ನವದೆಹಲಿ prajakiran.com : ದೇಶದಲ್ಲಿ ಮೊದಲೇ ಪೆಟ್ರೋಲ್ , ಡೀಸೆಲ್ ಬೆಲೆ ಜಾಸ್ತಿಯಾಗಿ ಜನ ಪರದಾಡುವಂತಾಗಿದೆ.
ಈಗ ಮತ್ತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್- ಡೀಸೆಲ್ ದರ ಕೊಂಚ ಏರಿಕೆಯಾಗಿದ್ದು, ಪೆಟ್ರೋಲ್ ಲೀಟರ್ ಗೆ 22 ಪೈಸೆ, ಡೀಸೆಲ್ ಲೀಟರ್ ಗೆ 39 ಪೈಸೆ ಹೆಚ್ಚಾಗಿದೆ.
ರಾಜ್ಯದ ರಾಜದಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀ. 93.60 ರೂ. ಮತ್ತು ಡೀಸೆಲ್ ಲೀ.85.81 ರೂ.
ದೆಹಲಿಯಲ್ಲಿ ಪೆಟ್ರೋಲ್ ಲೀ.90.74 ರೂ. ಮತ್ತು ಡೀಸೆಲ್ ಲೀ.81.12 ರೂ.
ಮುಂಬೈ ಪೆಟ್ರೋಲ್ ಲೀ. 97.12 ರೂ. ಮತ್ತು ಡೀಸೆಲ್ ಲೀ. 88.19 ರೂ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀ.90.92 ರೂ. ಮತ್ತು ಡೀಸೆಲ್ ಲೀ. 83.98 ರೂ.
ಚೆನ್ನೈ ಪೆಟ್ರೋಲ್ ಲೀ. 92.70 ರೂ. ಮತ್ತು ಡೀಸೆಲ್ ಲೀ.86.09 ರೂ.
ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿರುವುದು ಜನರಿಗೆ ಗಾಯದಮೇಲೆ ಬರೆ ಎಳೆದಂತಾಗಿದೆ.