ರಾಜ್ಯ

ಧಾರವಾಡದ ಎತ್ತಿನಗುಡ್ಡ ಸರ್ಕಾರಿ ಶಾಲೆಯಲ್ಲಿ ಬಸವರಾಜ ಕೊರವರ ಸಾರಥ್ಯದಲ್ಲಿ ಮಕ್ಕಳಿಂದ ನೂರಾರು ಸಸಿ ನೆಟ್ಟು ಸಂಭ್ರಮ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜನಜಾಗೃತಿ ಸಂಘ ದಿಂದ “ಮಗುವಿಗೊಂದು ಮರ” ವಿಶೇಷ ಅಭಿಯಾನ

ಧಾರವಾಡ prajakiran. com : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಜನಜಾಗೃತಿ ಸಂಘದ ವತಿಯಿಂದ “ಮಗುವಿಗೊಂದು ಮರ” ವಿಶೇಷ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಎತ್ತಿನಗುಡ್ಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ಸಾರಥ್ಯದಲ್ಲಿ
ನೂರಾರು ಮಕ್ಕಳು ಸಸಿಗಳನ್ನು ನೆಟ್ಟು ಸಂಭ್ರಮಿಸಿದರು.

ಮಕ್ಕಳು ಅತ್ಯಂತ ಉತ್ಸುಕದಿಂದ ಪಾಲ್ಗೊಂಡು ಶಾಲೆಯ ಆವರಣದಲ್ಲಿ ಸಸಿ‌ನೆಟ್ಟು ತಮ್ಮ ಪರಿಸರ ಪ್ರೇಮ‌ ಮರೆಯುವ ಮೂಲಕ
ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ನಮ್ಮ ಎಲ್ಲಾ ಸರಕಾರಿ ಶಾಲೆಗಳು ಸದಾಕಾಲವೂ ಹಚ್ಚಹಸಿರಿನಿಂದ ಕಂಗೋಳಿಸುವಂತೆ ಆಗಬೇಕಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಮಕ್ಕಳ ಸ್ಮೃತಿ ಪಟಲದಲ್ಲಿ ಅಚ್ಚಳಿಯದಂತೆ ಉಳಿಯಬೇಕೆಂಬ ಸದಾಶಯದಿಂದ ಜನಜಾಗೃತಿ ಸಂಘ ದ ವತಿಯಿಂದ “ಮಗುವಿಗೊಂದು ಮರ” ವಿಶೇಷ ಅಭಿಯಾನ ಪ್ರತಿಯೊಂದು ಶಾಲೆಯಲ್ಲಿ ಸಾಧ್ಯವಾದಷ್ಟು ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಯೊಬ್ವರು‌ ಕೈ ಜೋಡಿಸುವ ಮೂಲಕ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ

ಗಿಡ ಮರಗಳನ್ನು ಬೆಳೆಸಿ ನಾಡು ಉಳಿಸುವ ಸಣ್ಣ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಹೇಳಿದರು.

ಅದರ ಅಂಗವಾಗಿ ಇಂದು ಎತ್ತಿನಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿಯಾನ ಯಶಸ್ವಿಯಾಗಿ ನೆರವೇರಿಸಿರುವುದು ಸಂತಸ ತಂದಿದೆ. ಮಕ್ಕಳು ಒಂದೊಂದು ಗಿಡವನ್ನು ತಮ್ಮ ಜವಾಬ್ದಾರಿಯಿಂದ ಹಚ್ಚಿ ಅದನ್ನು ಪೋಷಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವುದು ಅಭಿಮಾನದ ವಿಷಯವಾಗಿದೆ ಎಂದರು.

ಈ ವೇಳೆ ಸುಮಾ ಬಸವರಾಜ ಕೊರವರ, ಎತ್ತಿನಗುಡ್ಡ ಮುಖಂಡರಾದ ಚಂದ್ರಣ್ಣ ತೇಗೂರ, ಡಯಟ್ ಉಪನ್ಯಾಸಕಿ ಛಾಯಾ ಸೂರ್ಯವಂಶಿ, ಜೈ ಕೀರ್ತಿ ಪ್ರಾಥಮಿಕ ಶಾಲೆ ಗರಗದ ನಿವೃತ್ತ ಪ್ರಧಾನ ಗುರುಗಳಾದ

ಎನ್ ಸಂಗೊಳ್ಳಿ, ಪ್ರಧಾನ ಗುರುಗಳಾದ
ರಾಜಣ್ಣನವರ, ಅಪರಾಯುಕ್ತರ ಕಚೇರಿಯ ಯೋಜನಾ ಸಹಾಯಕ
ಪ್ರವೀಣ್ ಬಿರಾದಾರ್, ಸಿ ಆರ್ ಪಿ ವಿಜಯಲಕ್ಷ್ಮಿ ಕಮ್ಮಾರ, ಶಂಕರ ಹಾರಿಕೊಪ್ಪ , ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಾಟೀಲ್, ಪ್ರಧಾನ ಗುರುಗಳಾದ
ಶ್ರೀಮತಿ ಎಲ್ ಕೆ ಪಾಟೀಲ್
ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಜನಜಾಗೃತಿ ಸಂಘದ ಸದಸ್ಯರು ಈ ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *