ಮೈಸೂರು prajakiran.com : ಟಿವಿ ರಿಮೋಟ್ ಶೆಲ್ ನುಂಗಿ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಇಟ್ಟಿಗೆಗೂಡಿನ ಮಾನಸ ರಸ್ತೆಯ ಮನೆಯೊಂದರಲ್ಲಿ ಇಂತಹ ಮನಕಲಕುವ ಘಟನೆ ನಡೆದಿದ್ದು, ಮಗುವೊಂದು ರಿಮೋಟ್ ಶೆಲ್ ನುಂಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಒಂದೂವರೆ ವರ್ಷದ ಮಗು ಕಳೆದ ಎರಡು ದಿನದ ಹಿಂದೆ ರಿಮೋಟ್ ಶೆಲ್ ನುಂಗಿತ್ತು. ತಂದೆ ಶೆಲ್ವರಾಜ್ ಮಗುವನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದರು.
ಇದಾದ ನಂತರ ಶೆಲ್ ನ್ನ ಶಸ್ತ್ರ ಚಿಕಿತ್ಸೆ ಮಾಡಿ ಹೊರಗೆ ತೆಗೆಯಲಾಗಿತ್ತು.ಆದರೆ ಚಿಕಿತ್ಸೆಯ ನಂತರ ಮಗು ಚೇತರಿಸಿಕೊಳ್ಳದೇ ಸಾವಿಗೀಡಾಗಿದೆ. ಈ ಬಗ್ಗೆ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.