ರಾಜ್ಯ

ಧಾರವಾಡ : ರಾಷ್ಟ್ರೀಯ ಯುವ ಜನೋತ್ಸವ: ಜನವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ

ಬೆಳಗಾವಿ, ಡಿ.22 ಪ್ರಜಾಕಿರಣ.ಕಾಮ್ :  ರಾಷ್ಟ್ರೀಯ ಯುವ ಜನೋತ್ಸವ ಈ ಬಾರಿ ಜನವರಿ 12 ರಿಂದ 16 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿದ್ದು,  ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ರೇಷ್ಮೆ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆಯ ಸಚಿವರಾದ ಡಾ.ನಾರಾಯಣಗೌಡ ಅವರು ತಿಳಿಸಿದರು.

ಸುವರ್ಣ ವಿಧಾನಸೌಧದಲ್ಲಿ ಗುರುವಾರ(ಡಿ.22) ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಯುವಜನೋತ್ಸವದಲ್ಲಿ ದೇಶದ ಎಲ್ಲ ರಾಜ್ಯಗಳಿಂದ 7500 ಕಲಾವಿದರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

26 ನೇ ರಾಷ್ಟ್ರೀಯ ಯುವಜನೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದ್ದು, ಈಗಾಗಲೇ ಸಭೆ ಕೂಡ ನಡೆಸಲಾಗಿದೆ.

ಯುವಜನೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಮುಂದಿನ ವಾರದಿಂದ ಭರದ ಸಿದ್ಧತೆಯನ್ನು ಆರಂಭಿಸಲಾಗುವುದು. ಊಟೋಪಹಾರ, ವಸತಿ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.

*ಲಾಂಛನ-ಚಿಹ್ನೆ ವಿನ್ಯಾಸಗಳಿಗೆ ಆಹ್ವಾನ:*

ರಾಷ್ಟ್ರೀಯ ಯುವ ಜನೋತ್ಸವದ ಲಾಂಛನ (ಲೋಗೋ) ಥೀಮ್, ಚಿಹ್ನೆ(ಮಾಸ್ಕಾಟ್) ವಿನ್ಯಾಸ ರಚನೆಗೆ ಸಾರ್ವಜನಿಕರಿಂದ ಸ್ಪರ್ಧೆಗೆ ಆಹ್ವಾನಿಸಲಾಗಿದೆ.

ಉತ್ತಮ ಲೋಗೋ ರಚನೆಗೆ ರೂ.50,000 ನಗದು ಬಹುಮಾನ ಮತ್ತು ಉತ್ತಮ ಥೀಮ್ಸ್ ರಚನೆಗೆ ರೂ.25,000 ಬಹುಮಾನ ನೀಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದರು.

ಸಾರ್ವಜನಿಕರು ಥೀಮ್ಸ್ ಲೋಗೋ ಹಾಗೂ ಮಾಸ್ಕಟ್ ರಚಿಸಿ ದಿನಾಂಕ 28-12-2022 ರೊಳಗೆ ಸಲ್ಲಿಸಬೇಕು.

ಸಾರ್ವಜನಿಕರು ಕಳಿಸುವ ಅತ್ಯುತ್ತಮ ಲೋಗೋ ಮತ್ತು ಥೀಮ್ ನ್ನು ಸಮಿತಿಯ ಮೂಲಕ ಆಯ್ಕೆ ಮಾಡಿ ರಾಷ್ಟ್ರೀಯ ಯುವ ಉತ್ಸವದಲ್ಲಿ ಅಧಿಕೃತವಾಗಿ ಬಳಸಲಾಗುವುದು.

ಲೋಗೋ ಮತ್ತು ಮಾಸ್ಕಾಟ್ ಪ್ರದರ್ಶಿಸುವ ತಂಡವು ತಮ್ಮ ಸಂಪರ್ಕ ವಿವರ ಹಾಗೂ ವಿನ್ಯಾಸಗಳನ್ನು ರಚಿಸಿ ಡಿಸೆಂಬರ್ 28 ರ ಸಂಜೆ 6 ಗಂಟೆಯ ಒಳಗಾಗಿ nyf2023@gmail.com ಇ-ಮೇಲ್ ವಿಳಾಸಕ್ಕೆ ಕಳಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *