ರಾಜ್ಯ

ಧಾರವಾಡ 5, ಹುಬ್ಬಳ್ಳಿ 39, ನವಲಗುಂದ 1 ಸೇರಿ 45 ಜನರಿಗೆ ಕರೋನಾ

*ಒಟ್ಟು 510 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 222 ಜನ ಗುಣಮುಖ ಬಿಡುಗಡೆ*

*277ಸಕ್ರಿಯ ಪ್ರಕರಣಗಳು*

*ಇದುವರೆಗೆ 11 ಜನ  ಮರಣ*

ಧಾರವಾಡ prajakiran.com : ಜಿಲ್ಲೆಯಲ್ಲಿ ಶನಿವಾರ 45 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ . ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 510 ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಈ ಪೈಕಿ ಇದುವರೆಗೆ 222 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 277 ಜನರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸೇರಿದಂತೆ ನಿಯೋಜಿತ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಈವರೆಗೆ ಜಿಲ್ಲೆಯಲ್ಲಿ ಚಿಕಿತ್ಸೆ ಫಲಿಸದೆ 11 ಜನ ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.



ಪಿ- 20017 ( 38  ವರ್ಷ,ಮಹಿಳೆ ) ನವನಗರ ನಿವಾಸಿ, ಪಿ-20018 ( 20ವರ್ಷ,ಪುರುಷ) ಕೇಶ್ವಾಪುರ ನಿವಾಸಿ. ಇವರು ಪಿ-15606 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-20019  (42 ವರ್ಷ,ಪುರುಷ) ಹುಬ್ಬಳ್ಳಿ ರವಿನಗರ ನಿವಾಸಿ. ಪಿ-10737 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ -20020  (63 ವರ್ಷ, ಪುರುಷ) ಹುಬ್ಬಳ್ಳಿ ಗಣೇಶ ನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -20021 ( 28  ವರ್ಷ,ಪುರುಷ ) ಹುಬ್ಬಳ್ಳಿ ಕುಸುಗಲ್ ರಸ್ತೆ ನಿವಾಸಿ. ಪಿ-16937 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ -20022 (32 ವರ್ಷ,ಮಹಿಳೆ) ಹುಬ್ಬಳ್ಳಿ ವೀರಾಪೂರ ರಸ್ತೆ, ಸಿದ್ಧನಪೇಟೆ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ -20023 (37 ವರ್ಷ,ಮಹಿಳೆ)  ಹುಬ್ಬಳ್ಳಿ ಸೋನಿಯಾಗಾಂಧಿ ನಗರ ನಿವಾಸಿ.ಪಿ -20024 (45 ವರ್ಷ,ಮಹಿಳೆ) ಹುಬ್ಬಳ್ಳಿ ಯಲ್ಲಾಪುರ ಓಣಿ ಗೌಸ್ ಮೋಮಿನ್ ದರ್ಗಾ ಹತ್ತಿರ ನಿವಾಸಿ.

ಪಿ -20025 (40 ವರ್ಷ, ಮಹಿಳೆ) ಹುಬ್ಬಳ್ಳಿ ವೀರಾಪುರ ಓಣಿ ಕರಿಯಮ್ಮನ ಗುಡಿ ಹತ್ತಿರದ ನಿವಾಸಿ. ಪಿ -20026 (25 ವರ್ಷ,ಪುರುಷ) ಹಳೆಹುಬ್ಬಳ್ಳಿ ಕಲ್ಮೇಶ್ವರ ಓಣಿ ನಿವಾಸಿ. ಪಿ -20027 (45 ವರ್ಷ,ಮಹಿಳೆ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ. ಪಿ -20028 (20ವರ್ಷ,ಪುರುಷ ) ಹುಬ್ಬಳ್ಳಿ ವೀರಾಪೂರ ಓಣಿ ನಿವಾಸಿ.

ಪಿ -20029 (32 ವರ್ಷ,ಮಹಿಳೆ) ಕುಸುಗಲ್ ಗ್ರಾಮದ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -20030 (42 ವರ್ಷ,ಪುರುಷ) ಹುಬ್ಬಳ್ಳಿ ವೀರಾಪೂರ ರಸ್ತೆ,ಸಿದ್ದನಪೇಟೆ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ -20031 (45 ವರ್ಷಪುರುಷ ) ಹುಬ್ಬಳ್ಳಿ ಎಸ್.ಎಂ.ಕೃಷ್ಣ ನಗರ ನಿವಾಸಿ.ಪಿ -20032 (20 ವರ್ಷ,ಪುರುಷ) ಹುಬ್ಬಳ್ಳಿ ಬೀಡನಾಳ ,ಸೋನಿಯಾಗಾಂಧಿ ನಗರ ನಿವಾಸಿ. ಪಿ-20033 (34 ವರ್ಷ,ಪುರುಷ) ಹುಬ್ಬಳ್ಳಿ ಬೈಲಪ್ಪನವರ ನಗರ ನಿವಾಸಿ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-20034 (65 ವರ್ಷ,ಮಹಿಳೆ) ಹುಬ್ಬಳ್ಳಿ ದೇಶಪಾಂಡೆ ನಗರ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-20035 (68 ವರ್ಷ,ಮಹಿಳೆ) ಪಿ-20036(30 ವರ್ಷ,ಮಹಿಳೆ) ಇವರಿಬ್ಬರೂ ಧಾರವಾಡ ತಾಲೂಕು ಸೋಮಾಪುರ ನಿವಾಸಿಗಳು. ಪಿ-14528 ಅವರೊಂದಿಗೆ ಸಂಪರ್ಕ ಹೊಂದಿದ್ದರು.



ಪಿ-20037 (36  ವರ್ಷ,  ಪುರುಷ) ಧಾರವಾಡ ಕೋರ್ಟ ರಸ್ತೆ ನಿವಾಸಿ.ತೆಲಂಗಾಣ ರಾಜ್ಯದಿಂದ ಹಿಂದಿರುಗಿದವರು.ಪಿ-20038 (39 ವರ್ಷ,ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆ, ಬ್ಯಾಳಿ ಪ್ಲಾಟ್ ಮೂರನೇ ಕ್ರಾಸ್ ಮಸೀದಿ ಹತ್ತಿರ ನಿವಾಸಿ.

ಪಿ-20039 (26 ವರ್ಷ, ಪುರುಷ)  ಹುಬ್ಬಳ್ಳಿ ಅಯೋಧ್ಯಾನಗರದ ಶರಾವತಿನಗರ ನಿವಾಸಿ. ಪಿ-20040 (41 ವರ್ಷ ಪುರುಷ ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ಮೂರನೇ ಕ್ರಾಸ್ ನಿವಾಸಿ.

ಪಿ-20041 (32 ವರ್ಷ,ಪುರುಷ ) ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿ. ಪಿ-20042 (45ವರ್ಷ, ಮಹಿಳೆ) ಹಳೆಹುಬ್ಬಳ್ಳಿ ಗಿರಿಯಾಲ ರಸ್ತೆಯ ಈಶ್ವರ ನಗರ ನಿವಾಸಿ. ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ-20043 (43 ವರ್ಷ,ಪುರುಷ)  ಧಾರವಾಡ ಕೃಷಿ ವಿ.ವಿ.ಹತ್ತಿರ ನಿವಾಸಿ.ಅಂತರ ಜಿಲ್ಲಾ ಪ್ರಯಾಣ ವಿಜಯಪುರ. ಪಿ-20044 (43 ವರ್ಷ,ಮಹಿಳೆ ) ಹಳೆಹುಬ್ಬಳ್ಳಿ ಜಗದೀಶ ನಗರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-20045 (32 ವರ್ಷ, ಪುರುಷ) ಹುಬ್ಬಳ್ಳಿ ಬಂಕಾಪುರ ಚೌಕ ಜಿಗಳೂರ ಬಿಲ್ಡಿಂಗ್ ಹತ್ತಿರದ ನಿವಾಸಿ.ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಪಿ-20046 (24 ವರ್ಷ,ಪುರುಷ) ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ ನಿವಾಸಿ. ಪಿ-12128 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-20047 (35 ವರ್ಷ,ಪುರುಷ) ಹುಬ್ಬಳ್ಳಿ ಗಣೇಶಪೇಟೆ ,ಕುಂಬಾರ ಓಣಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ



ಪಿ-20048 (66 ವರ್ಷ, ಮಹಿಳೆ) ಹುಬ್ಬಳ್ಳಿ ಗಾಯತ್ರಿ ಕಾಲನಿ ನಿವಾಸಿ. ನೆಗಡಿ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-20049 (27 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆಯ ಕೋಟಿಲಿಂಗನಗರ ಈಶ್ವರ ದೇವಸ್ಥಾನ ಹತ್ತಿರದ ನಿವಾಸಿ.ಬೆಂಗಳೂರು ಪ್ರಯಾಣ ಹಿನ್ನೆಲೆ.

ಪಿ-20050 (65 ವರ್ಷ ಪುರುಷ)  ಹುಬ್ಬಳ್ಳಿ ಯಲ್ಲಾಪುರ ಓಣಿ, ಪಾಟೀಲ ಗಲ್ಲಿ ನಿವಾಸಿ.ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-20051 (31 ವರ್ಷ,ಮಹಿಳೆ) ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-20052 (33 ವರ್ಷ ಪುರುಷ) ಇವರಿಬ್ಬರೂ ಹುಬ್ಬಳ್ಳಿ ನಗರದ ಗದಗ ರಸ್ತೆಯ ಶಾಲಿನಿ ಪಾರ್ಕ್ ನಿವಾಸಿಗಳು. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ-20053 (46 ವರ್ಷ,ಪುರುಷ)  ಹುಬ್ಬಳ್ಳಿ ಮಯೂರ ನಗರ ನಿವಾಸಿ. ಪಿ-10806 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ-20054 (32 ವರ್ಷ, ಪುರುಷ) ಹುಬ್ಬಳ್ಳಿ ಅಮರಗೋಳದ ಫ್ಲೋರಾ ಪಾರ್ಕ್ ನಿವಾಸಿ . ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ-20055 ( 56 ವರ್ಷ, ಮಹಿಳೆ) ಹುಬ್ಬಳ್ಳಿ ಬಿಡನಾಳ, ಮಾರುತಿ ನಗರ ನಿವಾಸಿ.ಕನ್ಟೈನ್ಮೆಂಟ್ ಜೋನ್ ನ ಸಂಪರ್ಕ.

ಪಿ-20056 ( 65 ವರ್ಷ, ಪುರುಷ ) ನವಲಗುಂದ ತಾಲೂಕು ಮೊರಬ ನಿವಾಸಿ. ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ-20057 ( 55 ವರ್ಷ, ಮಹಿಳೆ ) ಹುಬ್ಬಳ್ಳಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-20058 ( 67 ವರ್ಷ, ಮಹಿಳೆ ), ಪಿ-20059 ( 60 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಗುರುನಾಥ ನಗರ ನಿವಾಸಿಗಳು.

ಪಿ-20060 ( 40 ವರ್ಷ, ಪುರುಷ) ಹುಬ್ಬಳ್ಳಿ ಟಿಪ್ಪು ನಗರ ನಿವಾಸಿ‌. ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.



ಪಿ – 16936 ಸೋಂಕಿತ 73 ವರ್ಷದ ವೃದ್ದ ಕಳೆದ  10 ದಿನಗಳಿಂದ ತೀವ್ರ ಉಸಿರಾಟ ಹಾಗೂ ಕಳೆದ ನಾಲ್ಕು ದಿನಗಳಿಂದ ಒಣ ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈರಂದು ದಾಖಲಾಗಿದ್ದರು. ಜುಲೈ 3ರಂದು ಇವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಪಿ-12138 ಸೋಂಕಿತ 82 ವರ್ಷದ ವೃದ್ದ ತೀವ್ರ ಉಸಿರಾಟ ಹಾಗೂ  ಒಣ ಕೆಮ್ಮು, ಜ್ವರ ಹಾಗೂ ಡಿಎಂ ಹಾಗೂ ಹೆಚ್ ಟಿ ನಿಂದ ಬಳಲುತ್ತಿದ್ದರು. ಜೂನ್ 27 ರಂದು ದಾಖಲಾಗಿದ್ದರು. ಇವರು ಚಿಕಿತ್ಸೆ ಫಲಿಸದೆ ಜುಲೈ 2ರಂದು ಸಾವನ್ನಪ್ಪಿದ್ದಾರೆ.

  ಪಿ-20061 ಸೋಂಕಿತ 80 ವರ್ಷದ ವೃದ್ದ ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಧಾರವಾಡ ರೀಗಲ್ ಸರ್ಕಲ್ ಮಾನೆ ಚಾಳ ನಿವಾಸಿ ಜುಲೈ 1ರಂದು ಮರಣ ನಂತರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *