ನವದೆಹಲಿ prajakiran.com : ದೇಶದಲ್ಲಿ ಕೊರೋನಾ ಎರಡನೇ ಅಲೆಯು ಜನರನ್ನು ಇನ್ನಿಲ್ಲದಂತೆ ಹಿಂಡಿಹಿಪ್ಪೆ ಮಾಡಿದೆ. ಆದರೆ ಇದೀಗ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ತಜ್ಞರ ಹೇಳಿಕೆಯಿಂದ ಗರಬಡಿದಂತಾಗಿದೆ.
ತಜ್ಞರ ಈ ಹೇಳಿಕೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಮುಂದಿನ 10 ರಿಂದ 12 ದಿನಗಳಲ್ಲಿ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ನಿರ್ಧರಿಸಿದೆ.
2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಆರಂಭದಲ್ಲಿ ಮಕ್ಕಳಿಗೆ ಪ್ರಾಯೋಗಿಕವಾಗಿ ಲಸಿಕೆ ನೀಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ಮಕ್ಕಳಲ್ಲಿ ಕೊರೋನಾ ತೀವ್ರತರವಾದಂತ ಲಕ್ಷಣ ಕಂಡು ಬರೋದಿಲ್ಲ.
ಸಾವು ನೋವಿನ ಅಂಕಿ ಅಂಶ ಮುಚ್ಚಿಡದಂತೆ ವರದಿಯನ್ನು ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿರುವುದಾಗಿ ತಿಳಿಸಿದ್ದಾರೆ.