sunil puranik mother
ಸಿನಿಮಾ

ಸುನೀಲ್ ಪುರಾಣಿಕ್ ಗೆ ಮಾತೃ ವಿಯೋಗ

ಧಾರವಾಡ prajakiran.com : ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರ ತಾಯಿ ಕಮಲಾಬಾಯಿ ನರಸಿಂಹಚಾರ್ ಪುರಾಣಿಕ್ ಅವರು ನಿನ್ನೆ ಮಂಗಳವಾರ ಆಗಸ್ಟ್ 2 ರಾತ್ರಿ ಧಾರವಾಡದ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು 84ವರ್ಷ ವಯಸ್ಸಾಗಿತ್ತು.

ತಮ್ಮ ಪತಿ ನಿವೃತ್ತ ಉಪ ತಹಸೀಲ್ದಾರ್ ನರಸಿಂಹಚಾರ್ ಪುರಾಣಿಕ್ ಅವರು 25 ವರ್ಷಗಳ ಹಿಂದೆ ನಿಧನರಾದ ಬಳಿಕ ಕಮಲಾಬಾಯಿ ಅವರು ಧಾರವಾಡದಲ್ಲಿಯೇ ನೆಲೆಸಿದ್ದರು ಹಾಗೂ ಅವರಿಗೆ ಒಂಬತ್ತು ಮಂದಿ ಮಕ್ಕಳಿದ್ದು ಸುನೀಲ್ ಪುರಾಣಿಕ್ ಕೊನೆಯ ಮಗನಾಗಿದ್ದಾರೆ.

ವಯೋಸಹಜ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾದರು. ಧಾರವಾಡದಲ್ಲಿ ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ಜರುಗಿತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *