ಮುಂಬೈ (ಮಹಾರಾಷ್ಟ್ರ) prajakiran.com : ದೇಶ ಸೇರಿದಂತೆ ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ.
ಈ ಕಾರಣದಿಂದಾಗಿ ಈಗಾಗಲೇ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ.
ಈ ಹಿನ್ನೆಲೆ ಮದ್ಯದಂಗಡಿಗಳು ಬಂದ್ ಮಾಡಲಾಗಿದ್ದು, ಮದ್ಯ ಸಿಗದೇ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ 7 ಜನರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಯವತ್ ಮಲ್ ಜಿಲ್ಲೆಯ ವಣಿ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರು ಕೂಲಿ ಕಾರ್ಮಿಕರು ಎನ್ನಲಾಗಿದೆ.
ಮದ್ಯದಂಗಡಿಗಳೆಲ್ಲ ಬಂದ್ ಆಗಿದ್ದರಿಂದ, ಮದ್ಯ ಪಡೆಯಲು ಸಾಧ್ಯವಾಗದೇ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ವಾನಿ ಪೊಲೀಸ್ ಠಾಣೆಯ ಉಪ ವಿಭಾಗಾಧಿಕಾರಿ ಅಜಯ್ ಪೂಜಾಲ್ವರ್ ತಿಳಿಸಿದ್ದಾರೆ.