ಅಂತಾರಾಷ್ಟ್ರೀಯ

ಕೌಶಲ ಇರುವವರಿಗೆ ಮಾತ್ರ ಬೆಳವಣಿಗೆ ಸಾಧ್ಯ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ prajakiran.com : ವೇಗವಾಗಿ ತಂತ್ರಜ್ಞಾನ ಬದಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಜನರ ಕೌಶಲ ವೃದ್ಧಿ, ಮರು ಕೌಶಲಕ್ಕೆ ಒತ್ತು ನೀಡಬೇಕಾದ ಅಗತ್ಯ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಶ್ವ ಯುವ ಕೌಶಲ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿ, ಹೊಸ ಪೀಳಿಗೆಯ ಕೌಶಲ ಅಭಿವೃದ್ಧಿ ರಾಷ್ಟ್ರೀಯ ಅಗತ್ಯ ಎಂದು ಪ್ರಧಾನಿ ಹೇಳಿದ್ದಾರೆ.

ಸಿಲ್ಕ್ ಇಂಡಿಯಾ ಮಿಷನ್‌ಗೆ ಇನ್ನಷ್ಟ ವೇಗ ನೀಡುವಂತೆ ಕರೆ ನೀಡಿದ್ದು, ಗಳಿಕೆ ಆರಂಭ ಆದ ನಂತರ ಕಲಿಕೆ ಮರೆಯಬೇಡಿ ಎಂದು ಹೇಳಿದ್ದಾರೆ.

ಕೌಶಲ ಇರುವವರಿಗೆ ಮಾತ್ರ ಬೆಳವಣಿಗೆ ಸಾಧ್ಯ. ಕೌಶಲ ಹೆಚ್ಚಿಸುವ ಕ್ರಿಯೆ ನಡೆಯಬೇಕು ಎಂದಿದ್ದಾರೆ.

ಭಾರತವು ಚತುರ ಮತ್ತು ನುರಿತ ಮಾನವ ಸಂಪನ್ಮೂಲವನ್ನು ಜಗತ್ತಿಗೆ ಒದಗಿಸುತ್ತಿದೆ. ಹೀಗಾಗಿ ದೇಶದ ಯುವ ಜನರನ್ನು ಈ ನಿಟ್ಟಿನಲ್ಲಿ ಕೌಶಲಗೊಳಿಸುವುದು ನಮ್ಮ ಕಾರ್ಯತಂತ್ರದ ತಿರುಳಾಗಿರಬೇಕು ಎಂದು ಅವರು ಸೂಚಿಸಿದರು.

ದೇಶದ 1.25 ಕೋಟಿಗೂ ಹೆಚ್ಚು ಯುವ ಜನರಿಗೆ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅಡಿ ತರಬೇತಿ ನೀಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *