ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ : ನಾಮಪತ್ರದೊಂದಿಗೆ ಸಲ್ಲಿಸಬೇಕಾದ ದಾಖಲೆಗಳು, ನಾಮಪತ್ರ ಸಲ್ಲಿಸುವ ಸ್ಥಳಗಳು

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ :
ನಾಮಪತ್ರದೊಂದಿಗೆ ಸಲ್ಲಿಸಬೇಕಾದ ದಾಖಲೆಗಳು :
• ನಾಮಪತ್ರ,
• ಠೇವಣಿ ಸಂದಾಯದ ರಶೀದಿ,
• ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರ,
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ.
• ಎರಡು ಭಾವಚಿತ್ರ – (ಗುರುತಿನ ಚೀಟಿ ನೀಡಲು ಹಾಗೂ ಮತಪತ್ರದಲ್ಲಿ ಮುದ್ರಿಸಲು ಮೂರು ತಿಂಗಳೊಳಗಿನ ಭಾವಚಿತ್ರವನ್ನು ನಿಗದಿತ ಘೋಷಣಾ ಪತ್ರದೊಂದಿಗೆ ಸಲ್ಲಿಸಬೇಕು.)
• ಅಭ್ಯರ್ಥಿಯ ಹೆಸರು ಮತಪತ್ರದಲ್ಲಿ ಮುದ್ರಿಸಲು,
• ನಮೂನೆ ಎ ಮತ್ತು ಬಿ ಅಥವಾ ಸಿ ಮತ್ತು ಡಿ (ರಾಜಕೀಯ ಪಕ್ಷಗಳ ಅಭ್ಯರ್ಥಿ ಆದಲ್ಲಿ),
• ಮತದಾರರ ಪಟ್ಟಿಯ ದೃಢೀಕೃತ ಪ್ರತಿ,
• ನಾಮಪತ್ರದೊಂದಿಗೆ ಅಭ್ಯರ್ಥಿಯ ಮಾದರಿ ಸಹಿಯ ಪ್ರತಿ
• ಬೇಬಾಕಿ ಪ್ರಮಾಣ ಪತ್ರ

*ವಾರ್ಡಗಳಿಗೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವ ಸ್ಥಳ* :
ವಾರ್ಡ್ 01 ರಿಂದ 05 ರ ವರೆಗೆ ಮಹಾನಗರ ಪಾಲಿಕೆ ಕಚೇರಿ ಧಾರವಾಡ ಸಾಮಾನ್ಯ ಆಡಳಿತ ವಿಭಾಗ ಹೊಸ ಕಟ್ಟಡದ ಪಕ್ಕದ ಕೋಣೆ, ವಾರ್ಡ್ 6 ರಿಂದ 10 ರ ವರೆಗೆ ಮಹಾನಗರ ಪಾಲಿಕೆ ಕಚೇರಿ ಧಾರವಾಡ ಸಾಮಾನ್ಯ ಆಡಳಿತ ವಿಭಾಗ ಹಳೇ ಕಟ್ಟಡದಲ್ಲಿರುವ ಕೋಣೆ, ವಾರ್ಡ್ 11 ರಿಂದ 15 ರ ವರೆಗೆ ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ 74 ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ, ವಾರ್ಡ್ 16 ರಿಂದ 20 ರ ವರೆಗೆ ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ ಮಹಾಪೌರರ ಕಚೇರಿ, ವಾರ್ಡ್ 21 ರಿಂದ 25 ರ ವರೆಗೆ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಜಲಮಂಡಳಿ ಕಚೇರಿ ಹಳೇ ಕಟ್ಟಡ ವ.ಕ.ನಂ.3, ಮೇಲಿನ ಅಂತಸ್ತು, ವಾರ್ಡ್ 26 ರಿಂದ 30 ರ ವರೆಗೆ ನವನಗರ ಅಂಬೇಡ್ಕರ ಭವನ, ವಾರ್ಡ್ 31 ರಿಂದ 35 ರ ವರೆಗೆ ಹುಬ್ಬಳ್ಳಿ ಈಜುಗೋಳ ಕಟ್ಟಡ ವಲಯ ಕಚೇರಿ ನಂ.5 ಮೇಲ್ಮಹಡಿ, ವಾರ್ಡ್ 36 ರಿಂದ 40 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ನಗರ ಯೋಜನೆ ಸ್ಥಾಯಿ ಸಮಿತಿ ಕಾರ್ಯಾಲಯ.

ವಾರ್ಡ್ 41 ರಿಂದ 46 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 47 ರಿಂದ 51 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ತೇರಿಗೆ ನಿರ್ಧರಣೆ ಹಣಕಾಸು ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 52 ರಿಂದ 56 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಲೆಕ್ಕ ಸ್ಥಾಯಿ ಸಮಿತಿ ಕಾರ್ಯಾಲಯ, ವಾರ್ಡ್ 57 ರಿಂದ 61 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ಉಪಮಹಾಪರರ ಕಾರ್ಯಾಲಯ, ವಾರ್ಡ್ 62 ರಿಂದ 66 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿ ವಿರೋಧ ಪಕ್ಷದ ನಾಯಕರ ಕಾರ್ಯಾಲಯ, ವಾರ್ಡ್ 67 ರಿಂದ 71 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿಗಳ ಕಚೇರಿಯ ಹಿಂಭಾಗದ ಪಿ.ಆರ್.ಓ. ಕಚೇರಿ, ವಾರ್ಡ್ 72 ರಿಂದ 77 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ನೌಕರರ ಪತ್ತಿನ ಸಂಘದ ಕಚೇರಿ, ವಾರ್ಡ್ 78 ರಿಂದ 82 ರ ವರೆಗೆ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿರುವ ಸಹಾಯಕ ನಿರ್ದೇಶಕರು, ನಗರ ಯೋಜನೆ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *