಸಕಲ ಸಂಕಷ್ಟಗಳು ನಿವಾರಣೆ, ಸನ್ಮಮಂಗಲವಾಗುವುದು ಭಕ್ತರ ಇಷ್ಟಾರ್ಥ ಸಿದ್ದಿಸುವುದು ವಾಡಿಕೆ. ಕರೋನಾ ಸಂಕಷ್ಟದ ಹಿನ್ನಲೆಯಲ್ಲಿ ಈ ಬಾರಿ ಭಕ್ತರ ದಂಡು ಸೇರುವುದು ಬಹುತೇಕ ಕಡಿಮೆ ಎನ್ನಲಾಗಿದೆ. ಹೀಗಾಗಿ ರಾಜ್ಯದ […]

amit sha and bsy
ಅಂತಾರಾಷ್ಟ್ರೀಯ

ಕೇಂದ್ರ ಗೃಹಸಚಿವ ಅಮಿತ್ ಶಾ, ಸಿಎಂ ಬಿ.ಎಸ್. ಯಡಿಯೂರಪ್ಪಗೂ ಕರೋನಾ

ನವದೆಹಲಿ/ ಬೆಂಗಳೂರು prajakiran.com : ದೇಶದ್ಯಾಂತ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ದೇಶದ ಗಣ್ಯಾತೀ ಗಣ್ಯರನ್ನು ಕೂಡ ಬಿಡುತ್ತಿಲ್ಲ. ಬಾಲಿವುಡ್ ನಟಅಮಿತಾಬ ಬಚ್ಚನ್, ಅಭಿಷೇಕ್ ಬಚ್ಚನ್ ಸೊಸೆ ಐಶ್ವರ್ಯ ರೈ ಬಚ್ಚನ್ ನಂತರ ಇದೀಗ ಕೇಂದ್ರ ಗೃಹ ಸಚಿವಅಮಿತ್ ಶಾ ಹಾಗೂ ರಾಜ್ಯದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ವ್ಯಾಪಿಸಿದೆ. ಕೇಂದ್ರ ಗೃಹ ಸಚಿವಅಮಿತ್ ಶಾ ಅವರಿಗೆ ಕರೋನಾ ಪಾಸಿಟಿವ್ ಇರುವುದು ದೃಢಪಟ್ಟ ಬೆನ್ನಲ್ಲೇ ಅವರು ನವದೆಹಲಿಯ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ […]

ಅಂತಾರಾಷ್ಟ್ರೀಯ

ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಮರ್ ಸಿಂಗ್ ಇನ್ನಿಲ್ಲ

ನವದೆಹಲಿ prajakiran.com : ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯ ಸಭಾ ಸದಸ್ಯರಾಗಿರುವ ಅಮರ್ ಸಿಂಗ್ (64) ಅವರು ವಿಧಿವಶರಾಗಿದ್ದಾರೆ. ಅವರು ಕಳೇದ ಆರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗಲಾಗಿತ್ತು.ಆದರೆ ಅವರು ಅಲ್ಲಿ ಚಿಕಿತ್ಸೆ ಫಲಿಸದೆ  ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಮ್ ಸಿಂಗ್ ಯಾದವರಅವರ ದೀರ್ಘ ಕಾಲದ ಒಡನಾಡಿಯಾಗಿದ್ದರು. ಆನಂತರಅವರ ಜೊತೆಗೆ ಸಂಬಂಧ […]

ಅಂತಾರಾಷ್ಟ್ರೀಯ

ಕ್ರಿಮಿನಲ್ ಮೊಕದ್ದಮೆ ಮರು ಪರಿಶೀಲಿಸುಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ ಹಿರೇಮಠ

ಧಾರವಾಡ prajakiran.com : ಸುಪ್ರೀಂಕೋರ್ಟನ ಹಿರಿಯ ವಕೀಲರಾದ ಪ್ರಶಾಂತ ಭೂಷಣ ಅವರ ಮೇಲೆ ಕಾನೂನು ನಿಂದನೆ ಕುರಿತು ಕ್ರಿಮಿನಲ್ ಮೊಕದ್ದಮೆ ಹಾಕಿರುವುದನ್ನು ಸುಪ್ರೀಂ ಕೋರ್ಟ ಮರು ಪರಿಶೀಲಿಸಬೇಕು ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಮುಖ್ಯಸ್ಥ ಎಸ್.ಆರ್.ಹಿರೇಮಠ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶೋಷಿತ ಜನರ ಹಕ್ಕುಗಳನ್ನು ಎತ್ತಿ ಹಿಡಿಯುವ ಹಾಗೂ ಸಮಾಜ ಸ್ವಾಸ್ಥ್ಯ ಕಾಪಾಡಲು ಭೂಷಣ ಅವರು ಹೋರಾಡುತ್ತಿದ್ದಾರೆ. ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ಸರಿಯಲ್ಲ ಎಂದು ಹಿರೇಮಠ ಹೇಳಿದರು. ಇಂತಹ ಘಟನೆಗಳು […]

ಅಂತಾರಾಷ್ಟ್ರೀಯ

ಕೊನೆಗೂ ಭಾರತದ ವಾಯುನೆಲೆಗೆ ಬಂದಿಳಿದ ಐದು ರಫೇಲ್ ಯುದ್ದ ವಿಮಾನ

ನವದೆಹಲಿ prajakiran.com :  ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ ದೇಶದ ಜನತೆಗೆ ಕುತೂಹಲ ಕೆರಳಿಸಿದ್ದ ರಫೇಲ್ ಯುದ್ದ ವಿಮಾನ ಕೊನೆಗೂ ನಿರೀಕ್ಷೆಯಂತೆ ಭಾರತದ ವಾಯುನೆಲೆ ಪ್ರದೇಶವಾದ ಹರಿಯಾಣದ ಅಂಬಾಲಗೆ ಬುಧವಾರ ಬಂದಿಳಿದವು. ಎರಡು ಸುಖೋಯಿ ಯುದ್ದವಿಮಾನಗಳು ಐದು ರಫೇಲ್ ಯುದ್ದ ವಿಮಾನಗಳಿಗೆ ಎಸ್ಕಾರ್ಟ್ ಮಾಡಿ ಕೊಂಡು ಅದ್ದೂರಿ ಸ್ವಾಗತ ಕೋರಿದವು. ಬಾನಂಗಳದಲ್ಲಿ ಅವರು ಸಾಲಾಗಿ ಹಾರಾಟ ಮಾಡಿಕೊಂಡು ಬರುವ ದೃಶ್ಯಗಳನ್ನು ನೋಡಿ ಭಾರತೀಯರು ಕಣ್ಣುತುಂಬಿಸಿಕೊಂಡರು. ಭಾರತದ ನೌಕಾಪಡೆಯಿಂದ ಜಲವಂದನೆಯ ಮೂಲಕ ಸ್ವಾಗತಕೋರಲಾಯಿತು. ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್ […]

ಅಂತಾರಾಷ್ಟ್ರೀಯ

ದೆಹಲಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಭೇಟಿಯಾದ ಸಚಿವೆ ಶಶಿಕಲಾ ಜೊಲ್ಲೆ ….!

ನವದೆಹಲಿ prajakiran.com : ಸಚಿವ ಶಶಿಕಲಾ ಜೊಲ್ಲೆ ತಮ್ಮ ಪತಿ ಹಾಗು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜೊತೆಗೆ ದಿಢೀರ ಆಗಿ ದೆಹಲಿ ದೌಡಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿರುವ ಡಿಸಿಎಂ ಲಕ್ಷ್ಮಣ ಸವದಿಅವರನ್ನು ಭೇಟಿಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇದರಿಂದಾಗಿ ರಾಜ್ಯ ಬಿಜೆಪಿಯಲ್ಲಿ ಪಕ್ಷದ ಆಂತರಿಕ ಚಟುವಟಿಕೆಗಳು ಇನ್ನಷ್ಟು ಗರಿ ಗೆದರುವಂತೆ ಮಾಡಿವೆ. ಹಾಗಿದ್ದರೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಕುರಿತು ಬೆಳವಣಗೆಗಳು […]

ಅಂತಾರಾಷ್ಟ್ರೀಯ

ಮುಂದಿನ ಮೂರು ವರ್ಷ ಕಾಲ ಯಡಿಯೂರಪ್ಪ ನಮ್ಮ ಸಿಎಂ ಎಂದ ಲಕ್ಷ್ಮಣ ಸವದಿ…!

ನವದೆಹಲಿ prajakiran.com : ರಾಜ್ಯ ರಾಜಕೀಯದಲ್ಲಿ ಯಾವುದೇ ಮಹತ್ವದ ಬದಲಾವಣೆ ಇಲ್ಲ. ಮುಂದಿನ ಮೂರು ವರ್ಷಗಳ ಕಾಲ ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ಸಿಎಂ ಆಗಿರ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಅವರು ಬುಧವಾರ ನವದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಿಗೆ ಭೇಟಿಯಾಗಿ ಸಿಹಿ ಕೊಟ್ಟು […]

ಅಂತಾರಾಷ್ಟ್ರೀಯ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪರ್ವ : ಲಕ್ಷ್ಮಣ ಸವದಿ ಮುಂದಿನ ಸಿಎಂ…!  

ನವದೆಹಲಿ/ಬೆಂಗಳೂರು prajakiran.com : ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ಬಿಡಾರ ಹೂಡಿರುವ ರಾಜ್ಯದ ಡಿಸಿಎಂ ಲಕ್ಷ್ಮಣ ಸವದಿ ಮುಂದಿನ ಮುಖ್ಯಮಂತ್ರಿ ಆಗ್ತಾರಾ ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಇದಕ್ಕೆ ಕಾರಣಅವರು ನಿನ್ನೇ ರಾಜ್ಯ ಸರಕಾರದ ಸಾಧನೆಯಿಂದ ದೂರು ಉಳಿದು ನವದೆಹಲಿಯಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿರುವುದು ಒಂದಡೆಯಾದರೆ, ಇನ್ನೊಂದಡೆ ಅವರು ನಿನ್ನೇ ನಡೆಸಿದ ರಾಜಕೀಯ ಮುಖಂಡರ ಭೇಟಿ ಅಂತಹ ಪ್ರಶ್ನೆ ಹುಟ್ಟು ಹಾಕಿದೆ. ಡಿಸಿಎಂ ಲಕ್ಷ್ಮಣ ಸವದಿ ನಿನ್ನೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ […]

ಅಂತಾರಾಷ್ಟ್ರೀಯ

ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ 12, 87,945ಕ್ಕೆ ಏರಿಕೆ….!

ನವದೆಹಲಿ prajakiran.com : ಭಾರತದಲ್ಲಿ 24 ಗಂಟೆಗಳಲ್ಲಿ 49, 310 ಜನರಿಗೆ ಸೋಂಕು ವಕ್ಕರಿಸಿದ್ದು, 740 ಜನರು ಮರಣವನ್ನಪ್ಪಿದ್ದಾರೆ. ಆ ಮೂಲಕ ದೇಶದ ಕರೋನಾ ಸೋಂಕಿತರ ಸಂಖ್ಯೆ 12, 87,945ಕ್ಕೆ ಏರಿಕೆಯಾಗಿದೆ. ನಿನ್ನೇ ಒಂದೇ ದಿನ ದೇಶದ್ಯಾಂತ 34602 ಜನ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 817209ಜನ ಚೇತರಿಸಿಕೊಂಡಿದ್ದಾರೆ.  ಆದರೆ ಚಿಕಿತ್ಸೆ ಫಲಿಸದೆ ಒಟ್ಟು 30601 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಾರಾಷ್ಟ್ರದಲ್ಲಿಯೇ 3,47,502 ಸೋಂಕಿತರಿದ್ದರೆ, 12854 ಜನ ಸಾವನ್ನಪ್ಪಿದ್ದಾರೆ. ನಂಬರ್ ಸ್ಥಾನದಲ್ಲಿಯೇ ಇದೆ. ತಮಿಳುನಾಡಿನಲ್ಲಿ 192964 ಜನ ಸೋಂಕಿತರಿದ್ದರೆ […]