ಜಿಲ್ಲೆ

ನರೇಗಾ ಅಡಿ ಕೆಲಸ ಸರಿಯಾಗಿ ನೀಡಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ ಪ್ರಜಾಕಿರಣ.ಕಾಮ್  : ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮಗಳ ದುಡಿಯುವ ಜನರಿಗೆ ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸ ಸರಿಯಾಗಿ ನೀಡಬೇಕೆಂದು ಆಗ್ರಹಿಸಿ ಎ.ಐ.ಎಮ್.ಎಸ್.ಎಸ್‌ನ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಜಿಲ್ಲಾ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ.ಐ.ಎಮ್.ಎಸ್.ಎಸ್)ಯ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಗ್ರಾಮದ ಜನತೆಗೆ ನರೇಗಾ ಯೋಜನೆ ಅಡಿಯಲ್ಲಿ ‘ಘೋಷಿತ ಮಾನವ ದಿನಗಳ’ ಕೆಲಸವನ್ನು ಸರಿಯಾಗಿ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಪಂಚಾಯತ್ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗಲೆಂದು ಸರಕಾರವು ತಂದಿರುವ ನರೇಗಾ ಯೋಜನೆ ಯಡಿಯಲ್ಲಿ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮದ ಜನತೆಗೆ ಈ ವರ್ಷ ಸರಿಯಾಗಿ ಕೆಲಸ ದೊರಕಿಲ್ಲ.

ಬರಗಾಲ ಬಿದ್ದಿರುವ ಕಾರಣ ದುಡಿಯುವ ಜನರು, ರೈತರು, ಕೃಷಿ-ಕೂಲಿ ಕಾರ್ಮಿಕರು ತೀವ್ರ ಸಮಸ್ಯೆಯಲ್ಲಿದ್ದಾರೆ. ಯಾವುದೇ ಉದ್ಯೋಗವಿಲ್ಲದೇ ಗ್ರಾಮಸ್ತರು ಸಂಕಷ್ಠದಲ್ಲಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸರಿಯಾಗಿ ಕೆಲಸ ನೀಡದ ಕಾರಣ ಅನಿವರ‍್ಯವಾಗಿ ಗ್ರಾಮದ ಜನರು ಜೀವನೋಪಾಯಕ್ಕಾಗಿ ಪಟ್ಟಣದ ದಾರಿ ಹಿಡಿಯುವಂತಾಗಿದೆ 

ಕಡಿಮೆ ಕೂಲಿಗೆ ಪರ-ಊರುಗಳಿಗೆ ಹೋಗಿ ದುಡಿಯುವಂತಾಗಿದೆ. ಈಗಾಗಲೇ ಮಾರಡಗಿ ಮತ್ತು ಕ್ಯಾರಕೊಪ್ಪ ಗ್ರಾಮ ಪಂಚಾಯತ್ ಅಭಿವೃದ್ಧಿ (PDO) ಅಧಿಕಾರಿಗಳಿಗೆ ನರೇಗಾ ಕೆಲಸ ಕೊಡುವಂತೆ ಕೋರಿ 6 ನಂಬರ್ ಫಾರ್ಮ್ ಸಲ್ಲಿಸಿ ಒಂದು ತಿಂಗಳು ಕಳೆದಿವೆ.

ಆದರೆ ಅವರ ಕಡೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಮತ್ತು ಕೆಲಸ ನೀಡಿಲ್ಲ. ಈ ಕಾರಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಿ, ಆದಷ್ಟು ಬೇಗನೇ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಿಸಬೇಕು 

ಸಂಪೂರ್ಣ ಮಾನವ ದಿನಗಳನ್ನು ನೀಡಬೇಕು, ಈಗಾಗಲೇ 6 ನಂಬರ್ ಫಾರ್ಮ್ ಕೊಟ್ಟು ಒಂದು ತಿಂಗಳು ಕಳೆದಿರುವುದರಿಂದ ನಿರುದ್ಯೋಗ ಭತ್ಯೆಯನ್ನು ಕೂಡಲೇ ನೀಡಬೇಕೆಂದು ಎ.ಐ.ಎಮ್.ಎಸ್.ಎಸ್‌ನ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮ ಘಟಕಗಳಿಂದ ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ನಂತರ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳು ಮತ್ತು ನರೇಗಾ ಅಧಿಕಾರಿಗಳು ಮೂವರು ಎರಡು ಗ್ರಾಮದ ನರೇಗಾ ಸಮಸ್ಯೆಯು ಪರಿಹರಿಸುವುದಾಗಿ ಭರವಸೆಕೊಟ್ಟರು.

ಈ ಸಂದರ್ಭದಲ್ಲಿ ಎ.ಐ.ಎಮ್.ಎಸ್.ಎಸ್‌ನ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್, ಜಿಲ್ಲಾ ಕಾರ್ಯದರ್ಶಿಗಳಾದ ಗಂಗೂಬಾಯಿ ಕೊಕರೆ, ಗ್ರಾಮ ಘಟಕಗಳ ಸದಸ್ಯರುಗಳಾದ ಮಾಸಬ್ಬಿ ಅಗಸಿಮನಿ, ಕಾಶವ್ವ ತಲ್ವಾರ್, ಮುರಗಮ್ಮ ಗರಗದ, ಶೋಭಾ ಹಿರೆಮಠ್, ಶಂಕ್ರಮ್ಮ ಮಲ್ಲಿಗವಾಡ, ಹುಸೇನ ಸಾಬ್ ಎಲಿಗಾರ್, ಹನಮಂತ ಕರಿಕಟ್ಟಿ ಮೊದಲಾದವರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *