ಜಿಲ್ಲೆ

ಧಾರವಾಡದ ಹೊಸ ಯಲ್ಲಾಪುರ ತುಂಬಾ ಹಬ್ಬುತ್ತಿರುವ ಗಬ್ಬು ವಾಸನೆ….!

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ದಿಂದ ಧಾರವಾಡದ ಹೊಸ ಯಲ್ಲಾಪುರ ತುಂಬಾ ಗಬ್ಬು ವಾಸನೆ ಹಬ್ಬುತ್ತಿದೆ. ಧಾರವಾಡದ ಜನನೀಬಿಡ ರಸ್ತೆ ಹಾಗೂ ನಗರದ ಒಳಗೆ ಕಸ ವಿಲೇವಾರಿ ಘಟಕ ಇರುವ ಹಿನ್ನೆಲೆಯಲ್ಲಿ ನಗರವಾಸಿಗಳು ನರಕ ಯಾತನೆ ಅನುಭವಿಸುವಂತೆ ಆಗಿದೆ. ಅದರಲ್ಲೂ ಎಲ್ಲಿ ಬೇಕೆಂದರಲ್ಲಿ ಗುಂಪು ಗುಂಪಾಗಿ ಕಸ ಹಾಕಿದ್ದರಿಂದ ಧಾರವಾಡದ ಹೊಸಯಲ್ಲಾಪುರ, ಲಕ್ಷ್ಮಿ ನಗರ, ಜನ್ನತ್ ನಗರ, ದಾನೇಶ್ವರನಗರ, ಗಾಂಧಿನಗರ, ಸೇರಿದಂತೆ ವಿವಿಧ ಕಡೆಗಳಲ್ಲಿ ಗಬ್ಬುನಾತ ಹರಡುತ್ತಿದೆ. ಇದರಿಂದಾಗಿ ಬೇಸತ್ತು […]

ಜಿಲ್ಲೆ

ಧಾರವಾಡದ ಹಲವು ಬಡಾವಣೆಗಳಲ್ಲಿ ಮತ್ತೇ ಬೀದಿ ನಾಯಿಗಳ ಹಾವಳಿ

ಧಾರವಾಡ prajakiran.com : ಧಾರವಾಡದ ಹಲವು ಬಡಾವಣೆಗಳಲ್ಲಿ ಮತ್ತೇ ಬೀದಿ ನಾಯಿಗಳ ಹಾವಳಿ ಶುರುವಾಗಿದೆ.   ಇದರಿಂದಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಂಕಷ್ಟದ ವಾತಾವರಣ ನಿರ್ಮಾಣವಾಗಿದ್ದು, ಹೊರಗಡೆ ಮಕ್ಕಳನ್ನು ಏಕಾಂಗಿಯಾಗಿ ಕಳುಹಿಸಬೇಕಾದರೆ ಹಲವು ಬಾರಿ ವಿಚಾರ ಮಾಡಬೇಕಿದೆ. ಧಾರವಾಡದ ಕೆ.ಸಿ. ಪಾರ್ಕ್ ರಸ್ತೆ, ಮಾಳಮಡ್ಡಿ, ಶ್ರೀರಾಮನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಿಂಡು ಹಿಂಡಾಗಿ ಸಂಚರಿಸುವ ಬೀದಿ ನಾಯಿಗಳು ಸ್ಥಳೀಯರನ್ನು ಆತಂಕಕ್ಕೆ ದೂಡಿವೆ.   ಒಂದೊಂದು ಬಡಾವಣೆಯಲ್ಲಿ ಕನಿಷ್ಟ ಎನಿಲ್ಲವೆಂದರೂ ನಾಲ್ಕೈದು ನಾಯಿಗಳು ಕಾಣಸಿಗುತ್ತವೆ. ಶ್ರೀರಾಮನಗರದಲ್ಲಿ ಹೆಚ್ಚು ಕಡಿಮೆ […]

ರಾಜ್ಯ

ಧಾರವಾಡದಲ್ಲಿ ಒಂಬತ್ತು ದಿನಗಳ ಬಳಿಕ ಸೀಲ್ ಡೌನ್ ಗೆ ಬಂದ ಸಿಬ್ಬಂದಿ

ಧಾರವಾಡ prajakiran.com  :  ಧಾರವಾಡದಲ್ಲಿ ಆರೋಗ್ಯ ಇಲಾಖೆ ಪದೆ ಪದೇ  ಯಡವಟ್ಟು ಮಾಡುತ್ತಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕೋವಿಡ್‌ನಿಂದ ಒಬ್ಬ ವ್ಯಕ್ತಿ ಸತ್ತು ಅಂತ್ಯ ಸಂಸ್ಕಾರದ ಬಳಿಕವೂ ಆರಾಮ ಇದಾರಾ ಅಂತಾ ಕರೆ ಬಂದಿರುವುದು ಕೇಳಿ ಮನೆ ಮಂದಿಯಲ್ಲಾ ಆತಂಕಗೊಂಡಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಮಾತು ಕೇಳಿ ಮನೆಯವರಿಗೆ ಶಾಕ್ ಆಗಿದೆ. ಅಲ್ಲದೆ, ಆಕ್ರೋಶದ ಕಟ್ಟೆಯೂ ಒಡೆದು ಹೋಗಿದೆ. ಧಾರವಾಡದ ಮೃತ್ಯುಂಜಯ ನಗರ ಕೊಟ್ಟಣದ ಓಣಿಯ ನಿವಾಸಿಯೊಬ್ಬರು ಕೋವಿಡ್‌ನಿಂದ ಜುಲೈ 24ರಂದು ನಿಧನವಾಗಿದ್ದರು. ಆ ವ್ಯಕ್ತಿಯ […]

ರಾಜ್ಯ

ಧಾರವಾಡದ ಎಂ.ಆರ್. ನಗರ ನಾಲ್ಕು ದಿನಗಳಾದರೂ ಸೀಲ್ ಡೌನ್ ಆಗಿಲ್ಲ…..!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. , ಈಗಾಗಲೇ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 3380 ಕ್ಕೆ ಏರಿದ್ದು, ಈ ಪೈಕಿ ಇದುವರೆಗೆ 1389 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. ಇದಲ್ಲದೆ, ಇನ್ನುಳಿದ 1888 ಜನರು ಜಿಲ್ಲೆಯ ವಿವಿಧ ಕೋವಿಡ್ ನಿಯೋಜಿತ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 36 ಜನ ಐಸಿಯುನಲ್ಲಿದ್ದಾರೆ. ಈವರೆಗೆ ಒಟ್ಟು 103 ಜನ ಧಾರವಾಡ ಜಿಲ್ಲೆಯಲ್ಲಿ ಕರೋನಾ ಹಾಗೂ ಇನ್ನಿತರ ಸೊಂಕಿನಿಂದ ಚಿಕಿತ್ಸೆ […]