ಕ್ರೀಡೆ

ಧಾರವಾಡದ ಪ್ರಿಯಾಂಕಾ 19ನೇ ISF ವರ್ಲ್ಡ್ ಸ್ಕೂಲ್ ಜಿಮ್ನಾಸೈಡ್ ಸ್ಪರ್ಧೆಗೆ ಆಯ್ಕೆ : ಆಥಿ೯ಕ ಸಹಾಯ ನೀಡಲು ಮನವಿ

ಧಾರವಾಡ prajakiran.com : ಪ್ರಿಯಾಂಕಾ ಓಲೇಕಾರ ಧಾರವಾಡದ ಅತ್ಯುತ್ತಮ ಕ್ರೀಡಾಪಟು ಆಗಿದ್ದು, ಅವಳು ಫ್ರಾನ್ಸ್‌ನ ನಾರ್ಮಂಡಿಯಲ್ಲಿ ನಡೆಯುತ್ತಿರುವ 19ನೇ ISF ವರ್ಲ್ಡ್ ಸ್ಕೂಲ್ ಜಿಮ್ನಾಸೈಡ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಮೇ 14 ರಿಂದ 22 ರವರೆಗೆ ನಡೆಯಲಿರುವ 800 ಮೀ. ಓಟದಲ್ಲಿ ಆಯ್ಕೆಯಾಗಿ ಪ್ರಿಯಂಕಾ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ.

ಹೀಗಾಗಿ ಆಥಿ೯ಕ ಸಹಾಯ ನೀಡಿ ಪ್ರೋತ್ಸಾಹಸಿ ಎಂದು ಸಾರ್ವಜನಿಕರಲ್ಲಿ ಧಾರವಾಡದ ಹಿರಿಯ ಕ್ರೀಡಾಪಟು ಆಗಿರುವ ಜಿಲ್ಲಾ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವು ಹಿರೆಮಠ ವಿನಂತಿ ಮಾಡಿದರು.

ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,  ಧಾರವಾಡ ತಾಲೂಕಿನ ಮುಗಳಿ ಗ್ರಾಮದ ಕ್ರೀಡಾಪಟು ಪ್ರಿಯಾಂಕಾ ನಗರದ ಆರ್.ಎನ್.  ಶೆಟ್ಟಿ ಸರಕಾರಿ ಪ್ರೌಢ ಶಾಲೆ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.

 D.Y.E.S.S. ನ ಕ್ರೀಡಾ ನಿಲಯದಲ್ಲಿ ಶ್ರೀಮತಿ ಶಾಮಲಾ ಪಾಟೀಲ, ಅಥ್ಲೆಟಿಕ್ ಕೋಚ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ ಎಂದರು.

ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದು, ಅಲ್ಲಿ ಭಾಗವಹಿಸಲು ತಗಲುವ ವೆಚ್ಚ 2.5( ಎರಡೂವರೆ) ಲಕ್ಷ ರೂಪಾಯಿ ಇರುತ್ತದೆ.

ಸದ್ಯ ಅದನ್ನು ಕ್ರೀಡಾಪಟುವೇ ಭರಿಸಬೇಕಾಗಿರುತ್ತದೆ. ಆದರೆ ಇವಳ ತಂದೆಯವರು ಚಿಗರಿ ಬಸ್ಸಿನ ಚಾಲಕರಿದ್ದು, ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಿರುವುದಿಲ್ಲ ಎಂದು ಹೇಳಿದರು.

ಆದ್ದರಿಂದ ತಾವುಗಳು ದಯಮಾಡಿ ಆರ್ಥಿಕ ಸಹಾಯ ಮಾಡಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿ ಕೊಡಬೇಕಾಗಿ ಶಿವು ಹಿರೆಮಠ ಮನವಿ ಮಾಡಿದರು,

 ಅವಳನ್ನು ಪ್ರೋತ್ಸಾಹ ನೀಡಲು ಎಸ್.ಬಿ.ಆಯ್. ಖಾತೆ ಸಂಖ್ಯೆ : 38967679626, IFSC Code : SBIN0000833 ಈ ಖಾತೆಗೆ ಜಮಾ ಮಾಡಬೇಕಾಗಿ SBI main Br. College road DWD ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ  ಅಸೋಸಿಯೇಷನ್ ಪದಾಧಿಕಾರಿಗಳಾದ
ಪಿ.ಎಚ್. ನೀರಲಕೇರಿ , ಈರೇಶ ಅಂಚಟಗೇರಿ, ಮಹೇಶ ಶೆಟ್ಟಿ , ಜಿ.ಎಸ್. ಜಾಧವ , ಕೆ.ಎಸ್. ಭೀಮಣ್ಣವರ , ಬಿ.ಎಸ್. ತಾಳಿಕೋಟಿ ಉಪಸ್ಥಿತರಿದ್ದರು .

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *