ಬೆಂಗಳೂರು prajakiran.com : ಕೊರೋನಾ ಕಾರಣದಿಂದ ಈ ವರ್ಷದ ಎಲ್ಲ ತರಗತಿಗಳು ಆನ್ಲೈನ್ ನಲ್ಲಿ ಆರಂಭವಾಗಿದ್ದವು.
ಅದರಂತೆ 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಜುಲೈನಲ್ಲಿ ನಡೆಸಲಾಗುವುದು.
ಸದ್ಯದಲ್ಲಿಯೇ ದಿನಾಂಕ ನಿಗದಿಯಾಗಲಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್ ಸ್ನೇಹಲ್ ತಿಳಿಸಿದ್ದಾರೆ.
ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವಂತೆ ಸಿಬಿಎಸ್ ಸಿ ಸಲಹೆ ನೀಡಿದೆ.
ಆದರೆ ಈಗಾಗಲೇ ಪರೀಕ್ಷೆ ಪಠ್ಯ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆ ರಾಜ್ಯದಲ್ಲಿ ಪೂರ್ಣಗೊಂಡಿದೆ.
ಈಗ ಮತ್ತೊಮ್ಮೆ ಬದಲಾವಣೆ ಮಾಡುವುದು ಕಷ್ಟ. ಕೇಂದ್ರದ ಸಲಹೆ, ಸಭೆ ನಂತರ ಪರೀಕ್ಷಾ ಪದ್ಧತಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸ್ನೇಹಲ್ ಹೇಳಿದ್ದಾರೆ.