ಅಪರಾಧ

ಧಾರವಾಡದ ವಿನಯ ಡೇರಿ ಬಳಿ ಒಬ್ಬನ ಬರ್ಬರ ಕೊಲೆ, ಇನ್ನೊಬ್ಬನ‌ ಮೇಲೆ ಹಲ್ಲೆ

 *ಐವರನ್ನ ಹೆಚ್ಚಿನ ಮಾಹಿತಿಗಾಗಿ ವಶಕ್ಕೆ ಪಡೆದ ಪೊಲೀಸರು*

*ಹದಿನೈದರಿಂದ ಇಪ್ಪತ್ತು ಜನರ ಗುಂಪಿನಿಂದ ಕಲ್ಲು, ರಾಡ್ ನಿಂದ ಹಲ್ಲೆ,*

ಧಾರವಾಡ ಪ್ರಜಾಕಿರಣ.‌ಕಾಮ್ : ಧಾರವಾಡ ನಗರದ ಹೊರವಲಯದ ವಿನಯ ಡೇರಿ ಬಳಿ ಯುವಕನೊಬ್ವನ‌ನ್ನು ಬರ್ಬರವಾಗಿ ಕೊಲೆ ಮಾಡಿದ್ದು,ಇನ್ನೊಬ್ಬನ‌ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ವಿನಯ ಡೇರಿ ಬಳಿ
ಬೈಕ ನಿಲ್ಲಿಸಿದ್ದ ಇಬ್ಬರು ಯುವಕರ ಮೇಲೆ ಕಾರಿನಲ್ಲಿ ಬಂದಿದ್ದ ವಿನಯ ಡೇರಿ ನಿರ್ವಾಹಕ ನಟರಾಜ್ ಎಂಬುವವರ ಡೈವರ್ ಬೀರಪ್ಪ ರಸ್ತೆ ಬಿಡುವಂತೆ ಹೇಳಿದ್ದಾರೆ.

ಆಗ ಕಲ್ಲನಗೌಡ ಪಾಟೀಲ ಹಾಗೂ ಸುನೀಲ್ ಜಕ್ಕಣ್ಣವರ ವಾಹನ ಪಾಸ್ ಆಗುತ್ತದೆ ಹೋಗಿ ಎಂದು ಹೇಳಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದರಿಂದ ಪ್ರಕರಣ ಒಬ್ವರ ಕೊಲೆಯಲ್ಲಿ ಅಂತ್ಯವಾಗಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆಯಲ್ಲಿ ಸಾವಿಗೀಡಾಗಿದ್ದವನನ್ನು ಅರವಟಗಿಯ ಕಲ್ಲನಗೌಡ ಪಾಟೀಲ ಎಂದು ಗುರುತಿಸಲಾಗಿದೆ.

ಇತ ಧಾರವಾಡದಲ್ಲಿಯೇ ವಾಸವಾಗಿದ್ದು, ನೀರಿನ ಟ್ಯಾಂಕರ್  ಸರಬರಾಜು ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದ.

ಮತ್ತೊಬ್ಬ ಗಾಯಗೊಂಡಿದ್ದವನನ್ನು ತಡಸಿನಕೊಪ್ಪದ
ಸುನೀಲ್ ಜೆಕ್ಕಣ್ಣವರ ಎಂದು ಗುರುತಿಸಲಾಗಿದೆ‌.

ಕಲ್ಲನಗೌಡ ಪಾಟೀಲ ಎಂಬಾತ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.

ನನ್ನ ಕಣ್ಣ ಎದುರಿಗೆ ವಿನಯ ಡೇರಿ ಹುಡುಗರು ಮನಬಂದಂತೆ ಥಳಿಸಿ, ಕಲ್ಲು, ರಾಡ್ ನಿಂದ ಹಲ್ಲೆ ಮಾಡಿ ಸಾಯಿಸಿದ್ದಾರೆ ಎಂದು ಸುನೀಲ್ ಆರೋಪಿಸಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತರು, ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ಈ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ವಿದ್ಯಾಗಿರಿ ಪೊಲೀಸ್ ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀರಪ್ಪ ಹಾಗೂ ಬಸವರಾಜ  ಸೇರಿ  ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಎಲ್ಲಾ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *