ಅಂತಾರಾಷ್ಟ್ರೀಯ

ಶಾಸನ ಸಭೆಗಳಲ್ಲಿ ಮಹಿಳೆಯರ ಭಾಗಿತ್ವದಿಂದ ದೇಶದ ಅಭಿವೃದ್ಧಿಗೆ ವೇಗ ಸಿಗಲಿದೆ: ಪ್ರಹ್ಲಾದ್​ ಜೋಶಿ

ನವದೆಹಲಿ ಪ್ರಜಾಕಿರಣ.ಕಾಮ್  ಸೆ.22: ನಾರಿ ಶಕ್ತಿ ವಂದನ್ (ಮಹಿಳಾ ಮೀಸಲಾತಿ) ಮಸೂದೆ ಸಂಸತ್​ನಲ್ಲಿ ಅಂಗಿಕಾರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದಲ್ಲಿ, ಉದಾತ್ತ ಚಿಂತನೆಮಹಿಳಾ ಮೀಸಲಾತಿಯಲ್ಲಿ ಮೂಡಿ ಬಂದ ಕಲ್ಪನೆ ಮಹಿಳಾ ಮೀಸಲಾತಿ.

ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳ ಶಾಸನಸಭೆಗಳಲ್ಲೇ ಮಹಿಳಾ ಮೀಸಲಾತಿ ‌ಇಲ್ಲ. ಭಾರತದಲ್ಲಿ ಮೋದಿ ಅವರ ನಾಯಕತ್ವದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬಂದಿದೆ.

ಶಾಸನಸಭೆಗಳಲ್ಲಿ ಮಹಿಳೆಯರ ಭಾಗಿತ್ವದಿಂದ ದೇಶದ ಅಭಿವೃದ್ಧಿಗೆ ವೇಗ ಸಿಗಲಿದೆ. ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

1980-90 ರ ದಶಕದಿಂದ ಮಹಿಳಾ ಮೀಸಲಾತಿ ಕೂಗಿತ್ತು. ಹಲವು ಸರ್ಕಾರಗಳು ಪ್ರಯತ್ನಪಟ್ಟವು ಆದರೆ ಸಾಧ್ಯವಾಗಲಿಲ್ಲ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಹಳ ಪ್ರಯತ್ನ ಪಟ್ಟರು, ಸಂಪೂರ್ಣ ಬಹುಮತ ಇರದ ಕಾರಣ ಅವರ ಪ್ರಯತ್ನಕ್ಕೆ ಜಯ ಸಿಗಲಿಲ್ಲ.

ಮುಂದೆ ಯುಪಿಎ ಸರ್ಕಾರ ಇದನ್ನು ವೋಟ್ ಬ್ಯಾಂಕ್ ರೀತಿ ನೋಡಿ, ಪ್ರಮಾಣಿಕ‌ ಪ್ರಯತ್ನ ಮಾಡಲಿಲ್ಲ ಎಂದು ವಾಗ್ದಾಳಿ ಮಾಡಿದರು.

ಆದರೆ ಪ್ರಧಾನಿ ಮೋದಿ ಅವರ ಧೃಡ ನಿಶ್ಚಯ, ರಾಜಕೀಯ ಇಚ್ಛಾಶಕ್ತಿ ಕಾರಣದಿಂದ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ.

ಲೋಕಸಭೆಯಲ್ಲಿ ಎರಡು ವೋಟ್ ವಿರೋಧದಿಂದ, ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕಾರವಾಗಿದೆ. ಇದು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಮಹಿಳೆಯರ ಪರವಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಹಾಗೂ ದೇಶ ಮಹಿಳೆಯರಿಗೆ ಅಭಿನಂದನೆಗಳನ್ನು ತಿಳಿಸಿರುವ ಪ್ರಲ್ಹಾದ ಜೋಶಿಯವರು ವೀಡಿಯೋ ಸಂದೇಶ ನೀಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *