ರಾಜ್ಯ

ಹಳೇ ಪಿಂಚಣಿ ಯೋಜನೆಗಾಗಿ ನಿರಂತರ ಹೋರಾಟ : ಬಸವರಾಜ ಗುರಿಕಾರ

ಧಾರವಾಡ ಪ್ರಜಾಕಿರಣ.ಕಾಮ್  21 : ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ( NPS ) , ಹಳೇ ಪಿಂಚಣಿ ಯೋಜನೆ ( OPS ) ಜಾರಿಗೊಳಿಸುವುದು, ನೂತನ ಶಿಕ್ಷಣ ನೀತಿಯಲ್ಲಿನ ಲೋಪದೋಷಗಳನ್ನು ಕೈಬಿಡುವಂತೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ದೇಶಾದ್ಯಂತ ನಡೆಸಿರುವ ಬೃಹತ್ ಭಾರತ್ ಯಾತ್ರೆ ಸಂಚರಿಸುತ್ತಿದ್ದು ಇಂದು ಶೈಕ್ಷಣಿಕ ರಾಜಧಾನಿ ಧಾರವಾಡಕ್ಕೆ ಆಗಮಿಸಿದೆ

ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನವದೆಹಲಿ ಕಾರ್ಯಾಧ್ಯಕ್ಷ ಫೆಡರೇಶನ್ ಬಸವರಾಜ ಗುರಿಕಾರ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊನೆಯದಾಗಿ ದೆಹಲಿಯಲ್ಲಿ ನಡೆಯುವ ಬೃಹತ್ ಸಭೆಯಲ್ಲಿ ಗೊತ್ತುವಳಿಯನ್ನು ಅಂಗೀಕರಿಸಲಾಗುತ್ತದೆ ನಮ್ಮ ಹೋರಾಟ ನಿರಂತರ ಎಂದು ಘೋಷಿಸಿದರು.

ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನವದೆಹಲಿ ವತಿಯಿಂದ ಶಿಕ್ಷಣದ ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸೆಪ್ಟೆಂಬರ್ 5 ರಿಂದ ಅಕ್ಟೋಬರ್ 5 ರವರೆಗೆ ಭಾರತ ಯಾತ್ರೆ ‘ ಆರಂಭವಾಗಿದೆ. ನಾಲ್ಕು ಮೊದಲ ತಂಡ ಸೆಪ್ಟೆಂಬರ್ 5 ರಂದು ತಂಡಗಳಲ್ಲಿ ಯಾತ್ರೆ ಆರಂಭವಾಗಿದೆ.

ಭಾರತ ತಮಿಳುನಾಡು , ಕೇರಳ , ತೆಲಂಗಾಣ , ಕನ್ಯಾಕುಮಾರಿಯಿಂದ ಆರಂಭಗೊಂಡಿದೆ.ಎಂದರು.

ಕನ್ಯಾಕುಮಾರಿ , ಆಂಧ್ರಪ್ರದೇಶ , ಕರ್ನಾಟಕ , ಗೋವಾ , ಮಹಾರಾಷ್ಟ್ರ , ಮಧ್ಯಪ್ರದೇಶ , ಉತ್ತರ ಪ್ರದೇಶ , ಹರಿಯಾಣ ಮುಖಾಂತರ ಸಂಚರಿಸಿ ಅಕ್ಟೋಬರ್ 5 ರಂದು ನವದೆಹಲಿ ತಲುಪಲಿದೆ .

ಅಖಿಲ ಭಾರತ ಶಿಕ್ಷಕರ ಬಸವರಾಜ ನೇತೃತ್ವ ವಹಿಸಲಿದ್ದು , AIPTF ಖಜಾಂಚಿ ಕಾರ್ಯಾಧ್ಯಕ್ಷ ಫೆಡರೇಶನ್ ಗುರಿಕಾರ . ಹರಿಗೋವಿಂದನ್ , ಉಪ – ಮಹಾ ಪ್ರಧಾನ ಕಾರ್ಯದರ್ಶಿ ರಂಗರಾಜನ್ ಭಾಗವಹಿಸಿದ್ದಾರೆ ಎಂದರು.

ಉಳಿದೆಲ್ಲ ಭಾರತ ಯಾತ್ರೆಗಳಿಗಿಂತ ಈ ಯಾತ್ರೆ ಬಹಳಷ್ಟು ಪ್ರದೇಶಗಳಲ್ಲಿ ಸಂಚರಿಸಲಿದೆ . ಎರಡನೇ ಯಾತ್ರೆ ಅಸ್ಪಾಂ ದ ಗುವಾಹಟಿಯಿಂದ ಆರಂಭವಾಗಿ ಅಸ್ಸಾಂ , ಪಶ್ಚಿಮ ಬಂಗಾಳ , ಒಡಿಸ್ಸಾ , ಜಾಖರ್ಂಡ್ , ಬಿಹಾರ , ಉತ್ತರಪ್ರದೇಶದ ಮುಖಾಂತರ ನವದೆಹಲಿ ತಲುಪಲಿದೆ . ಮೂರನೇ ಯಾತ್ರೆ ಗುಜರಾತದ ಸೋಮನಾಥಪುರದಿಂದ ಆರಂಭವಾಗಿ ಗುಜರಾತ್ , ಮಹಾರಾಷ್ಟ್ರ , ಮಧ್ಯಪ್ರದೇಶ , ರಾಜಸ್ಥಾನ , ಹರಿಯಾಣ , ಮುಖಾಂತರ ನವದೆಹಲಿ ತಲುಪಲಿದೆ .

ನಾಲ್ಕನೇ ಯಾತ್ರೆ ಪಂಚಾಬ್ ರಾಜ್ಯದಿಂದ ಆರಂಭವಾಗಿ ಜಮ್ಮು – ಕಾಶ್ಮೀರ , ಹಿಮಾಚಲ್ ಪ್ರದೇಶ , ಉತ್ತರಾಖಂಡ್ , ಉತ್ತರಪ್ರದೇಶದ ಮುಖಾಂತರ ಪಂಜಾಬ್ . ನವದೆಹಲಿ ತಲುಪಲಿದೆ . ಎಲ್ಲಾ ರಾಜ್ಯಗಳಲ್ಲಿ ಬಹಿರಂಗ ಸಭೆಗಳು , ರ್ಯಲಿ ಗಳು ಜರುಗಲಿವೆ ಎಂದರು.

ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರ ಬದಲಾಗಿ ಖಾಯಂ ಶಿಕ್ಷಕರನ್ನು ನೇಮಕ ಮಾಡುವುದು .

ರಾಷ್ಟ್ರದ ಎಲ್ಲಾ ನೌಕರರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನೌಕರರೆಂಬ ಭೇದ – ಭಾವ ಮಾಡದೇ ಏಕರೂಪ ವೇತನ ಪದ್ಧತಿ ( Common Salary System ) ಜಾರಿಗೊಳಿಸುವುದು ಹಾಗೂ ಶಿಕ್ಷಕ ವಿರೋಧಿ ನೀತಿಗಳನ್ನು ಕೈ ಬಿಡುವುದು

ಅಧ್ಯಕ್ಷ ರಾಂಪಾಲ್ ಈ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಯಾತ್ರೆ ಜರುಗಲಿದೆ . ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಸಿಂಗ್ , ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ , ಮಹಾ ಪ್ರಧಾನ ಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ , ಹರಿಗೋವಿಂದನ್‌ ಖಜಾಂಚಿ ಇವರ ನಾಯಕತ್ವದಲ್ಲಿ ಯಾತ್ರೆ ಜರುಗಲಿದ್ದು , ಕರ್ನಾಟಕದಲ್ಲಿ ಸದರಿ ಯಾತ್ರೆಯು ದಿ ಸೆ 17 ರಿಂದ 23 ರವರೆಗೆ ಸಂಚರಿಸಲಿದ್ದು, ರಾಜ್ಯದ ಬಹುತೇಕ ಶಿಕ್ಷಕರು ಯಾತ್ರೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ .

ವಿಶೇಷವಾಗಿ ನೌಕರರಿಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವುದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು , ಸರ್ಕಾರ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ .

ಕರ್ನಾಟಕದಲ್ಲಿ ಈ “ ಭಾರತ ಯಾತ್ರೆ ” ನೌಕರರಲ್ಲಿ ಜಾಗೃತಿಯನ್ನು ಮೂಡಿಸುತ್ತಾ , ನೌಕರರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸುತ್ತಾ , ಯಾತ್ರೆ ಬೀದರ್‌ ಜಿಲ್ಲೆಯ ಹುಮನಾಬಾದ್ ಮೂಲಕ ಕರ್ನಾಟಕ್ಕೆ ಪ್ರವೇಶಿಸಲಿದ್ದು , ನಂತರ ಕಲಬುರ್ಗಿ , ಯಾದಗಿರಿ , ಜೇವರ್ಗಿ , ಸಿಂದಗಿ , ವಿಜಯಪುರ , ಜಮಖಂಡಿ , ಆಥಣಿ , ಚಿಕ್ಕೋಡಿ , ಬೆಳಗಾವಿ , ಧಾರವಾಡ , ಹುಬ್ಬಳ್ಳಿ , ಗದಗ , ಸವಣೂರು , ಹಾವೇರಿ , ಶಿರಸಿ , ಕಾರವಾರ ಮಾರ್ಗವಾಗಿ ನಿರಂತರ 6 ದಿನಗಳ ಸಂಘಟನಾತ್ಮಕ ಸಭೆಗಳ ಮೂಲಕ ದೇಶದ ಹಾಗೂ ರಾಜ್ಯದ ಗಮನ ಸೆಳೆಯಲಾಗುತ್ತಿದ್ದು , ಅಂತಿಮವಾಗಿ ಅಕ್ಟೋಬರ್ 5 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ” ಲಕ್ಷಾಂತರ ಶಿಕ್ಷಕರನ್ನು ಸಂಘಟಿಸಿ ಬೃಹತ್ ಪ್ರತಿಭಟನೆಯ ಮೂಲಕ ಬೇಡಿಕೆಗಳ ಈಡೇರಿಕೆಗಾಗಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.

ಈ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗೇಶ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ ನುಗ್ಗಲಿ, ಹರಿಗೋವಿಂದ್, ಸುಮಾರು ಮಾತುರ್, ರಮಾದೇವಿ, ಪದ್ಮಲತಾ, ರಾಜಶೇಖರ್ ಹೊಣ್ಣಪ್ಪನ್ನವರರಾಷ್ಟ್ರದ ಪದಾಧಿಕಾರಿಗಳು , ಜಿಲ್ಲೆಯ ಅಧ್ಯಕ್ಷರು / ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *