follow/like: facebook.com/prajakirannews
ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮತ್ತೆ ಹೊಸದಾಗಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಡಿಡಬ್ಲ್ಯೂಡಿ 199-ಪಿ-9158ನ ಸೋಂಕಿತ 72 ವರ್ಷದ ವೃದ್ದೆಗೆ ಕರೋನಾ ಸೋಂಕು ಬಂದಿದೆ. ಇತನಿಗೆ 7060ರ ಸಂಪರ್ಕದಿಂದ ಕರೋನಾ ಹರಡಿದೆ.
ಡಿಡಬ್ಲ್ಯೂಡಿ 200-ಪಿ-9159ನ ಸೋಂಕಿತ 43 ವರ್ಷದ ವ್ಯಕ್ತಿಗೆ ಕರೋನಾ ಸೋಂಕು ಬಂದಿದೆ. ಇತನಿಗೆ 7060ರ ಸಂಪರ್ಕದಿಂದ ಕರೋನಾ ಹರಡಿದೆ.
ಡಿಡಬ್ಲ್ಯೂಡಿ 201-ಪಿ-9160ನ ಸೋಂಕಿತ 30 ವರ್ಷದ ಯುವಕನಿಗೆ ಕರೋನಾ ಸೋಂಕು ಬಂದಿದೆ. ಇತನಿಗೆ 7060ರ ಸಂಪರ್ಕದಿಂದ ಕರೋನಾ ಹರಡಿದೆ.
ಡಿಡಬ್ಲ್ಯೂಡಿ 202-ಪಿ-9161ನ ಸೋಂಕಿತ 35 ವರ್ಷದ ಮಹಿಳೆಗೆ ಕರೋನಾ ಸೋಂಕು ಬಂದಿದೆ. ಇವರು ತೀವ್ರ ಜ್ವರ, ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ವಿವರಿಸಿದೆ.
ಸೋಮವಾರ ಕರೋನಾದಿಂದ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರು ಪಿ-2802, ಪಿ-5485 ಚೇತರಿಕೆ ಕಂಡಿದ್ದು ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ 6 ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.