prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ಅಂತಾರಾಷ್ಟ್ರೀಯ

ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಕರ್ನಾಟಕ ನೆನಪಾಗಲ್ವಾ ?

*ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ? ಸಿ.ಎಂ ಪ್ರಶ್ನೆ* *ಪ್ರವಾಹ ಬಂದಾಗಲೂ ಬರಲಿಲ್ಲ, ಬರಗಾಲ ಬಂದಾಗಲೂ ಬರಲಿಲ್ಲ: ಚುನಾವಣೆ ಬಂತು ಓಡಿ ಬಂದ್ರಿ. ಸುಳ್ಳು ಹೇಳಿ ಹೋದ್ರಿ* *ಬಾಂಡ್ ಗಳ ಮೂಲಕ ಸಂಗ್ರಹಿಸಿದ 7600 ಕೋಟಿಗೆ ನೀವು ತೆರಿಗೆ ಕಟ್ಟಿಲ್ಲ? ಇದು ಕ್ರೈಂ ಅಲ್ವೇ? ಈ ಕ್ರೈಂನ ಹೊಣೆ ಹೊರುವವರು ಯಾರು?: ಉತ್ತರ ಕೊಡಿ ಮೋದಿಯವರೇ: ಸಿ.ಎಂ.ಆಗ್ರಹ* *ಯಾವ‌ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬಂದ್ರಿ? ಇಷ್ಟೊಂದು ಸುಳ್ಳು ಹೇಳೋಕೇ ಬಂದ್ರಾ ಇಲ್ಲಿಗೆ? […]

ಅಂತಾರಾಷ್ಟ್ರೀಯ

ರಾಜಕೀಯ ಬೇಕಾದ್ರೆ ಪೀಠ ತ್ಯಜಿಸಿ ಎಂದ ದಿಂಗಾಲೇಶ್ವರ ಶ್ರೀ ಭಕ್ತರು….!

*ರಾಜಕೀಯ ಬೇಕಾದ್ರೆ ಪೀಠ ತ್ಯಜಿಸಿ* *ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗೆ ಭಕ್ತರ ಗುಡುಗು* *ಚುನಾವಣಾ ಕಣದಿಂದ ಹಿಂದೆ ಸರಿಯಿರಿ..ಇಲ್ಲವೇ ಶೀಘ್ರವೇ ಮುಂದಿನ‌ ನಿರ್ಧಾರ* ಗದಗ (ಶಿರಹಟ್ಟಿ) ಪ್ರಜಾಕಿರಣ.ಕಾಮ್ : ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಏ. 18ರಂದು ನಾಮ ಪತ್ರ ಸಲ್ಲಿಸುವುದಾಗಿ ಘೋಷಿಸಿದ ಬೆನ್ನಹಿಂದೆಯೇ ಅವರ ವಿರುದ್ಧ ಶಿರಹಟ್ಟಿ ಭಕ್ತರು ತಿರುಗಿ ಬಿದ್ದಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿಯಾಗಿರೋ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಶುಕ್ರವಾರ ಸಭೆ ಸೇರಿದ ಸಾವಿರಾರು ಭಕ್ತರು […]

ರಾಜ್ಯ

ಧಾರವಾಡದ ರೌಡಿಶೀಟರ್‌ ಓಂಕಾರ್ ರಾಯಚೂರು ಸೇರಿ ನಾಲ್ವರ ಬಂಧನ

*ಧಾರವಾಡ ಗ್ರಾಮೀಣ ಪೊಲೀಸ್ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್‌ ಓಂಕಾರ್ ರಾಯಚೂರು ಹಾಗೂ ಮೂವರ ಬಂಧನ* *ರಾಮರಾಜ್ಯ ಹೆಸರಿನಲ್ಲಿ ಗ್ಯಾಂಗ್ ಕಟ್ಟಿದ್ದ ಭೂಪ* *ಈ ಹಿಂದೆ ರಾಜಿಸಂಧಾನಕ್ಕೆ ಅಂತ ಕರೆದು ಓಣಿಯ ಯುವಕ ಅಜಯ್ ಪಠಾರೆ ಮೇಲೆ ಹಲ್ಲೆ ಮಾಡಿದ್ದ* ಧಾರವಾಡ ಪ್ರಜಾಕಿರಣ.ಕಾಮ್ : ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಅನ್ನೋ ರೀತಿಯಲ್ಲಿ ಧಾರವಾಡದಲ್ಲಿ ಹಿಂದುತ್ವ, ಅದು, ಇದು ಅಂತ ರಾಮರಾಜ್ಯ ಹೆಸರಿನಲ್ಲಿ ಗ್ಯಾಂಗ್ ಕಟ್ಟಿ ಮೆರೆಯುತ್ತಿದ್ದ ಭೂಪ ಇದೀಗ ಧಾರವಾಡ ಗ್ರಾಮೀಣ ಪೊಲೀಸರ ಅತಿಥಿಯಾಗಿದ್ದಾನೆ. […]

ರಾಜ್ಯ

ಧಾರವಾಡ : ಟ್ಯೂಶನ್‌ಗೆ ಹೋಗಿಲ್ಲ, ಮನೆಯಲ್ಲೇ ಓದಿ ಶೇ 94ರಷ್ಟು ಫಲಿತಾಂಶ

*ಟ್ಯೂಶನ್‌ಗೆ ಹೋಗಿಲ್ಲ, ಮನೆಯಲ್ಲೇ ಓದಿ ಶೇ 94ರಷ್ಟು ಫಲಿತಾಂಶ: ಪತ್ರಕರ್ತ ಪ್ರಸನ್ನ ಕರ್ಪೂರ ಮಗಳ‌ ಸಾಧನೆ* ಹೀಗೆ ಓದಬೇಕು. ಇಂತಿಷ್ಟೇ ಹೊತ್ತು ಓದಬೇಕು. ಈ ತರಹದ ಯಾವುದೇ ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಂಡು ಓದಿದವಳಲ್ಲ ನಾನು. ಯಾವಾಗ ಯಾವ ವಿಷಯ ಬೇಕೋ ಅದನ್ನು ಲಕ್ಷ್ಯ ಕೊಟ್ಟು ಓದುತ್ತಿದ್ದೆ. ಅದು ಫಲ ನೀಡಿತು. ಪಿಯುಸಿ ದ್ವಿತೀಯ ಸೈನ್ಸ್ ನಲ್ಲಿ ಶೇ. 94 ರಷ್ಟು ಫಲಿತಾಂಶ ಪಡೆದ ಧಾರವಾಡದ ಪ್ರಿಸಂ ಕಾಲೇಜ್ ವಿದ್ಯಾರ್ಥಿನಿ ಹಾಗೂ ಹಿರಿಯ ಪತ್ರಕರ್ತ ಪ್ರಸನ್ನ ಕರ್ಪೂರರ ಪುತ್ರಿ […]

ಜಿಲ್ಲೆ

ಧಾರವಾಡದಲ್ಲಿ ಪೊಲೀಸರು, ಸಿಐಎಸ್‌ಎಫ್‌ ಕಮಾಂಡೊಗಳಿಂದ ಪಥ ಸಂಚಲನ

ಪೊಲೀಸರು, ಸಿಐಎಸ್‌ಎಫ್‌ ಕಮಾಂಡೊಗಳಿಂದ ರೂಟ್ ಮಾರ್ಚ್ – ನಗರ ಸುತ್ತಿದ ಡಿಸಿ ದಿವ್ಯ ಪ್ರಭು ಧಾರವಾಡ ಪ್ರಜಾಕಿರಣ.ಕಾಮ್  : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದಲ್ಲಿ ಅವಳಿನಗರ ಪೊಲೀಸ್‌ ಕಮೀಷನರೇಟ್ ವತಿಯಿಂದ ಪಥ ಸಂಚಲನ ಮ್ಮಿಕೊಳ್ಳಲಾಗಿತ್ತು. ಈ ರೂಟ್ ಮಾರ್ಚ್‌ನಲ್ಲಿ ಸಿಐಎಸ್‌ಎಫ್‌ ಕಮಾಂಡೊಗಳು, ಕೆಎಸ್‌ಆರ್‌ಪಿ ಪ್ಲಟೂನ್, ಸಿಎಆ‌ರ್ ಪೊಲೀಸರು ಪಾಲ್ಗೊಂಡಿದ್ದರು. ಈ ಪೊಲೀಸರೊಂದಿಗೆ ಸ್ವತಃ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್‌ ಆಯುಕ್ತ ರೇಣುಕಾ ಸುಕುಮಾರ, ಡಿಸಿಪಿಗಳಾದ ರಾಜೀವ್‌ ಎಂ., ಆ‌ರ್.ರವೀಶ ಕೂಡ ಪಾಲ್ಗೊಂಡು […]

ಜಿಲ್ಲೆ

ಧಾರವಾಡ ಜಿಲ್ಲೆಯಾದ್ಯಂತ ಮೇ 7 ರಂದು ಜಿಲ್ಲೆಯಾದ್ಯಂತ ಸಂತೆ ರದ್ದು

ಧಾರವಾಡ ಪ್ರಜಾಕಿರಣ.ಕಾಮ್ ಏ. 10 : ಧಾರವಾಡ ಜಿಲ್ಲೆಯಾದ್ಯಂತ ಮೇ 7, 2024 ರಂದು ಮತದಾನ ಜರುಗುವುದರಿಂದ ಸದರಿ ದಿನದಂದು ಮತದಾನವು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಜರುಗಿಸುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ 5, 2024 ರಂದು ಸಂಜೆ 7 ಗಂಟೆ ಯಿಂದ ಮೇ 7, 2024 ರ ಸಂಜೆ 7 ಗಂಟೆಯವರಿಗೆ ಅಥವಾ ಮತದಾನ ಮುಕ್ತಾಯವಾಗುವವರೆಗೆ ಸದರಿ ದಿವಸಗಳಂದು ನಡೆಯುವ ಯಾವತ್ತೂ ಸಂತೆ, ಜಾತ್ರೆ, ಉತ್ಸವ ಮತ್ತು ಇತರೆ ಕಾರ್ಯಕ್ರಮಗಳನ್ನು ನಿಷೇಧಿಸಿ, ಜಿಲ್ಲಾ […]

ಜಿಲ್ಲೆ

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಧಾರವಾಡಕ್ಕೆ 23 ನೇ ಸ್ಥಾನ*

ಧಾರವಾಡ ಪ್ರಜಾಕಿರಣ.ಕಾಮ್ ಏ.10: ಮಾರ್ಚ್ 2024 ರಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಜಿಲ್ಲೆಗೆ 23 ನೇಯ ಸ್ಥಾನ ಲಭಿಸಿದೆ. ಜಿಲ್ಲೆಯಲ್ಲಿ ಒಟ್ಟು 43 ಪರೀಕ್ಷಾ ಕೇಂದ್ರಗಳಲ್ಲಿ 27,428 ವಿದ್ಯಾರ್ಥಿಗಳು ಹಾಜರಿದ್ದು, 21,562 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 80.70% ರಷ್ಟು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಪಿಯು ಫಲಿತಾಂಶ ಕಳೆದ ಬಾರಿ ಶೇಕಡಾ 73.04% ಇದ್ದು, ಈ ಸಾರಿ 80.70% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 27 ನೇ ಸ್ಥಾನದಿಂದ 23ನೇ ಸ್ಥಾನ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ […]

ಅಂತಾರಾಷ್ಟ್ರೀಯ

ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ದಿಂಗಾಲೇಶ್ವರ ಸ್ವಾಮೀಜಿಗೆ ಖಂಡಿತವಾಗಿಯೂ ಬೆಂಬಲ

ಧಾರವಾಡ ಪ್ರಜಾಕಿರಣ.ಕಾಮ್ :   ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುವ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ದಿಂಗಾಲೇಶ್ವರ ಸ್ವಾಮೀಜಿಗೆ ಖಂಡಿತವಾಗಿಯೂ ಬೆಂಬಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ವಿನೋದ್ ಅಸೂಟಿ ಅವರಿಗೆ ಬಿ ಫಾರ್ಮ್ ನೀಡಿದ್ದು, ಶೇ.೭೦ ರಷ್ಟು ಚುನಾವಣಾ ಪ್ರಚಾರ ಕೆಲಸವನ್ನು ಮಾಡಿ ಮುಗಿಸಿದ್ದೇವೆ. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಅಭ್ಯರ್ಥಿಯನ್ನಾಗಿ ಕಣದಲ್ಲಿ ಇಳಿಸಿ ಕಾಂಗ್ರೆಸ್ ಹೈ ಕಮಾಂಡ್ ಬೆಂಬಲ ಸೂಚಿಸಲು ನಿರ್ಧಾರ […]

ಅಂತಾರಾಷ್ಟ್ರೀಯ

ಧಾರವಾಡ ಲೋಕಸಭಾ ಕ್ಷೇತ್ರ ಏ. 12 ರಿಂದ ನಾಮಪತ್ರ ಸಲ್ಲಿಕೆ

*ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆ-2024* *ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ;* *ಏಪ್ರಿಲ್ 19 ನಾಮಪತ್ರ ಸಲ್ಲಿಕೆಗೆ ಕೊನೆಯ* *ದಿನ; ಏಪ್ರಿಲ್ *20 *ನಾಮಪತ್ರ* *ಪರಿಶೀಲನೆ; ಹಿಂಪಡೆಯಲು ಏಪ್ರಿಲ್* *22* *ಕೊನೆಯ* *ದಿನ:  ಧಾರವಾಡ ಪ್ರಜಾಕಿರಣ.ಕಾಮ್ ಏ. 10 : ಧಾರವಾಡ ಲೋಕ ಸಭಾ ಮತ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಮೇ 7 ರಂದು ಮತದಾನ ಜರುಗಲಿದ್ದು, ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದ್ದು, ಏಪ್ರಿಲ್ 20 […]

ರಾಜ್ಯ

ಉಘೇ ಉಘೇ ಮಾದಪ್ಪ : ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ

ಚಾಮರಾಜನಗರ ಪ್ರಜಾಕಿರಣ.ಕಾಮ್ : ರಾಜ್ಯದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೊನೆಯ ದಿನವಾದ ಮಂಗಳವಾರ ಸಹ್ರಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ನಡೆದ ಮಾದಪ್ಪನ ರಥೋತ್ಸವದ ಕಾರ್ಯದಲ್ಲಿ ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಸೇರಿದಂತೆ ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ವಿವಿಧ ಬಗೆಯ ಪುಷ್ಪಗಳು, […]