ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಂದ ಗುಣಮುಖರಾಗಿರುವ ನಾಲ್ವರನ್ನು ನಿನ್ನೆ ( ಜೂನ್ 7 ರಂದು ರಾತ್ರಿ ) ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.
ಮೇ.21 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಉಪ್ಪಿನ ಬೆಟಗೇರಿಯ ಪಿ- 1507 ( 9 ವರ್ಷ , ಬಾಲಕಿ) , ಪಿ-1508 ( 24 ವರ್ಷ , ಮಹಿಳೆ) , ಮೇ 16 ರಂದು ಸೋಂಕು ದೃಢಪಟ್ಟಿದ್ದ ಧಾರವಾಡ ಓಂ ನಗರ ನಿವಾಸಿ ಪಿ-1060 ( 34 ವರ್ಷ, ಪುರುಷ) .
ಮೇ.23 ರಂದು ಸೋಂಕು ದೃಢಪಟ್ಟಿದ್ದ ಯಾಲಕ್ಕಿ ಶೆಟ್ಟರ ಕಾಲನಿ ನಿವಾಸಿ ಪಿ- 1913 ( 51 ವರ್ಷ , ಪುರುಷ) ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಎಲ್ಲಾ ನಾಲ್ವರು ಮಹಾರಾಷ್ಟ್ರ ರಾಜ್ಯದಿಂದ ಧಾರವಾಡಕ್ಕೆ ಪ್ರಯಾಣ ಮಾಡಿದ್ದ ಹಿನ್ನೆಲೆ ಹೊಂದಿದ್ದರು.
ಆ ಮೂಲಕ ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 38 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ ಎಂದು ಅವರು ತಿಳಿಸಿದ್ದಾರೆ.