ಅಪರಾಧ

ಧಾರವಾಡದ ಮರೆವಾಡ ಬಳಿ ಸೇನೆಯಲ್ಲಿ ಕೆಲಸ ಮಾಡುವ ಯುವಕನ‌ ಮೇಲೆ ಕುಡಿದ ಅಮಲಿನಲ್ಲಿದ್ದ ಯುವಕರಿಂದ ಮನಬಂದಂತೆ ಥಳಿತ….!?

ಧಾರವಾಡ ಪ್ರಜಾಕಿರಣ.ಕಾಮ್ : ರಾಷ್ಟ್ರದ ರಾಜಧಾನಿ ನವದೆಹಲಿಯ ಭಾರತೀಯ ಸೇನೆಯ ವೈದ್ಯಕೀಯ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗರಾಜ ಹೆಬ್ಬಾಳ ಮೇಲೆ ಭಾನುವಾರ ಸಂಜೆ ಧಾರವಾಡದ ಮರೆವಾಡ ಮಹಾದ್ವಾರದ ಬಳಿ ಮಾರಣಾಂತಿಕ ಹಲ್ಲೆ ನಡೆದಿದೆ.

ರಜೆ ಮೇಲೆ ಧಾರವಾಡದ ಹೆಬ್ಬಳ್ಳಿ ಗ್ರಾಮಕ್ಕೆ ಆಗಮಿಸಿದ್ದ ನಾಗರಾಜ ಹೆಬ್ಬಾಳ
ಭಾನುವಾರ ಸಂಜೆ ಹೆಬ್ಬಳ್ಳಿಯಿಂದ ಹೆಂಡತಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಬೆಳಗಾವಿಯ ಗೋಕಾಕ ಸಮೀಪದ ಸುಲದಾಳಕ್ಕೆ ತವರು ಮನೆಗೆ ಬಿಡಲು ಹೋಗುತ್ತಿದ್ದಾಗ ಮರೆವಾಡ ಬಳಿ‌ ಈ ಘಟನೆ ನಡೆದಿದೆ.

ಕಾರ್ ನಲ್ಲಿ ಹೋಗುವಾಗ ವಾಹನ್ ಸೌಂಡ್ ಮಾಡಿದ್ದಕ್ಕೆ ಪ್ರಶ್ನಿಸಿದ ಯುವಕರ ತಂಡ ಹಲ್ಲೆ ನಡೆಸಿದೆ.

ಈ ಯುವಕರ ಗುಂಪು ಕುಡಿದ ಅಮಲಿನಲ್ಲಿ ಮನಬಂದಂತೆ ಹೀಯಾಳಿಸಿದಲ್ಲದೆ, ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಆರು ಜನರ ಯುವಕರು ತಮ್ಮ ಕಲ್ಲು, ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದರಿಂದ ರಕ್ತದ ಗಾಯಗಳಾಗಿದ್ದು ಆರು ಹೊಲಿಗೆ ಬಿದ್ದಿವೆ.

ಈ ವೇಳೆಗೆ ನಾಗರಾಜ ಮೈ ಮೇಲಿದ್ದ ಎರಡು ತೊಲೆ ಚಿನ್ನದ ಸರ ಏಳೆದುಕೊಂಡ ಖದೀಮರು ಕಾರಿನಲ್ಲಿದ್ದ ನಾಗರಾಜ ಪತ್ನಿ ಹಾಗೂ ಇಬ್ಬರು ಚಿಕ್ಕ ಕಂದಮ್ಮಗಳಿಗು ಕೂಡ ಗಲಿಬಿಲಿಗೊಳಿಸಿದ್ದಾರೆ.

ಹೀಗಾಗಿ
ಗಾಯಗೊಂಡ ನಾಗರಾಜ ಹೆಬ್ಬಾಳ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಆನಂತರ ರಾಮನಗೌಡರ ಆಸ್ಪತ್ರೆಗೆ ಚಿಕಿತ್ಸೆ ಪಡೆದು ಚೇತರಿಕೊಳ್ಳುತ್ತಿದ್ದಾರೆ.

ಸೇನೆಯಲ್ಲಿರುವ ನಾಗರಾಜ ಹೆಬ್ಬಾಳ ಈ ಕುರಿತು
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಮನಬಂದಂತೆ
ಹಲ್ಲೆ ಮಾಡಿದ ಆರೋಪಿಗಳನ್ನು ವಿನಾಯಕ ಕಗದಾಳ, ಅರುಣ ಕಗದಾಳ, ಶಿವು ಸವದತ್ತಿ
ಶಿವು ಮೊರಬದ, ವಿಠ್ಠಲ್ ಕಬನೂರ ಹಾಗೂ ಇಬ್ರಾಹೀಂ ನಧಾಪ್ ಮತ್ತು ಇತರರು ಎಂದು ಗುರುತಿಸಲಾಗಿದೆ.

ಇವರ ಮೇಲೆ ದೂರು ದಾಖಲಿಸಿಕೊಂಡ ಧಾರವಾಡ ಗ್ರಾಮೀಣ ಪೊಲೀಸರು ಮುಂದೆ ಇವರ ಹೆಡೆ ಮುರಿ ಕಟ್ಟುವ ಕೆಲಸ ಮಾಡಿ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಅಕ್ರಮ ದಂಧೆ, ಶಾಂತಿ ಭಂಗಕ್ಕೆ ಕಡಿವಾಣ ಹಾಕುವ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *