ರಾಜ್ಯ

ಹುಬ್ಬಳ್ಳಿ-ಧಾರವಾಡ ಜಲಮಂಡಳಿಯ 600 ರಷ್ಟು ಸಿಬ್ಬಂದಿ ಸಾಮೂಹಿಕ ವಜಾ…..!

ತೀವ್ರ ಆಕ್ರೋಶ

ಧಾರವಾಡ prajakiran. com : ಹುಬ್ಬಳ್ಳಿ – ಧಾರವಾಡ ಮಹಾನಗರ ನೀರು ಸರಬರಾಜು ನಿರ್ವಹಣೆಗೆಂದು ಕರ್ನಾಟಕ ಜಲಮಂಡಳಿಯವರಿಂದ ಕಳೆದ 20 ವರ್ಷಗಳಿಂದಲೂ ಆಗಾಗ್ಗೆ ಅವಶ್ಯಕತೆಗನಗುಣವಾಗಿ ನೇಮಕಗೊಂಡು ಸಾಕಷ್ಟು ನುರಿತ ಸಿಬ್ಬಂದಿಯನ್ನು ವರ್ಕ ಸಮೇತ ಹಸ್ತಾಂರಿಸಿಕೊಳ್ಳದೇ ಸುಮಾರು 600 ರಷ್ಟು ಜನರನ್ನು ಸಾಮೂಹಿಕವಾಗಿ ವಜಾ ಮಾಡಿದೆ.

ಅಲ್ಲದೆ, ಆ ಜಾಗಕ್ಕೆ ಹೊಸಬರನ್ನು  ನೇಮಕಗೊಳಿಸಿಕೊಂಡು ಕೆಲಸ ನಿರ್ವಹಿಸುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ , ಖಾಸಗಿ ಗುತ್ತಿಗೆದಾರ ಮೇ ‌. ಎಲ್ ಆಂಡ್ ಟಿ ರವರಿಗೆ ಶ್ರೀ ಸ್ಯಾಂಡ್ ನೀಡಿರುವುದನ್ನು ಪ್ರತಿಭಟಿಸಿ ನೌಕರರಿಂದ ಏ. 26 ರಿಂದ ಅನಿರ್ಧಿಷ್ಟ ಅವಧಿಯ ಸಾಮೂಹಿಕ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಧಾರವಾಡ ಮಹಾನಗರ ಸಭೆಯ ನೀರು ಸರಬರಾಜು ವಿಭಾಗದ ದಿನಗೂಲಿ , ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವೆಂಕಟೇಶ್ ಹಳಕಟ್ಟಿ, ಇದನ್ನು ಕೈ ಬಿಟ್ಟು ಮಹಾನಗರ ಪಾಲಿಕೆ, ಜಲಮಂಡಳಿ ಹಾಗೂ ರಾಜ್ಯ  ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬಸವರಾಜ ದೇಸಾಯಿ, ಸಂತೋಷ ಹಿರೆಮಠ,ಸುನಿಲ್ ಭೂಮಣ್ಣವರ,ಮಹಾಂತೇಶ ಗೌಡರ್, ಶಿವು ಹಿರೆಮಠ,ಎಮ್ ಆರ್ ಪಾಟೀಲ್, ಗಣೇಶ ಸವಣೂರ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *