ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಇಬ್ಬರು ಬಾಲಕರು ಸೇರಿ ಮತ್ತೆ ನಾಲ್ವರಿಗೆ ಕರೋನಾ ಸೋಂಕು

ಧಾರವಾಡ prajakiran.com :  ಧಾರವಾಡದ ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ವರಿಗೆ ಕರೋನಾ ಸೋಂಕು ತಗುಲಿದೆ  ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾದ ಸೋಂಕಿತರನ್ನು DWD 61-  ಪಿ- 5482  ನೇ ಸೋಂಕಿತ 46 ವರ್ಷದ ಪುರುಷ   , DWD 61- ಪಿ- 5483 ನೇ ಸೋಂಕಿತ  42 ವರ್ಷದ ಮಹಿಳೆ ಹಾಗೂ DWD 63-ಪಿ-5484  14 ವರ್ಷದ ಬಾಲಕ ಈ ಮೂವರು  ರಾಜಸ್ಥಾನ  ರಾಜ್ಯದಿಂದ ಧಾರವಾಡಕ್ಕೆ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ. ಇವರೆಲ್ಲರೂ ಹುಬ್ಬಳ್ಳಿಯ ಮಂಗಳವಾರಪೇಟೆಯ ನಿವಾಸಿಗಳಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದರು.



ಅದೇ ರೀತಿ ಹುಬ್ಬಳ್ಳಿಯ ಶಾಂತಿನಗರ ವಿನಯ ಕಾಲನಿ ನಿವಾಸಿಯಾಗಿರುವ DWD 64 -ಪಿ- 5485 ನೇ ಸೋಂಕಿತೆ 4 ವರ್ಷ,ಬಾಲಕಿಗೆ ಸೋಂಕು ದೃಢಪಟ್ಟಿದೆ. ಇಕೆ ಮಹಾರಾಷ್ಟ್ರ ರಾಜ್ಯದಿಂದ ಧಾರವಾಡ ಜಿಲ್ಲೆಗೆ ಮರಳಿ ಪ್ರವಾಸ ಮಾಡಿದ ಹಿನ್ನೆಲೆ ಹೊಂದಿದ್ದಾರೆ. ಇವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.

 ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ  64 ಕ್ಕೆ ಏರಿಕೆಯಾದಂತಾಗಿದೆ. ಈ ಪೈಕಿ ಈಗಾಗಲೇ  38  ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ . ಉಳಿದವರು  ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *