ರಾಜ್ಯ

ಧಾರವಾಡ ಹಾಲಿ ಶಾಸಕ ಅಮೃತ ದೇಸಾಯಿಗೆ ಬಹಿರಂಗ ಸವಾಲು ಹಾಕಿದ ತವನಪ್ಪ ಅಷ್ಟಗಿ

*ಧಾರವಾಡ ಗ್ರಾಮೀಣ ಪಕ್ಷೇತರ ಅಭ್ಯರ್ಥಿಯಾಗಿ‌ ತವನಪ್ಪ ಅಷ್ಡಗಿ, ಬಸವರಾಜ ಕೊರವರ ಏ.19 ರಂದು ನಾಮಪತ್ರ*

*ಹಾಲಿಶಾಸಕ ಅಮೃತ ದೇಸಾಯಿಗೆ ಬಹಿರಂಗ ಸವಾಲು ಹಾಕಿದ ತವನಪ್ಪ ಅಷ್ಟಗಿ*

*ಒಂದು ಕೋಟಿ ಗುತ್ತಿಗೆ ನೀಡಲು ಹತ್ತು ಲಕ್ಷ ಅಡ್ವಾನ್ಸ್ ಗರಗ ಮಡಿವಾಳ ಅಜ್ಜನ ಗದ್ದುಗೆ ಮುಟ್ಟಲು ನಾನು ರೆಡಿ ನಿಮಗೆ ತಾಕತ್ ಇದೆಯಾ ಎಂದ ತವನಪ್ಪ*

ಯಾವ ಗುತ್ತಿಗೆಗೆ ಎಷ್ಟು ದುಡ್ಡು ಹೊಡೆದಿರಿ ಬಿಚ್ಚಿಡಬೇಕಾಗುತ್ತದೆ ಎಂದು ಗುಟುರು

ಧಾರವಾಡ ಪ್ರಜಾಕಿರಣ.ಕಾಮ್ :
ಧಾರವಾಡ ವಿಧಾನ ಸಭಾ ಕ್ಷೇತ್ರ-71ರಲ್ಲಿ
ಬೃಹತ್ ಪ್ರಮಾಣದ ರಾಜಕೀಯ ಸಂಚಲನಕ್ಕೆ ವೇದಿಕೆಯೊಂದು ಸಜ್ಜಾಗಿದೆ.

ಬಡವರ ಬಂಧು
ತವನಪ್ಪ ಅಷ್ಟಗಿ ಹಾಗೂ ಬಡವರ ಮನೆ ಮಗ ಬಸವರಾಜ ಕೊರವರ ಗೆಳೆಯರ ಬಳಗ ಜಂಟಿಯಾಗಿ ಕರೆದಿದ್ದ ಬೆಂಬಲಿಗರ ಹಾಗೂ ಅಭಿಮಾನಿಗಳ ಸಭೆಯಲ್ಲಿ ಭಾರೀ ಮಳೆಯ ನಡುವೆ ಧಾರವಾಡ ಗ್ರಾಮೀಣ ಕ್ಷೇತ್ರದ 3-4 ಸಾವಿರ ಜನರ ಶಕ್ತಿ ಪ್ರದರ್ಶನ ನಡೆಯಿತು.

ಸಭೆಯಲ್ಲಿ ಎಲ್ಲಾ ಜಾತಿ ಜನಾಂಗದವರು ಭಾಗವಹಿಸಿದ್ದರು. ವಿಶೇಷವಾಗಿ ನೋಂದ ಬಡವರು, ರೈತರು, ಕೃಷಿ ಕೂಲಿಕಾರ್ಮಿಕರ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ಯುವ ಶಕ್ತಿ ಈ ಬಾರಿ ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಬೇಕು ಎಂಬ ಒಕ್ಕೂರಿಲಿನ ಕೂಗು ಹಾಕಿತು.

ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳಾಗಿ ಏ. 19ರಂದು ನಾಮಪತ್ರ ಸಲ್ಲಿಸುವ ಮೂಲಕ ಹಾಲಿ ಹಾಗೂ ಮಾಜಿಯನ್ನು ಮನೆಗೆ ಕಳುಹಿಸಲು ಪಣತೊಟ್ಟರು.

ಈ ವೇಳೆ ತವನಪ್ಪ ಅಷ್ಟಗಿ ಅವರು ಮಾತನಾಡಿ, ಹಾಲಿ ಶಾಸಕ ಅಮೃತ ದೇಸಾಯಿಯವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹತ್ತು ಹಲವು ಆರೋಪಗಳಿಗೆ ನೇರ ಉತ್ತರ ನೀಡಿ ವಾಗ್ದಾಳಿ ನಡೆಸಿದರು.

ಅಲ್ಲದೆ, ಅಷ್ಟಗಿ ಕುಟುಂಬದ ಸದಸ್ಯರಿಗೆ ನೂರು ಕೋಟಿ ಗುತ್ತಿಗೆ ನೀಡಿರುವ ಕುರಿತು ಬಹಿರಂಗ ಚರ್ಚೆಗೆ ಪಂಥ ಆಹ್ವಾನ ನೀಡಿದರು. ಇಲ್ಲದಿದ್ದರೆ ‌ಮಾನನಷ್ಟ ಮೊಕದ್ದಮೆ ಎದುರಿಸಿ ಎಂದು ಸವಾಲು ಹಾಕಿದರು.

ಯಾವ ಗುತ್ತಿಗೆಗೆ ಎಷ್ಟು ದುಡ್ಡು ಹೊಡೆದಿರಿ ಬಿಚ್ಚಿಡಬೇಕಾಗುತ್ತದೆ ಎಂದು ಗುಟುರು ಹಾಕಿದರು.

ನಿಮಗೆ ನಿಜವಾಗಿಯೂ ತಾಕತ್ ಇದ್ದರೆ ಧಮ್ ಇದ್ದರೆ ಒಂದು ಕೋಟಿ ಗುತ್ತಿಗೆ ನೀಡಲು ಹತ್ತು ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದ ಶಂಕರ ಮುಗದ ಪ್ರಕರಣದ ಕುರಿತು ಗರಗ ಮಡಿವಾಳಜ್ಜನ ಗದ್ದುಗೆ‌ ಮುಟ್ಟಲು ನಾನು ರೆಡಿ ನೀವು ರೆಡಿಯಾ ಎಂದು ಚಾಲೆಂಜ್ ಮಾಡುವ ಮೂಲಕ ಶಾಸಕರ ಭ್ರಷ್ಟಾಚಾರದ ವಿರುದ್ಧ ಬಹಿರಂಗ ಶೆಡ್ಡು ಹೊಡೆದರು.

ಬಿಜೆಪಿ ಪಕ್ಷದ ಹಿರಿಯ ನಾಯಕರಾದ ದತ್ತಾ ಡೋರ್ಲೆ, ಲಲಿತ್ ಬಂಢಾರಿ, ಶಂಕ್ರಯ್ಯ ಮಠಪತಿ, ನಿಂಗಪ್ಪ ಸಪೂರಿ, ಕಸ್ತೂರಿ ಅಷ್ಟಗಿ, ಮಂಜುನಾಥ ಚೋಳಪ್ಪನವರ, ಸಂಜು ಹೊಸಕೋಟೆ, ಈರಣ್ಣ ಹಡಪದ, ಬಸವರಾಜ ಹೆಬ್ಬಾಳ, ಅಶೋಕ ಲಕ್ಕಮ್ಮನವರ ಸೇರಿದಂತೆ
ಅನೇಕ ಮುಖಂಡರು, ಕಾರ್ಯಕರ್ತರು, ಬಸವರಾಜ ಕೊರವರ ಹಾಗೂ ತವನಪ್ಪ ಅಷ್ಟಗಿ ಅವರ ಸಾವಿರಾರು ಬೆಂಬಲಿಗರು, ಅಭಿಮಾನಿಗಳು ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *