hubli kims
ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಮತ್ತೇ 56 ಜನರಿಗೆ ಕರೋನಾ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮತ್ತೆ ಹೊಸದಾಗಿ 56 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಆತಂಕದ ಸಂಗತಿಯೆಂದರೆ 13 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಲ್ಪ ಸಮಾಧಾನದ ಸಂಗತಿಯೆಂದರೆ ಇವತ್ತು 22 ಜನ ಗುಣಮುಖರಾಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ನಿನ್ನೇ 18 ಜನರಿಗೆ ಹೇಗೆ ಕರೋನಾ ಬಂತು ಎಂಬ ಮಾಹಿತಿ ಇರದಿದ್ದರೆ ಇಂದು ಕೂಡ 11 […]

ರಾಜ್ಯ

ಧಾರವಾಡ 5, ಹುಬ್ಬಳ್ಳಿ 39, ನವಲಗುಂದ 1 ಸೇರಿ 45 ಜನರಿಗೆ ಕರೋನಾ

*ಒಟ್ಟು 510 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 222 ಜನ ಗುಣಮುಖ ಬಿಡುಗಡೆ* *277ಸಕ್ರಿಯ ಪ್ರಕರಣಗಳು* *ಇದುವರೆಗೆ 11 ಜನ  ಮರಣ* ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ 45 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 510 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಈ ಪೈಕಿ ಇದುವರೆಗೆ 222 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 277 ಜನರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸೇರಿದಂತೆ ನಿಯೋಜಿತ […]

ಜಿಲ್ಲೆ

ಧಾರವಾಡದ ಎಸ್‌ಡಿಎಂನಲ್ಲಿ 4,  ಹುಬ್ಬಳ್ಳಿಯ ಕಿಮ್ಸ್ ನಲ್ಲಿ 160 ಕರೋನಾ ಸೋಂಕಿತರು

ಧಾರವಾಡ prajakiran.com  : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ 160, ಎಸ್‌ಡಿಎಂನಲ್ಲಿ 4, ಹಾಗೂ ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 22 ಸೇರಿ ಒಟ್ಟು 186 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಯಶವಂತ ಮದೀನಕರ ತಿಳಿಸಿದರು. ಜುಲೈ 1 ರಂದು ವರದಿಯಾದ ತೀವ್ರ ಉಸಿರಾಟದ ತೊಂದರೆ ಇರುವ ಎಲ್ಲಾ 8  ಪ್ರಕರಣಗಳು ಹಾಗೂ 90 ಐಎಲ್‌ಐ ಪ್ರಕರಣಗಳಲ್ಲಿ 75 ಪ್ರಕರಣಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ […]

ರಾಜ್ಯ

ಧಾರವಾಡದಲ್ಲಿ 2, ಹುಬ್ಬಳ್ಳಿಯಲ್ಲಿ8, ಹಾಲ್ ಕುಸುಗಲ್ ನಲ್ಲಿ 1 ಸೇರಿ 17 ಜನರಿಗೆ ಕರೋನಾ    

*ಒಟ್ಟು 328 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 179 ಜನ ಗುಣಮುಖ ಬಿಡುಗಡೆ* *143 ಸಕ್ರಿಯ ಪ್ರಕರಣಗಳು* *ಇದುವರೆಗೆ ಆರು ಜನರ ಮರಣ* ಧಾರವಾಡ  : ಧಾರವಾಡ ಜಿಲ್ಲೆಯಲ್ಲಿ ಸೋಮವಾರ 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 328 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಇದುವರೆಗೆ 179 ಜನ ಸೋಂಕಿತರು ಕರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.143 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನ ಮೃತಪಟ್ಟಿದ್ದಾರೆ ಎಂದು ಅವರು […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಸೋಮವಾರ 17 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮತ್ತೆ ಹೊಸದಾಗಿ 17  ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಡಿಡಬ್ಲ್ಯೂಡಿ 312-ಪಿ- 13465 ಸೋಂಕಿತ 55 ವರ್ಷದ ಮಹಿಳೆ,  ಡಿಡಬ್ಲ್ಯೂಡಿ 313-ಪಿ- 13466 ಸೋಂಕಿತ 27 ವರ್ಷದ ಯುವಕ,       ಡಿಡಬ್ಲ್ಯೂಡಿ 314-ಪಿ- 13467 ಸೋಂಕಿತ 42 ವರ್ಷದ ವ್ಯಕ್ತಿ,   ಡಿಡಬ್ಲ್ಯೂಡಿ 315-ಪಿ- 13468 ಸೋಂಕಿತ 44 ವರ್ಷದ ವ್ಯಕ್ತಿ,       ಡಿಡಬ್ಲ್ಯೂಡಿ 316-ಪಿ- 13469 […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ 468 ಜನರ ವರದಿ ಬಾಕಿ ಇದೆ ಎಂದ ಸಚಿವ ಶೆಟ್ಟರ್

ಧಾರವಾಡ prajakiran.com  : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಈವರೆಗೆ 24,386 ಜನರನ್ನ‌ ಟೆಸ್ಟಿಂಗ್ ಮಾಡಲಾಗಿದೆ. 23,783 ಸ್ಯಾಂಪಲ್ ನೆಗಟಿವ್ ಬಂದಿವೆ. ಈ ಪೈಕಿ 468 ವರದಿ ಬಾಕಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿಕೆ ನೀಡಿದ್ದಾರೆ. ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ಕುರಿತು ವಿವರ ನೀಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 139 ಸಕ್ರಿಯ ಪ್ರಕರಣಗಳಿವೆ. ಈವರೆಗೆ 6 ಜ‌ನರು ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ನಿಂದ ಮೃತ ಪಟ್ಟಿದ್ದಾರೆ. ಲಾಕ್ ಡೌನ್ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ…!

ಧಾರವಾಡ prajakiran.com : ಬೆಳಗಾವಿ, ಧಾರವಾಡ ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಜನ ಜೀವನಅಸ್ತವ್ಯಸ್ತಗೊಂಡಿದೆ. ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಇದರಿಂದಾಗಿ ಆತಂಕಗೊಂಡಿದ್ದಾರೆ. ನೀರಿನ ರಭಸಕ್ಕೆ ವ್ಯಕ್ತಿಯೊಬ್ಬ ಹಳ್ಳದಲ್ಲಿ ಸಿಲುಕಿ ಕೆಲ ಕಾಲ ಪರದಾಡಿದ್ದಾನೆ. ಆನಂತರ ನೀರಿನ ರಭಸ ಹೆಚ್ಚಾಗಿದ್ದರಿಂದ ತೇಲಿ ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ. ಮಡಿವಾಳಪ್ಪ‌ ಜಕ್ಕನವರ ಎಂಬಾತನೇ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ. ಈ ಸಂದರ್ಭದಲ್ಲಿ ನೀರಿನಲ್ಲಿ ತೇಲಿಹೋಗಿದ್ದಾನೆ. ಆತನನ್ನು ಹಗ್ಗದ ಸಹಾಯದಿಂದ […]

ರಾಜ್ಯ

ಧಾರವಾಡ ಜಿಲ್ಲೆಯ ಕರೋನಾ ಪಾಸಿಟಿವ್ ಸಂಖ್ಯೆ 293ಕ್ಕೆ ಏರಿಕೆ

*ಇದುವರೆಗೆ 159 ಜನ ಗುಣಮುಖ ಬಿಡುಗಡೆ* *129 ಸಕ್ರಿಯ ಪ್ರಕರಣಗಳು *ಇದುವರೆಗೆ ಐವರ ಮರಣ ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಶನಿವಾರ ಮತ್ತೆಹೊಸದಾಗಿ 19 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 259 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಈಗಾಗಲೇ 159 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 129 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ ಎಂದು ಅವರು ವಿವರಿಸಿದ್ದಾರೆ. ಕರೋನಾ ಸೋಂಕಿನಿಂದಾಗಿ ಧಾರವಾಡ ಜಿಲ್ಲೆಯಲ್ಲಿ […]

ರಾಜ್ಯ

ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಮೊರಬ, ಇಂಗಳಹಳ್ಳಿ, ತೆರ್ಲಘಟ್ಟ ಸೇರಿ ಹಲವು ಹಳ್ಳಿ ಸೀಲ್ ಡೌನ್    

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ ಮತ್ತೆ ಹೊಸದಾಗಿ ೩೪ ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನಲೆಯಲ್ಲಿ ಸೋಂಕಿತರ ವಾಸವಿರುವ ಹಲವು ಹಳ್ಳಿಗಳ ಓಣಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಕರೋನಾ ಸೋಂಕಿನಿಂದ ಬಳಲುವವರ ಮನೆಯ ಬೀದಿಗಳನ್ನು ಸೀಲ್ ಡೌನ್   ಮಾಡಲಾಗಿದೆ. ಜೊತೆಗೆ ಅವರ ಮನೆಯ ಬೀದಿಯ ಸುತ್ತಮುತ್ತ ಇರುವ 200ಮೀಟರ್  ಪ್ರದೇಶ ಬಫರ್ ಜೋನ್ ಎಂದು ಘೋಷಿಸಲಾಗಿದೆ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಎರಡನೇ ಬಲಿ

ಧಾರವಾಡ prajakiran.com :  ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೇಟಿನ್  ದೃಢಪಡಿಸಿದೆ. ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕರೋನಾ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಪಿ-6258 ನೇ ಸೋಂಕಿತ ೭೦ ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅವರು ಧಾರವಾಡಕ್ಕೆ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದ ಪ್ರಯಾಣದ ಹಿನ್ನಲೆಯನ್ನು ಹೊಂದಿದ್ದರು. ಮೃತ ವೃದ್ದನನ್ನು ಹುಬ್ಬಳ್ಳಿಯ ಭೈರಿದೇವರಕೊಪ್ಪದ ಶಾಂತಿ‌ ಕಾಲನಿ […]