ಅಪರಾಧ

ಧಾರವಾಡ ತಾಲೂಕಿನಲ್ಲಿ ತಾಮ್ರದ ವಿದ್ಯುತ್ ತಂತಿ, ಸ್ಪಿನ್ಕ್ಲರ್ ಕಳವು ಹೆಚ್ಚಳ

ಧಾರವಾಡ prajakiran.com : ತಾಲೂಕಿನ ಮನಗುಂಡಿ,  ನಾಯಕನ ಹುಲಿಕೊಪ್ಪ, ಹಾಗು ಸುತ್ತ -ಮುತ್ತಲಿನ ಪ್ರದೇಶದ ಹೊಲ ಹಾಗೂ ಹೊಲದ ಮನೆ ಹಾಗು ತೋಟದ ಮನೆಯ  ಬೋರ್ ಗಳಿಗೆ ಅಳವಡಿಸಿದ ತಾಮ್ರದ ವಿದ್ಯುತ್ ತಂತಿಯನ್ನು ಹಾಗು ಹೊಲಗಳಲ್ಲಿ  ನೀರು ಚುಮ್ಮಿಸುವ ತಾಮ್ರದ ಸ್ಪಿನ್ಕ್ಲರ್ ಗಳನ್ನು ಕಳ್ಳರು  ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಈ ಹಿನ್ನಲೆಯಲ್ಲಿ, ಕಳವು ಮಾಡುವವರನ್ನು  ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ  ಸ್ಥಳೀಯ ರೈತರು ಹಾಗು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ ಮತ್ತು ಮುಖಂಡರು ಧಾರವಾಡದ ಗ್ರಾಮೀಣ  ಪೋಲೀಸ್ ವೃತ್ತ ನಿರೀಕ್ಷಕರಿಗೇ   ದೂರು ಸಲ್ಲಿಸಿದರು.

ಮನಗುಂಡಿಯ ಶ್ರೀ ಬಸವಾನಂದ ಮಹಾ ಸ್ವಾಮಿಗಳ ಶ್ರೀಗುರು ಬಸವ ಮಹಾಮನೆಯಲ್ಲಿ ಅಂದಾಜು ೨,೦೦೦  ಮೊತ್ತದ, ಪಾಪು  ಧಾರೆ ಅವರ ಹೊಲದಲ್ಲಿ ಸುಮಾರು ೭,೦೦೦ ಮೊತ್ತದ ,  ಎಲ್ಲಪ್ಪಾ ಮರೆವಾಡ,  ಸೋಮಪ್ಪ ರೊಟ್ಟಿ ಅವರ ಹೊಲದಲ್ಲಿ ಅಂದಾಜು ೨,೦೦೦  ಮೊತ್ತದ ಹಾಗು ನಾಗಪ್ಪ ಅಮ್ಮಿನಬಾವಿ ಅವರ ಹೊಲ ಸೇರಿದಂತೆ ಇನ್ನು  ಅನೇಕ ಹೊಲ ಹಾಗು ಹೊಲದ ಮನೆ,  ಹಾಗೂ ತೋಟದ ಮನೆಗಳಲ್ಲಿ ಬೋರ್ ಗಳಿಗೆ ಅಳವಡಿಸಿದ ತಾಮ್ರದ ವಿದ್ಯುತ್ ತಂತಿಯನ್ನು ಹಾಗು ಹೊಲಗಳಲ್ಲಿ ನೀರು ಚುಮ್ಮಿಸುವ ತಾಮ್ರದ ಸ್ಪಿನ್ಕ್ಲರ್ ಗಳನ್ನು  ಕಳವು ಮಾಡಲಾಗಿದೆ.

 ಇವುಗಳ ಅಂದಾಜು ಮೊತ್ತ ೧ ಲಕ್ಷಕ್ಕಿಂತ ಅಧಿಕವಾಗಿದೆ. ಈ ರೀತಿ ತಾಮ್ರದ ವಿದ್ಯುತ್ ತಂತಿಯನ್ನು  ಹಾಗೂ ತಾಮ್ರದ  ಸ್ಪಿನ್ಕ್ಲರ್ ಗಳನ್ನು  ಕಳವು ಮಾಡಿದ ಕಳ್ಳರು ನಿರ್ಭಿತಿಯಿಂದ  ಸ್ಥಳೀಯ ರೈತ  ಸೋಮಪ್ಪ ರೊಟ್ಟಿ ಯವರ  ಹೊಲಲ್ಲಿ  ಕುಳಿತು ತಾಮ್ರದ ತಂತಿಯನ್ನು ಪ್ಲಾಸ್ಟಿಕ್ ಕೋಟಿಂಗ್ ದಿಂದ ಬೇರ್ಪಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ಲಾಸ್ಟಿಕ್ ಕೋಟಿಂಗ್ ದಿಂದ ಬೇರ್ಪಡಿಸಿದ  ತಾಮ್ರದ ತಂತಿಯನ್ನು ಧಾರವಾಡ ಹಾಗೂ ಹುಬ್ಬಳ್ಳಿ ಯಲ್ಲಿ  ಹಳೆ ಪಾತ್ರೆ, ತಾಮ್ರದ ವಸ್ತುಗಳು ಹಾಗೂ ತಾಮ್ರದ ತಂತಿ ತೆಗೆದುಕೊಳ್ಳುವವರಿಗೆ ಒಂದು ಕಿಲೋಗೆ ೨೦೦ ರಿಂದ ೩೫೦ ರೂಪಾಯಿಗಳಿಗೆ  ಮಾರುವ ಸಲುವಾಗಿ ಕಳ್ಳರು ಈ ಕೃತ್ಯವೆಸಗಿದ್ದಾರೆ.

ಇವರ ಈ ಕೃತ್ಯ ನೋಡಿದರೆ ಇವರಿಗೇ ಪೊಲೀಸ್ ಇಲಾಖೆಯ ಭಯವೇ ಇಲ್ಲದಂತೆ ಕಾಣುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಬೆಳಗಾವಿ ವಿಭಾಗೀಯ ಅಧ್ಯಕ್ಷ  ಪಾಪು ಧಾರೆ ಅವರು ದೂರಿದರು.

೪ ತಿಂಗಳ ಲಾಕ್ ಡೌನ್ ದಿಂದ ಯಾವುದೇ ಉತ್ಪನ್ನವಿಲ್ಲದೆ, ರೈತರು ಸಾಲ ಮಾಡಿ ಬೀಜ ಬಿತ್ತನೆ ಮಾಡಿದ್ದು, ಈಗ ನೋಡಿದರೆ ಕಳ್ಳರು ಹೊಲದಲ್ಲಿ ನೀರು ಹಾಯಿಸಲು ಅವಶ್ಯಕವಿರುವ ವಿದ್ಯುತ್ ತಂತಿಯನ್ನು ಹಾಗು ಸ್ಪಿನ್ಕ್ಲರ್ ಗಳನ್ನು  ಕಳವು ಮಾಡಿರುವದು ನಿಜಕ್ಕೂ ನಮ್ಮನ್ನು ಆಘಾತ ಹಾಗೂ ಕಷ್ಟಕ್ಕೀಡುಮಾಡಿದೆ ಎಂದು ಸ್ಥಳೀಯ ರೈತರು ಧಾರವಾಡದ ಗ್ರಾಮೀಣ  ಪೊಲೀಸ್ ವೃತ್ತ ನಿರೀಕ್ಷಕರರಿಗೆ  ತಮ್ಮ ನೋವನ್ನು ತೋಡಿಕೊಂಡರು.  

ಈ ಸಂದರ್ಭದಲ್ಲಿ ಸೋಮಪ್ಪ ರೊಟ್ಟಿ  , ರೋನಿತ್ ಧಾರೆ, ಪ್ರಕಾಶ್ ಶಿಂಧೆ,  ಎಲ್ಲಪ್ಪಾ ಮರೆವಾಡ,ಶಿವಲಿಂಗ ಕೊಳ್ಳಾವಿ,  ಸುನೀಲ ಮೊಕಾಶಿ,ಗಿರೀಶ್ ಅಮ್ಮಿನಭಾವಿ , ನಾಗಪ್ಪ ಅಮ್ಮಿನಭಾವಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *