ಬಾಲಿವುಡ್ ಗಿಂತ ಸ್ಯಾಂಡಲ್ ವುಡ್ ನಂಟು ದೊಡ್ಡದು
ಬೆಂಗಳೂರು prajakiran.com : ಮಾದಕ ವಸ್ತುಗಳ ನಶೆಯ ನಂಟು ಹೊಂದಿದ ಸ್ಯಾಂಡಲ್ ವುಡ್ ನ 6 ನಟ, 9 ನಟಿಯರ ಹೆಸರುಗಳನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ನಿರ್ದೇಶಕ ಇಂದ್ರಜೀತ ಲಂಕೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸ್ಯಾಂಡಲ್ ವುಡ್ ಗೆ ಅಂತರ್ ರಾಷ್ಟ್ರೀಯ ಡ್ರಗ್ಸ್ ಪೆಡಲ್ಸರ್ ಜಾಲದ ನಂಟಿದೆ. ನೆಜೆರಿಯನ್ ಪ್ರಜೆಗಳ ಜೊತೆಗೆ ಹಾಗೂ ವಿದೇಶಿಗಳ ಜೊತೆಗೆ ಸಂಪರ್ಕವಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಇಂತಹವರು ಇವರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಗಳಿವೆ. ಅವುಗಳ ಸುಳಿವು ಆಧಾರದ ಮೇಲೆ ತನಿಖೆ ಜಾಡು ಹಿಡಿದರೆ ಸತ್ಯಾ ಸತ್ಯತೆ ಹೊರಬೀಳಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ನಟಅರ್ಜುನ ಸರ್ಜಾ ಕುಟುಂಬದ ಆಪ್ತ ಪ್ರಶಾಂತ ಸಂಬರಗಿ, ಬಾಲಿವುಡ್ ಮಂದಿಗಿಂತ ಸ್ಯಾಂಡಲ್ ವುಡ್ ಮಂದಿಯೇನು ಕಡಿಮೆಯಿಲ್ಲ. ಇದೊಂದು ದೊಡ್ಡ ಜಾಲವಿದೆ ಎಂದು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ನಟ ಚೇತನಕುಮಾರ್, ಈ ಬಗ್ಗೆ ಕಿಡಿಕಾರಿದ್ದು, ಹಣಕ್ಕಾಗಿ ಜೂಜು, ಮದ್ಯ, ಗುಟ್ಕಾ ಜಾಹಿರಾತುಗಳಲ್ಲಿ ನಟಿಸುವ ನಟಿ, ನಟರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.