ಅಂತಾರಾಷ್ಟ್ರೀಯ

ಜೈನಮುನಿಗಳ ಬರ್ಬರ ಹತ್ಯೆ ಖಂಡಿಸಿ, ವರೂರು ನವಗ್ರಹ ತೀರ್ಥಂಕರ ಜೈನಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ ಪ್ರಜಾಕಿರಣ.ಕಾಮ್  : ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನಮುನಿಗಳ ಬರ್ಬರ ಹತ್ಯೆಯನ್ನು ಖಂಡಿಸಿ, ವರೂರು ನವಗ್ರಹ ತೀರ್ಥಂಕರ ಜೈನ‌ಕ್ಷೇತ್ರದ ಜೈನಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸರಕಾರ ಈ ಕೂಡಲೇ ಹತ್ಯಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾಋ. ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಸ್ವಾಮಿಗಳು ಸಮಾಜಕ್ಕೆ ಬೇಕಾದ ಮಹಾನ್ ಚೇತನವಾಗಿದ್ದಾರೆ ಸ್ವಾಮಿಗಳ ಆರೋಗ್ಯ, ಜೀವನ‌ ನಮಗೆಲ್ಲರಿಗೂ ಮಾದರಿಯಾಗಿದ್ದು, ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಸ್ವಾಮಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ […]

ಅಂತಾರಾಷ್ಟ್ರೀಯ

ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸಿಸ್ ಕಂಪನಿಗೆ 78 ಸಾವಿರ ದಂಡ

ಧಾರವಾಡ ಪ್ರಜಾಕಿರಣ.ಕಾಮ್ ಜುಲೈ 07 : ಧಾರವಾಡ ಸರಸ್ವತಪುರದ ವಾಸಿ ಕೇತನ ಚಿಕ್ಕಮಠ ಎನ್ನುವ ವಿಧ್ಯಾರ್ಥಿ ತನ್ನ ವಿದ್ಯಾಭ್ಯಾಸಕ್ಕಾಗಿ ರೂ.57,999/- ಹಣಕೊಟ್ಟು ಉತ್ತಮ ಸೌಲಭ್ಯ ಇದೆ ಅನ್ನುವ ಆಸಿಸ್ ಕಂಪನಿಯ, ಆಸಿಸ್ ರಾಗ್-5 ಮೊಬೈಲ್‍ನ್ನು ಜೂನ್ 05, 2021 ರಂದು ಖರೀದಿಸಿದ್ದರು. ಮೊಬೈಲ್ ಖರೀದಿಸಿದ 6 ತಿಂಗಳ ಒಳಗೆ ಅದರಲ್ಲಿ ದೋಷಗಳು ಕಂಡು ಬಂದು ಅದು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಅದಕ್ಕಾಗಿ ದೂರುದಾರ ಸದರಿ ಮೊಬೈಲ್‍ನ್ನು ಆಸಿಸ್ ಕಂಪನಿಯ ಹುಬ್ಬಳ್ಳಿಯ ವಿದ್ಯಾ ನಗರದಲ್ಲಿರುವ ಅಧಿಕೃತ ಸರ್ವಿಸ್ ಸೆಂಟರ್‍ಗೆ […]

ಅಂತಾರಾಷ್ಟ್ರೀಯ

ದೇಶದ ಐದು ಕಡೆಗಳಲ್ಲಿ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ಚಾಲನೆ

ಧಾರವಾಡ ಪ್ರಜಾಕಿರಣ.ಕಾಮ್ : ಪ್ರಧಾನಿ ನರೇಂದ್ರ ಮೋದಿಯವರು ದೇಶದ ಐದು ಕಡೆಗಳಲ್ಲಿ ವಂದೇ ಭಾರತ ಎಕ್ಸಪ್ರೆಸ್ ರೈಲಿಗೆ ಇಂದು ಏಕಕಾಲಕ್ಕೆ ಚಾಲನೆ ನೀಡಿದರು. ಧಾರವಾಡದಿಂದ ಬೆಂಗಳೂರಿಗೆ ರಾಜ್ಯದ ಎರಡನೇ ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚಾರ ಆರಂಭಿಸಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರು ಅತ್ಯಂತ ಕಡಿಮೆ ಅವಧಿಯಲ್ಲಿ ವೇಗವಾಗಿ ಬೆಂಗಳೂರು ತಲುಪಲು ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಭಾಗದ ಜನತೆಗೆ ಈ ಸೌಲಭ್ಯ ಒದಗಿಸಿಕೊಟ್ಟ ಪ್ರಧಾನಮಂತ್ರಿ ‌ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವಿಗೆ ಕೇಂದ್ರ […]

ಅಂತಾರಾಷ್ಟ್ರೀಯ

ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಇಂದಿಗೆ ಎಂಟು ವರ್ಷ…..!

*ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಇಂದಿಗೆ ಎಂಟು ವರ್ಷ…..!?* *ನ್ಯಾಯ ಇಂದಿಗೂ ಮರಿಚಿಕೆ ಕುಟುಂಬದ ಸದಸ್ಯರ ಭಾವನಾತ್ಮಕ ಪತ್ರ ವೈರಲ್* ಧಾರವಾಡ ಪ್ರಜಾಕಿರಣ. ಕಾಮ್ : ಯೋಗೀಶಗೌಡ ಗೌಡರ ಕೊಲೆಯಾಗಿ ಇಂದಿಗೆ ಎಂಟು ವರ್ಷಗಳ ಕಾಲ ಪೂರೈಸಿದೆ. ಆದರೆ ಈವರೆಗೂ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಕುಟುಂಬದ ಸದಸ್ಯರ ಕಣ್ಣೀರ ಅಳಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ಬರೆದ ಭಾವನಾತ್ಮಕ ಪತ್ರದ ಸಾರಾಂಶ ಹೀಗಿದೆ. ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಬಿಜೆಪಿ ಪಕ್ಷದ ಸದಸ್ಯರಾಗಿದ್ದ ದಿವಂಗತ […]

ಅಂತಾರಾಷ್ಟ್ರೀಯ

ಯು.ಪಿ.ಎಸ್.ಸಿ ಟಾಪರ್ ಶೃತಿ ಯರಗಟ್ಟಿಗೆ ಕ್ಲಾಸಿಕ್ ಸಂಸ್ಥೆಯಿಂದ ಸನ್ಮಾನ

ಭರವಸೆ ಕಳೆದುಕೊಳ್ಳದೇ ಮುನ್ನಡೆಯಿರಿ :  ಶೃತಿ ಯರಗಟ್ಟಿ   ಧಾರವಾಡ ಪ್ರಜಾಕಿರಣ.ಕಾಮ್ ನಿಶ್ಚಿತ ಗುರಿ ಈಡೇರಿಕೆಗಾಗಿ ನಿರಂತರ ಪ್ರಯತ್ನ ಹಾಗೂ ತಾಳ್ಮೆಯೂ ಬೇಕು. ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳದೇ ಮುನ್ನಡೆಯಬೇಕೆಂದು ಯು.ಪಿ.ಎಸ್.ಸಿ ಟಾಪರ್ (೩೬೨ ನೇ ರ‍್ಯಾಂಕ್) ಕು. ಶೃತಿ ಯರಗಟ್ಟಿ ಹೇಳಿದರು. ಅವರು ಕ್ಲಾಸಿಕ್ ಕೆಎಎಸ್ ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಿನ ಪತ್ರಿಕೆಗಳನ್ನು ತಪ್ಪದೇ ಓದಬೇಕು. ಪುಸ್ತಕಗಳು, ಸಾಮಾಜಿಕ ಜಾಲತಾಣ, ಸಾಧಕರು, ಹಳೆಯ ಪ್ರಶ್ನೆ ಪತ್ರಿಕೆಗಳು ಮುಂತಾದ ಮೂಲಗಳಿಂದ ಜ್ಞಾನಸಂಪಾದನೆ […]

ಅಂತಾರಾಷ್ಟ್ರೀಯ

ಮಾತಿಗೆ ತಪ್ಪಿರುವ ಕಾಂಗ್ರೆಸ್, ಗ್ಯಾರೆಂಟಿಯಲ್ಲಿ ದೊಖಾ ಎಂದ ಮಾಜಿ ಸಿಎಂ

*ಕಾಂಗ್ರೆಸ್ ನಿಂದ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌* ಬೆಂಗಳೂರು ಪ್ರಜಾಕಿರಣ.ಕಾಮ್ : ಉಚಿತ ಗ್ಯಾರೆಂಟಿ ಯೋಜನೆಗಳ ಜಾರಿಗೊಳಿಸುವ ವಿಚಾರದಲ್ಲಿ ಮಾತಿಗೆ ತಪ್ಪಿರುವ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಗಿದ್ದು, ಗ್ಯಾರೆಂಟಿ ಯೋಜನೆ ಜಾರಿ ಮಾಡಲು ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಜನರಿಗೆ ಬಹಳಷ್ಟು […]

ಅಂತಾರಾಷ್ಟ್ರೀಯ

ಚಾಮರಾಜನಗರದಲ್ಲಿ ಸಣ್ಣ ವಿಮಾನ ಪತನ : ತಪ್ಪಿದ ಅನಾಹುತ, ಪೈಲಟ್ ಗಳು ಪಾರು….!

ಚಾಮರಾಜನಗರ ಪ್ರಜಾಕಿರಣ.ಕಾಮ್ : ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ಸಣ್ಣ ವಿಮಾನವೊಂದು ಪತನಗೊಂಡಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಈ ವಿಮಾನ ಪತನವಾಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದು ಅವರು ಪ್ಯಾರಾಚೂಟ್ ಮೂಲಕ ಪಾರಾಗಿದ್ದಾರೆ. ಪತನವಾದ ವಿಮಾನದ ಅವಶೇಷ ನೋಡಲು ಅಕ್ಕ ಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಇದು ಹೆಚ್ ಎ ಎಲ್ ಗೆ ಸೇರಿದ ಲಘು ಯುದ್ದ ವಿಮಾನ ಎಂದು ಗೊತ್ತಾಗಿದೆ ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು? ಎಂಬ […]

ಅಂತಾರಾಷ್ಟ್ರೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ

ಬೆಂಗಳೂರು ಪ್ರಜಾಕಿರಣ.ಕಾಮ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆಯಾಗಿದ್ದು, ಅವರ ವಿವರಗಳು ಇಂತಿವೆ. ಸಿದ್ದರಾಮಯ್ಯ ಅವರಿಗೆ ಹಣಕಾಸು, ಗುಪ್ತಚರ, ಐಟಿ, ಬಿಟಿ, ಆಡಳಿತ ಸುಧಾರಣೆ ಹಾಗೂ ಹಂಚಿಕೆ ಆಗದೆ ಉಳಿದ ಖಾತೆ, ಡಿ.ಕೆ. ಶಿವಕುಮಾರ್ ಅವರಿಗೆ ಬೃಹತ್‌ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಡಾ. ಜಿ. ಪರಮೇಶ್ವರ ಅವರಿಗೆ ಗೃಹ ಖಾತೆ, ಹೆಚ್.ಕೆ. ಪಾಟೀಲಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ, ಕೆ.ಹೆಚ್. […]

ಅಂತಾರಾಷ್ಟ್ರೀಯ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ 

ಮೊದಲ ಹಂತದಲ್ಲಿ ಹಲವು ಸಚಿವರ ಪ್ರಮಾಣ ವಚನ ಬೆಂಗಳೂರು ಪ್ರಜಾಕಿರಣ.ಕಾಮ್ : ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ  ಅಪಾರ ಜನಸ್ತೋಮದ ಸಮ್ಮುಖದಲ್ಲಿ    ಪ್ರಮಾಣ ವಚನ ಸ್ವೀಕರಿಸಿದರು. ಶನಿವಾರ ಮಧ್ಯಾಹ್ನ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗ್ಲೆಹೋಟ್ ಪ್ರಮಾಣ ವಚನ‌ ಬೋಧಿಸಿದರು. ಇದೇ ವೇಳೆ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಕಾಡಸಿದ್ದೇಶ್ವರ ಮಠದ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೆ ಮೊದಲ ಹಂತದಲ್ಲಿ ಸಚಿವ ಸಂಪಯಟ ದರ್ಜೆ […]

ಅಂತಾರಾಷ್ಟ್ರೀಯ

ನೇತ್ರತಜ್ಞ ಡಾ. ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ

ಬೆಂಗಳೂರು ಪ್ರಜಾಕಿರಣ.ಕಾಮ್ : ಖ್ಯಾತ ನೇತ್ರ ತಜ್ಞರಾದ ಡಾ. ಭುಜಂಗ ಶೆಟ್ಟಿ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ‘ರಿವರ್ಸ್‌ ಡಯಾಬಿಟಿಸ್‌’ ಮೂಲಕ ಮಧುಮೇಹ ಗೆದ್ದ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ (69 ವರ್ಷ) ಇಂದು ಸಂಜೆ 6 ಗಂಟೆಗೆ ಮನೆಯಲ್ಲಿ ಜಿಮ್ ಮಾಡಬೇಕಾದರೆ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸಮೀಪದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯ್ತು ಆದರೆ ಅವರು ಬದುಕುಳಿಯಲಿಲ್ಲ. ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದ ಭುಜಂಗ […]