ರಾಜ್ಯ

ರಾಜ್ಯ ಬಿಜೆಪಿಗೆ ಹೈಕಮಾಂಡ್ ಬಿಗ್ ಶಾಕ್  : ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್

ರಾಜ್ಯದ ಎಲ್ಲ ರಾಜಕೀಯ ಪಾರ್ಟಿಗಳು ತಮ್ಮ ಪಕ್ಷದಿಂದ ರಾಜ್ಯಸಭೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸುತ್ತೋಲೆ ಹೊರಡಿಸಿವೆ.

ಅದರಲ್ಲಿ ಕಾಂಗ್ರೆಸ್ಸಿನ ಹಿರಿಯ ವರಿಷ್ಠ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡರನ್ನು ಆಯ್ಕೆ ಮಾಡಿಲಾಗಿತ್ತು.

ಇನ್ನು ಅತೀ ಹೆಚ್ಚು ಸದಸ್ಯಬಲ ಹೊಂದಿರುವ ಪಕ್ಷ ಭಾರತೀಯ ಜನತಾ ಪಾರ್ಟಿಯಲ್ಲಿ ಇರುವ ಎರಡು ಸೀಟಗಳಗೆ ಎಲ್ಲಿಲ್ಲದ ಪೈಪೋಟಿ ಮತ್ತು ಲಾಭಿ ಎರ್ಪಟ್ಟು ರಾಜಕೀಯ ಹೈಡ್ರಾಮಾವೇ ರಾಜ್ಯದಲ್ಲಿ ನಡೆದಿತ್ತು. 

ಅದರಲ್ಲೂ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ ಸದಾ ರಾಜಕೀಯದಿಂದ ಸುದ್ದಿ ಮಾಡುತ್ತಲೇ ಇರುತ್ತದೆ. ಒಂದೆಡೆ ಎರಡು ಬಾರಿ ಈಗಾಗಲೇ ರಾಜ್ಯಸಭೆ ಸಂಸದರಾಗಿ ಸೇವೆ ಸಲ್ಲಿಸಿದ ಹಿರಿಯ ಪ್ರಭಾಕರ ಕೋರೆ ಇನ್ನೊಂದೆಡೆ ಕತ್ತಿ ಸಹೋದರರ ಗದ್ದಲ.

ಮಧ್ಯದಲ್ಲಿ ರಾಜ್ಯ ಬಿಜೆಪಿಯ ನಾಯಕರು ತಮಗೆ ವಿಶ್ವಸ್ಥರಿರುವ ಪ್ರೋ. ಮಾ. ನಾಗರಾಜ, ವಿಜಯ ಸಂಕೇಶ್ವರ, ನಿರ್ಮಲಕುಮಾರ ಸುರಾನಾ ಮತ್ತು ಉದ್ಯಮಿ ಪ್ರಕಾಶ ಶೆಟ್ಟಿಯವರ ಹೆಸರುಗಳು ಓಡಾಡುತ್ತಿದ್ದವು.



ಆದರೆ ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿಯ ಹೈಕಮಾಂಡ ಮಧ್ಯಾಹ್ನದ ವೇಳೆಗೆ ಎರಡು ಅಚ್ಚರಿಯ ಹೆಸರುಗಳನ್ನು ಪ್ರಕಟಿಸಿಬಿಡುತ್ತದೆ.

ಆ ಪಟ್ಟಿಯಲ್ಲಿನ ಹೆಸರುಗಳೇ ಪಕ್ಷದ ಸಂಘಟನೆಗೆ ದುಡಿದ ರಾಯಚೂರಿನ ಸವಿತಾ ಸಮಾಜದ ಅಶೋಕ ಗಸ್ತಿ ಮತ್ತು ಬೆಳಗಾವಿಯ ಲಿಂಗಾಯತ ಪಂಚಮಸಾಲಿ ಕುಟುಂಬದ ಈರಣ್ಣಾ ಕಡಾಡಿ. 

ಅಯ್ಯೋ, ಇದೇನು ಪಕ್ಷ ಹೀಗೆ ಮಾಡಿಬಿಟ್ಟಿತಲ್ಲ ಅಂತ ಬಾಯಿ ಮೇಲೆ ಕೈಯಿಟ್ಟು ನಿಟ್ಟುಸಿರು ಬಿಟ್ಟವರು ಸುಮಾರು ಜನ ನನಗೆ ಗೊತ್ತು.

ಆದರೆ ಹೀಗೊಂದು ದಿಟ್ಟ ನಿರ್ಧಾರ ನೀಡಿದ ಭಾರತೀಯ ಜನತಾ ಪಾರ್ಟಿಗೆ ನನ್ನ ಅಭಿನಂದನೆಗಳು. ಹೌದು ನಮ್ಮದು ಕಾರ್ಯಕರ್ತರ ಪಕ್ಷ, ಕಾರ್ಯಕರ್ತರಿಂದಲೇ ನಾವಿಂದು ಜಗತ್ತಿನ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ರಾಜಕೀಯ ಪಕ್ಷ ಎಂದು ಬರೀ ಭಾಷಣದ ವಿಷಯವಸ್ತುವನ್ನಾಗಿಸದೇ ಅದು ನಿಜವೆಂದು ಪಕ್ಷ ಸಾಬೀತುಪಡಿಸಿದೆ.

ಮೂಲತಃ ವಿದ್ಯಾರ್ಥಿ ಪರಿಷತ್ತಿನ ಮೂಲಕ ಸಾಮಾಜಿಕ ಜೀವನ ಹಾದಿ ಹಿಡಿದ ಈ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಮತ್ತು ಅದರಲ್ಲೂ ರಾಜ್ಯ ಸಂಘಟಕರೂ ಕಳುಹಿಸಿದ ಹೆಸರುಗಳನ್ನು ಬಿಟ್ಟೂ ನಮಗೆ ಗೊತ್ತು ಯಾರನ್ನು ಗುರುತಿಸಬೇಕು ಮತ್ತು ಬೆಳೆಸಬೇಕು ಎಂಬ ಸಂದೇಶ ರವಾನಿಸಿದ ಬಿಜೆಪಿ “A Party with Difference” ಎಂಬುದು ಇದೇ ಕಾರಣಕ್ಕೆ! 

ಹೀಗೆ ಆದದ್ದು ಮೊದಲೇನಲ್ಲ ಈ ಹಿಂದೆ ಕರ್ನಾಟಕದ ಜಗನ್ನಾಥರಾವ್ ಜೋಶಿಯವರು ಹಲವಾರು ಬಾರಿ ಚುನಾವಣೆಯಲ್ಲಿ ನಿಂತು ಸೋತರೂ, ಅವರಲ್ಲಿರುವ ವೈಚಾರಿಕ ದೃಷ್ಠಿಕೋನ ಮತ್ತು ಜ್ಞಾನಕ್ಕೆ ರಾಜ್ಯಸಭೆಯಿಂದ ಆಯ್ಕೆಮಾಡಿ ಸಂಸತ್ತಿಗೆ ಕಳುಹಿಸಿದೆ. 



ಇತ್ತೀಚಿಗೆ ಎಬಿವಿಪಿಯಲ್ಲಿ ಸುಮಾರು 22 ವರ್ಷ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿದ ಎನ್. ರವಿಕುಮಾರರವರನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಮಾಡಿದೆ. 

ಅತೀ ಚಿಕ್ಕ ವಯಸ್ಸಿನಲ್ಲಿಯೇ ತೇಜಸ್ವಿ ಸೂರ್ಯಗೆ ಲೋಕಸಭೆ ಸ್ಪರ್ಧಿಸುವ ಅವಕಾಶ ನೀಡಿದ್ದು, ಉಡುಪಿಯ ಕೋಟ ಗ್ರಾಮದ ಓರ್ವ ಫೋಟೋಗ್ರಾಫರ್ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿಯ ಸಾಮಾನ್ಯ ಎಬಿವಿಪಿ ಹುಡುಗ, ಯುವಕ ಹರೀಶ ಪೂಂಜ ಮತ್ತು ಗೌಡರ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಹೊಸಮುಖವಾದ ಪ್ರೀತಮ್ ಗೌಡಗೆ ವಿಧಾನಸಭೆ ಟಿಕೇಟ್ ನೀಡಿದ್ದು ಹೀಗೆ ಬಿಜೆಪಿ ಪಕ್ಷ ತೆಗೆದುಕೊಳ್ಳುವ ಅತೀ ದಿಟ್ಟ ಹೆಜ್ಜೆಗಳು ತನ್ನ ಸಿದ್ಧಾಂತದ ಅರಿವನ್ನು ಆವಾಗಾವಾಗ ನಮಗೆ ಮಾಡಿಕೊಡುತ್ತದೆ.

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿ ಬಾಲ್ಯದಲ್ಲಿ ಒಬ್ಬ ಚಹಾ ಮಾರುವ ಹುಡುಗನಾಗಿದ್ದ ಮತ್ತು ಓರ್ವ ದಲಿತ ಈ ದೇಶದ ಪ್ರಥಮ ಪ್ರಜೆಯಾಗಬಲ್ಲ! ಅಂದಾದರೇ ನಾವು ಕೂಡಾ ಏನಾದರೂ ಸಾಧನೆ ಮಾಡಬಲ್ಲೇವು ಎಂಬ ಉತ್ಸಾಹ ಮತ್ತು ನಂಬಿಕೆಯನ್ನು ಭಾರತೀಯ ಜನತಾ ಪಾರ್ಟಿ ನನ್ನಂತ ಯುವಮನಸ್ಸುಗಳಲ್ಲಿ ತುಂಬುತ್ತಿದೆ. 

ಒಂದು ರಾಜಕೀಯ ಪಕ್ಷ ಎಂದರೇ ಬರೀ ತನ್ನ ಮೇಲಿನ ನಾಯಕನಿಗೆ ಜೈಕಾರ ಹಾಕುತ್ತಾ, ದುಡ್ಡಿದ್ದವರ ದರ್ಬಾರ ಎಂದು ತಿಳಿದ ಜನರ ಗೀಳನ್ನು ಹೋಗಲಾಡಿಸಲು ಬಿಜೆಪಿ ಎನ್ನುವಂತ ಪಕ್ಷ ದೇಶಕ್ಕೆ ಸದಾ ಮಾದರಿ.

ಈ ಪಕ್ಷದಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶ ಮತ್ತು ಸೇವೆ ಮಾಡುತ್ತ ನಾಯಕತ್ವ ಗುಣವನ್ನು ಬೆಳಸುವ ಸಿದ್ದಾಂತ ಆಧರಿತವಾದಿಗೆ. ತನ್ನ ಆಚಾರ ಪದ್ಧತಿಯ ಮೂಲಕ ಎಲ್ಲ ಪಕ್ಷಗಳಿಗಿಂತಲೂ ಭಾಜಪಾ ವಿಭಿನ್ನವಾಗಿದೆ.

ಇವತ್ತು ಮಂಡಲ, ತಾಲೂಕು, ಜಿಲ್ಲಾ ಸ್ಥರದ ಪದಾಧಿಕಾರಿಗಳನ್ನು ಒಮ್ಮೆ ನಾವು ಗಮನಿಸಿದರೆ ಸರ್ವೆ ಸಾಮಾನ್ಯ ಎಲ್ಲರೂ ಅತೀ ಸಾಮಾನ್ಯ ಮತ್ತು ಮಧ್ಯಮ ಕುಟುಂಬವರ್ಗದವರಾಗಿದ್ದಾರೆ.

ಇವರೆಲ್ಲರೂ ಪಕ್ಷನಿಷ್ಠರು, ಸಿದ್ಧಾಂತಗಳಿಗೆ ಕಟಿಬದ್ಧರು, ಪಕ್ಷದ ವಿಚಾರಗಳನ್ನು ಮೈಗೂಡಿಸಿಕೊಂಡು ಕಾರ್ಯೋನ್ಮುಖರಾದವರು.

ಇವರ ತಂದೆ ತಾಯಿಗಳು ಯಾರೂ ರಾಜಕೀಯ ಹಿನ್ನಲೆ ಉಳ್ಳವರಾಗಿಲ್ಲ. ಈ ತರಹದ ನಿದರ್ಶನಗಳು ನಮಗೆ ಕಾಣಸಿಗುವುದು ಭಾಜಪಾದಲ್ಲಿ ಮಾತ್ರ! ಇವರಿಗೆ ದೇಶ ಮೊದಲು. 

ಗಿರೀಶ ವಿಠ್ಠಲ ಬಡಿಗೇರ

ಬೆಳಗಾವಿ



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *