ಪಣಜಿ prajakiran.com : ದೇಶದಲ್ಲಿ ನಿಧಾನವಾಗಿ ತನ್ನ ಪರಿಣಾಮವನ್ನು ಬೀರುತ್ತಿರುವ ಬ್ಲ್ಯಾಕ್ ಫಂಗಸ್ ರಾಜ್ಯದಲ್ಲಿ ಮೊದಲ ಬಲಿ ಪಡೆದಿದೆ.
ರಾಜ್ಯದಲ್ಲಿ ಸದ್ಯ 6 ಜನ ಬ್ಲ್ಯಾಕ್ ಫಂಗಸ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಾಂಬೋಲಿಂ ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್ ಮಾಹಿತಿ ನೀಡಿದ್ದಾರೆ.
ಬಾಂಬೋಲಿಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 6 ಜನ ಕೋವಿಡ್ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಇರುವುದು ಖಚಿತವಾಗಿದೆ.
ಇವರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಡಾ. ಶಿವಾನಂದ ಬಾಂದೇಕರ್ ಮಾಹಿತಿ ನೀಡಿದ್ದಾರೆ.