ರಾಜ್ಯ

ಧಾರವಾಡದ ವಿಜಯನಗರದಲ್ಲಿ ಒಂದು, ಮೊರಬದಲ್ಲಿ ಮೂರು ಕರೋನಾ ಪಾಸಿಟಿವ್

ಧಾರವಾಡ Prajakiran.com : ಜಿಲ್ಲೆಯಲ್ಲಿ ಸೋಮವಾರ ಮತ್ತೆ 4 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

DWD 199 – ಪಿ- 9158 (72 ವರ್ಷದ ಮಹಿಳೆ) , DWD 200- ಪಿ-9159( 43 ವರ್ಷದ ಪುರುಷ), DWD 201- ಪಿ-9160 ( 30 ವರ್ಷದ ಪುರುಷ)
ಈ ಮೂವರು ನವಲಗುಂದ ತಾಲೂಕಿನ ಮೊರಬ ಗ್ರಾಮದ ನಿವಾಸಿಗಳಾಗಿದ್ದಾರೆ. ಇವರಿಗೆ ಪಿ-7060 ಸೋಂಕಿತನ ಸಂಪರ್ಕ ದಿಂದ ಬಂದಿದೆ.





DWD 202 – ಪಿ- 9161 (35 ವರ್ಷದ ಮಹಿಳೆ ) , ಇವರು ಧಾರವಾಡ ವಿಜಯನಗರ ಮಾವಿನತೋಪು ಹತ್ತಿರದ ನಿವಾಸಿಯಾಗಿದ್ದಾರೆ. ಇವರು ಹಲವು ಮನೆಗಳಿಗೆ ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗಿ ಬಂದಿದ್ದಾರೆ.

ಹೀಗಾಗಿ ಅವರ ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚುತ್ತಿದ್ದಾರೆ. ಅವರಿಗೆ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು. ಅವರಿಗೆ ಇಂದು ಕರೋನಾ ದೃಢಪಟ್ಟಿದೆ.



ಇಬ್ಬರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ :
ಕೋವಿಡ್ ನಿಂದ ಸಂಪೂರ್ಣ ಗುಣಮುಖರಾಗಿರುವ ಪಿ-2808 ( 27 ವರ್ಷದ ಮಹಿಳೆ) , ಪಿ- 5485 (4 ವರ್ಷದ ಬಾಲಕಿ) ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 202 ಕ್ಕೇರಿದೆ. 76 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *