ಬೆಳಗಾವಿ prajakiran.com : ಕರೋನಾ ಸೋಂಕಿತನ ಸಂಪರ್ಕಕ್ಕೆ ಬಂದವನಿಂದ ಸರ್ಕಾರಿ ಕಚೇರಿಯೂ ಸೀಲ್ ಡೌನ್ ಆದ ಘಟನೆ ಕುಂದಾನಗರಿ ಬೆಳಗಾವಿಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿರುವ ಪಿಡಬ್ಲ್ಯೂಡಿ ಕಚೇರಿಯೇ ಸೀಲ್ ಡೌನ್ ಮಾಡಲಾಗಿದ್ದು, ಸೋಂಕಿತನ ಸಂಪರ್ಕಕ್ಕೆ ಹೋಗಿ ಬಂದವನಿಂದಾಗಿ ಸರ್ಕಾರಿ ಕಚೇರಿ ಸೀಲ್ ಡೌನ್ ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾಡಳಿತ ತಿಳಿಸಿದೆ.
ಲೋಕೊಪಯೋಗಿ ಕಚೇರಿಯಲ್ಲಿ ದ್ವಿತಿಯ ದರ್ಜೆ ಕೆಲಸಗಾರನಾಗಿರುವ ಕೆಲಸಗಾರನಿಂದ ಈಗ ಟೆನ್ಷನ್ ಆಗಿದೆ.
ಸೋಂಕಿತನಿದ್ದ ಕಲ್ಲೋಳಿ ಗ್ರಾಮದ ಮನೆಗೆ ಭೇಟಿ ನೀಡಿ ಬಂದಿದ್ದವನಿಂದ ಈಗ ಎಲ್ಲರಿಗೂ ಕರೋನಾ ಭೀತಿ ಶುರುವಾಗಿದೆ.
ಇದರಿಂದಾಗಿ ಗೋಕಾಕದ ಲೋಕೊಪಯೋಗಿ ಕಚೇರಿಗೆ ಬೀಗ ಮುದ್ರೆ ಬಿದ್ದಿದ್ದು, ಮುಂಜಾಗ್ರತ ಕ್ರಮವಾಗಿ ಲೋಕೊಪಯೋಗಿ ಇಲಾಖೆಯ 14 ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಸರ್ಕಾರಿ ಕಚೇರಿಯ ಸಿಬ್ಬಂದಿಗೂ ಇದೀಗ ಆತಂಕ ಎದುರಾಗಿದ್ದು, ಮುಂಜಾಗೃತಾ ಕ್ರಮವಾಗಿ ಎಲ್ಲರಿಗೂ ಸೀಲ್ ಹಾಕಿ ಹೋಮ್ ಕ್ವಾರಂಟೈನ್ ಗೆ ಗೋಕಾಕ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.