ಜಿಲ್ಲೆ

ಧಾರವಾಡದ ಐದನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಶಿವು ಚನ್ನಗೌಡರ ಪರ ಮತದಾರರ ಒಲುವು

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ೫ ನೇ ವಾರ್ಡ್‌ನಿಂದ ಸ್ಪರ್ಧಿಸಿರುವ ಶಿವು ಚನ್ನಗೌಡರ ಮದಿಹಾಳ ಮಾತ್ರವಲ್ಲದೇ ಸುತ್ತಲಿನ ಬಡಾವಣೆಗಳಲ್ಲಿ ತಮ್ಮ ಸಮಾಜಮುಖಿ ಕಾರ್ಯದಿಂದಲೇ ಗುರುತಿಸಿಕೊಂಡಿದ್ದಾರೆ.

ಎಲ್ಲ ಸಮಾಜದ ಜನರ ಸುಖ-ದುಃಖಗಳಲ್ಲಿ ಭಾಗಿಯಾಗುವ ಮೂಲಕ ಇಡೀ ಪ್ರದೇಶದಲ್ಲಿ ಚನ್ನಗೌಡರ ತಮ್ಮವ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿದ್ದಾರೆ.

ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ತಾರತಮ್ಯ ಇಲ್ಲದೇ ಎಲ್ಲರೊಂದಿಗೆ ಬೆರೆಯುವ ನಿಷ್ಕಲ್ಮಷ ಗುಣವುಳ್ಳ ವ್ಯಕ್ತಿ.

ತಮಗೆ ಜನರ ಸೇವೆ ಮಾಡಲು ಹಣ-ಸಿರಿತನ ಬೇಕಿಲ್ಲ. ಸ್ಪಂದಿಸುವ ಹೃದಯ ಇದ್ದರೆ ಸಾಕು ಎಂಬುದನ್ನು ನಿರೂಪಿಸಿದ ಅವರಿಗೆ ಜನರೆ ದುಡ್ಡು ನೀಡಿ ಆರ್ಶೀವಾದ ಮಾಡುತ್ತಿದ್ದಾರೆ.  

ವಾರ್ಡಿನ ಸಮಸ್ಯೆಗಳು, ಕುಂದು ಕೊರತೆಗಳಿಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತ ಬಂದ ಸರಳ ಮತ್ತು ಸಜ್ಜನ ಸ್ವಭಾವದ ಚನ್ನಗೌಡರ,  ಪ್ರಸಕ್ತ  ಚುನಾವಣೆಯಲ್ಲಿ ಉಳಿದೆಲ್ಲ ಅಭ್ಯರ್ಥಿಗಳಿಗಿಂತ ಭಿನ್ನವಾಗಿ ಗೋಚರಿಸುತ್ತಿದ್ದಾರೆ.

ಇವರ ಪರವಾಗಿ ಕಾಂಗ್ರೆಸ್ ಪಕ್ಷದ ಮುಖಂಡ ದೀಪಕ ಚಿಂಚೋರೆ ಅವರು ಟೋಂಕ ಕಟ್ಟಿ ನಿಂತಿರುವುದು ಆನೆ ಬಲ ಬಂದಿದೆ.

ಅನೇಕರು ಸ್ವಯಂ ಪ್ರೇರಣೆಯಿಂದ ಚನ್ನಗೌಡರ ಪರ ಪ್ರಚಾರ ನಡೆಸುತ್ತಿರುವುದು ಹಲವು ವರ್ಷಗಳಿಂದ ಬಡವರ, ದೀನದಲಿತರ, ಅಸಹಾಯಕರ ಸೇವೆ ಸಲ್ಲಿಸುತ್ತ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಶಿವು ಚಿನ್ನಗೌಡರ ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವಾರ್ಡಿನ ಜನತೆ, ಸ್ನೇಹಿತರು ತನು-ಮನ-ಧನದಿಂದ ಸಹಾಯ ಹಸ್ತ ಚಾಚುತ್ತಿದ್ದಾರೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *