ರಾಜ್ಯ

ಪಿ ಎಸ್ ಐ ಅಕ್ರಮ ನೇಮಕಾತಿಯ ಕಿಂಗ್‌ಪಿನ್ ದಿವ್ಯಾ ಹಾಗರಗಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಾದರೆ ನಮ್ಮ 5 ಪ್ರಶ್ನೆಗೆ ಉತ್ತರಿಸಿ

ಬೆಂಗಳೂರು prajakiran.com : ಪಿ ಎಸ್ ಐ
ಅಕ್ರಮ ನೇಮಕಾತಿಯ ಕಿಂಗ್‌ಪಿನ್ ದಿವ್ಯಾ ಹಾಗರಗಿಗೂ ಬಿಜೆಪಿ ಗೂ ಸಂಬಂಧವಿಲ್ಲ ಎಂದು ಅರಚಿಕೊಳ್ಳುತ್ತಿರುವ ಬಿಜೆಪಿ @BJP4Karnataka ಯವರಿಗೆ ಕೆಲ ಪ್ರಶ್ನೆಗಳು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ‌.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ದಿವ್ಯಾ ಹಾಗರಗಿ ಕುಟುಂಬಕ್ಕೂ @JnanendraAraga ರ‌ ನಡುವೆ ಇರುವ ಲಿಂಕ್ ಏನು ಎಂದು ಪ್ರಶ್ನಿಸಿದ್ದಾರೆ‌.

ಅಲ್ಲದೆ, ದಿವ್ಯಾ ನಿವಾಸಕ್ಕೆ ಗೃಹ ಸಚಿವರು ಯಾವ ಡೀಲ್ ಕುದುರಿಸಲು ಭೇಟಿ ಕೊಟ್ಟಿದ್ದರು? ಎಂದು ಕುಟುಕಿದ್ದಾರೆ ‌

PSI ನೇಮಕಾತಿಯ 200 ಕೋಟಿ ಲಂಚದಲ್ಲಿ ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು? ಎಂದು ಛೇಡಿಸಿದ್ದಾರೆ‌.

ಲಂಚದ ಹಣದಲ್ಲೂ ಈ ಸರ್ಕಾರಕ್ಕೆ 40 ಪರ್ಸೆಂಟ್ ಪಾಲು ಸಿಕ್ಕಿದೆಯೇ ಅಥವಾ ಡಿಸ್ಕೌಂಟ್ ಸಿಕ್ಕಿದೆಯೇ? ಎಂದು ಗುಡುಗಿದ್ದಾರೆ.

ದಿವ್ಯಾ #BJP ಯವರಲ್ಲದಿದ್ದರೆ @BSYBJP ರವರು CM ಆಗಿದ್ದಾಗ ದಿವ್ಯಾರನ್ನು ನರ್ಸಿಂಗ್ ಕೌನ್ಸಿಲ್ ಸದಸ್ಯರಾನ್ನಾಗಿ ಮಾಡಿದ್ದು ಯಾಕೆ?
ಎಂದು ಪ್ರಶ್ನಿದ್ದಾರೆ.

ಅಕ್ರಮ PSI ನೇಮಕಾತಿಯ ಕಿಂಗ್‌ಪಿನ್ ದಿವ್ಯಾ ಹಾಗರಗಿ BJPಯ ಸಕ್ರಿಯ ಕಾರ್ಯಕರ್ತೆಮತು ಮುಖಂಡೆ.

PSI ನೇಮಕಾತಿ ಅಕ್ರಮದಲ್ಲಿ ಹಾಗರಗಿ ಜೊತೆ ಇಡೀ ಸರ್ಕಾರವೇ ಶಾಮೀಲಾಗಿ ದಂಧೆ ನಡೆಸಿದೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ‌.

ಈಗ ದಿವ್ಯಾ ಹಾಗರಗಿಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡರೆ ಯಾರದರೂ ನಂಬಲು ಸಾಧ್ಯವೆ? ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *