ರಾಜ್ಯ

ಧಾರವಾಡದ ರೌಡಿಶೀಟರ್‌ ಓಂಕಾರ್ ರಾಯಚೂರು ಸೇರಿ ನಾಲ್ವರ ಬಂಧನ

*ಧಾರವಾಡ ಗ್ರಾಮೀಣ ಪೊಲೀಸ್ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್‌ ಓಂಕಾರ್ ರಾಯಚೂರು ಹಾಗೂ ಮೂವರ ಬಂಧನ*

*ರಾಮರಾಜ್ಯ ಹೆಸರಿನಲ್ಲಿ ಗ್ಯಾಂಗ್ ಕಟ್ಟಿದ್ದ ಭೂಪ*

*ಈ ಹಿಂದೆ ರಾಜಿಸಂಧಾನಕ್ಕೆ ಅಂತ ಕರೆದು ಓಣಿಯ ಯುವಕ ಅಜಯ್ ಪಠಾರೆ ಮೇಲೆ ಹಲ್ಲೆ ಮಾಡಿದ್ದ*

ಧಾರವಾಡ ಪ್ರಜಾಕಿರಣ.ಕಾಮ್ : ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಅನ್ನೋ ರೀತಿಯಲ್ಲಿ ಧಾರವಾಡದಲ್ಲಿ ಹಿಂದುತ್ವ, ಅದು, ಇದು ಅಂತ ರಾಮರಾಜ್ಯ ಹೆಸರಿನಲ್ಲಿ ಗ್ಯಾಂಗ್ ಕಟ್ಟಿ ಮೆರೆಯುತ್ತಿದ್ದ ಭೂಪ ಇದೀಗ ಧಾರವಾಡ ಗ್ರಾಮೀಣ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು ಇದು ಅಚ್ಚರಿಯ ವಿಷಯವಾದರೂ ನಂಬಲೇಬೇಕಾದ ಕಟು ಸತ್ಯ.

ಕರ್ತವ್ಯ ನಿರತ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪೇದೆ ಅರ್ಜುನ ಠಕಾಯಿ ಮೇಲೆ ಕ್ಷುಲ್ಲಕ ಕಾರಣಕ್ಕೆ ಮನಬಂದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ರೌಡಿಶೀಟರ್ ಓಂಕಾರ್ ರಾಯಚೂರು ಹಾಗೂ ಆತನ ಸಹಚರರಾದ ಮಹಾತೇಂಶ ಉಳ್ಳಾಗಡ್ಡಿ, ನಿಖಿಲ್ ಬಡಶೆಟ್ಟಿ, ಅಭಿಲಾಶ್ ಸತ್ತಿಗೇರಿ ಅಂದರ್ ಆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆದದ್ದೇನು…!?

ಧಾರವಾಡ ಹೊರವಲಯದಲ್ಲಿರುವ ಹೋಟೆಲ್ ನಲ್ಲಿ ಮದ್ಯದ ಅಮಲಿನಲ್ಲಿದ್ದ ರೌಡಿಶೀಟರ್ ಓಂಕಾರ್ ರಾಯಚೂರು ಹಾಗೂ ಇತರ ಮೂವರು ಸಾಯಿ ಅರಣ್ಯ ಹೋಟೆಲ್ ಅಡುಗೆಭಟ್ಟ ವಿರೇಶ ಪತ್ತಾರ, ಹುಸೇನ ಸಾಬ ಮಿಲ್ಟ್ರಿ ಇವರೊಂದಿಗೆ ಅನಗತ್ಯವಾಗಿ ದಾಂಧಲೆ ಮಾಡಿದ್ದಾರೆ.

ಆಗ ಸ್ಥಳದಲ್ಲಿಯೇ ಇದ್ದ ಗ್ರಾಮೀಣ ಪೊಲೀಸ್ ಅರ್ಜುನ ಠಕಾಯಿ ಅವರಿಗೆ ಬುದ್ದಿಮಾತು ಹೇಳಿದ್ದಾರೆ.

ಆದರೆ, ಅದಕ್ಕೆ ಸಮಾಧಾನಗೊಳ್ಳದೆ ಅವರ ಮೇಲೆಯೇ ಗಾಜಿನ ಬಾಟಲಿನಿಂದ ಮುಗಿಬಿದ್ದಿದ್ದಾರೆ.

ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

ಪೊಲೀಸ್ ಇನ್ಸಪೆಕ್ಟರ್ ಕಮತಗಿ ಓಂಕಾರ ರಾಯಚೂರು ಹಾಗೂ ಸಹಚರರ ಹೆಡೆಮುರಿ ಕಟ್ಟಿ ಮುಂದಿನ ಕ್ರಮ ಜರುಗಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *