ರಾಜ್ಯ

ಸಮಾಜ ಸಂಘಟನೆಗೆ ರೂಪರೇಶಗಳು ಸಿದ್ಧ ಎಂದ ಗಾಲಿ ಜನಾರ್ಧನ ರೆಡ್ಡಿ

ಹೇಮ-ವೇಮ ರೆಡ್ಡಿ ಜನಸಂಘ ಮುಖ್ಯ ಕಾರ್ಯಾಲಯ ಉದ್ಘಾಟನೆ

ಬೆಂಗಳೂರು prajakiran.com : ತತ್ವಜ್ಞಾನಿ, ಮಹಾಯೋಗಿ ಶ್ರೀ ವೇಮನರ ೬೦೯ನೇ ಜಯೋಂತ್ಯೋತ್ಸವ ಹಾಗೂ
ಹೇಮ-ವೇಮ ರೆಡ್ಡಿ ಜನಸಂಘ ಕರ್ನಾಟಕದ ಮುಖ್ಯ ಕಾರ್ಯಾಲಯದ ಉದ್ಘಾಟನೆ ಬೆಂಗಳೂರು ನಗರದ ಬಸವೇಶ್ವರ ಸರ್ಕಾಲ್‌ನಲ್ಲಿರುವ ಹೈಪಾಯಿಂಟ್ ಕಟ್ಟಡದಲ್ಲಿ ಅತ್ಯಂತ ಭಕ್ತಿ ಪೂರ್ವಕವಾಗಿ ನಡೆಯಿತು.

ರೆಡ್ಡಿ ಸಮಾಜದ ಸ್ವಾಮೀಜಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೆಡಗಿನಮುದ್ರ ಅವರು, ವೇಮನವರ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿಗಳು ವೇಮನರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಬಾಂಧವರು ಇತರೆ ಸಮಾಜದ ಬಾಂಧವರೊಂದಿಗೆ ಐಕ್ಯತೆ ಹಾಗೂ ಸ್ನೇಹ ಭಾವನೆಯಿಂದ ಬಾಳಬೇಕು.

ಸಮಾಜದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮಾಜಿ ಸಚಿವ ಗಾಲಿ ಜನಾರ್ಧನ ರಡ್ಡಿ, ಮುಂಬರುವ ದಿನಗಳಲ್ಲಿ ಸಮಾಜದ ಸಂಘಟನೆಗೆ ರೂಪರೇಶಗಳು ಸಿದ್ಧವಾಗಿದ್ದು, ಶೀರ್ಘದಲ್ಲಿಯೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಕಳೆದ ಆರೇಳು ತಿಂಗಳಿನಿಂದ ಕೊರೋನಾ ಮಹಾಮಾರಿಯ ಹಾವಳಿಯ ಹಿನ್ನಲೆಯಲ್ಲಿ, ಸಂಘದ ಕಾರ್ಯಕ್ರಮಕ್ಕೆ ಕೊಂಚ ಅಡೆತಡೆಯಾಗಿದ್ದರೂ, ಈಗ ಕಾರ್ಯಕ್ರಮವನ್ನು ಅತ್ಯಂತ ವೇಗವಾಗಿ ಆರಂಭಿಸಿ, ಸಮಾಜದ ಎಲ್ಲಾ ಮುಖಂಡರುಗಳನ್ನು, ಯುವಕರನ್ನು ಸಂಪರ್ಕಿಸಿ, ಸಮಾಜದ ಸಂಘಟನೆಯನ್ನು ಸಂಘಟಿಸುವತ್ತ ರೂಪರೇಶಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ಲಲ್ಲೇಶ ರೆಡ್ಡಿ ಕಾರ್ಯಾಧ್ಯಕ್ಷರು ಹೇಮ-ವೇಮ ರೆಡ್ಡಿ ಜನಸಂಘ ಕರ್ನಾಟಕ, ಶ್ರೀಧರ ರೆಡ್ಡಿ ಬೆಂಗಳೂರು ನಗರ ಅಧ್ಯಕ್ಷರು, ಸತೀಶ ರೆಡ್ಡಿ ಬೆಂಗಳೂರು ಕಾರ್ಯಾಧ್ಯಕ್ಷರು, ಸಮಾಜದ ಮುಖಂಡರುಗಳಾದ ಶ್ರೀನಾಥ, ವೇಣುಗೋಪಾಲ, ವೆಂಕಟಕೃಷ್ಣ ರೆಡ್ಡಿ, ವಕೀಲರಾದ ನಾಗಭೂಷಣ ರೆಡ್ಡಿ, ಶಂಕರ ನಾರಾಯಣ ರೆಡ್ಡಿ, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ರೆಡ್ಡಿ, ಗುಂಡು ರೆಡ್ಡಿ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *