ರಾಜ್ಯ

ಧಾರವಾಡದ ಜನಜಾಗೃತಿ ಸಂಘ ದಿಂದ 110ಕ್ಕೂ ಹೆಚ್ಚು ಸರಕಾರಿ ಶಾಲೆಗಳ 25 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ 1.25 ಲಕ್ಷಕ್ಕೂ ಅಧಿಕ ನೋಟ್ ಬುಕ್ ವಿತರಣೆ

ಅರ್ಥಪೂರ್ಣ ಕಾರ್ಯಕ್ಕೆ ಕೈ ಜೋಡಿಸಿದ ಬಸವರಾಜ ಕೊರವರ ಗೆಳೆಯರ ಬಳಗ

ಸಹಸ್ರಾರು ಮಕ್ಕಳ ಹಾಗೂ ಪೋಷಕರ ಮುಖದಲ್ಲಿ ಮೂಡಿದ ಮಂದಹಾಸ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗ ಸೋಮವಾರ ಧಾರವಾಡದ ಗುಲಗಂಜಿಕೊಪ್ಪದ ಸರಕಾರಿ ಹಿರಿಯ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ 890ಕ್ಕೂ ಹೆಚ್ಚು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ಮಕ್ಕಳಿಗೆ ಪರಿಸರ ಹಾಗೂ ಶಿಕ್ಷಣದ ಮಹತ್ವ ತಿಳಿಸಿದರು.

ಅಲ್ಲದೆ, ದೇವರ ರೂಪದಲ್ಲಿ ಇರುವ ತಂದೆ ತಾಯಿ, ಗುರುಗಳ, ಹಿರಿಯರ ಮಾತು ಕೇಳಿದರೆ ಜೀವನದಲ್ಲಿ ಎಂದು ಸೋಲುವುದಿಲ್ಲ. ಚೆನ್ನಾಗಿ ಓದಿ, ಬರೆದು ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ಜನಜಾಗೃತಿ ಸಂಘ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ,
ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಿ ಶಾಲೆಯಿಂದ ಹೊರಗುಳಿಯಬಾರದು.

ಸರಕಾರಿ ಶಾಲೆ ಸದೃಢಗೊಳ್ಳಬೇಕು. ಸರಕಾರಿ ಶಾಲೆಯ ಮಕ್ಕಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಂಟಿತಗೊಂಡು ಶಾಲೆ ವಿಲೀನದ ಹೆಸರಿನಲ್ಲಿ ಅನೇಕ ಶಾಲೆಯ ಬಾಗಿಲು ಬಂದ್ ಆಗಿವೆ.

ಈ ಹಿನ್ನೆಲೆಯಲ್ಲಿ ಅವುಗಳಿಗೆ ಶಕ್ತಿ ತುಂಬಬೇಕು ಎಂಬ ಮಹತ್ವಾಂಕ್ಷೆಯಿಂದ ಈವರೆಗೆ ಧಾರವಾಡದ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗವು ಧಾರವಾಡ ವಿಧಾನ ಸಭಾ ಕ್ಷೇತ್ರ 71ರ ವ್ಯಾಪ್ತಿಯಲ್ಲಿ ಬರುವ 110ಕ್ಕೂ ಹೆಚ್ಚು ಸರಕಾರಿ ಶಾಲೆಗಳ 25 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ 1.25 ಲಕ್ಷಕ್ಕೂ ಅಧಿಕ ನೋಟ್ ಬುಕ್ ವಿತರಣೆ ಮಾಡಿದೆ.

ನೋಟ್ ಬುಕ್ ವಿತರಣೆಗೆ ವ್ಯಾಪಕ‌ ಮೆಚ್ಚುಗೆ ವ್ಯಕ್ತವಾಗಿದ್ದು, ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸಿರುವುದು ನಮಗೆ ಸಾರ್ಥಕಭಾವ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯರಾದ ಗಂಗಾಧರ ದೇಸಾಯಿ, ಮಹಾಂತೇಶ ಮೊರಬ, ಬಸಪ್ಪ ಕೆಂಚನಹಳ್ಳಿ, ಅಶೋಕ್ ಗಿರಿಯಪ್ಪನವರ, ರಾಜೇಶ ಚಿತ್ತೂರ, ಗಂಗಾ ಸಾಹೇಬ್ ದೇಸಾಯಿ ಹಾಗೂ ಗುಲಗಂಜಿಕೊಪ್ಪದ ಯುವ ಮಿತ್ರರಾದ ಅರುಣ ಮುಖಾಶಿ, ಅಪ್ಪಿ ಗಿರಪ್ಪನವರ, ಗಿರೀಶ ಕಾಳಣ್ಣನವರ,
ಗುಲಗಂಜಿಕೊಪ್ಪದ ಸರ್ಕಾರಿ ಕನ್ನಡ/ಉರ್ದು ಮಾಧ್ಯಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಗುರುಗಳು ಹಾಗೂ ಗುರುಮಾತೆಯರು ಪುಸ್ತಕ ವಿತರಣಾ ಕಾರ್ಯದಲ್ಲಿ ಅತೀವ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು,

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *