ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಮಾತ್ರ ಚುನಾವಣಾ ಮಾದರಿ ನೀತಿ ಸಂಹಿತೆ…!

ಧಾರವಾಡ Prajakiran.com: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿನಗರ ವ್ಯಾಪ್ತಿಯಲ್ಲಿ ಮಾತ್ರ ಚುನಾವಣೆಯ ಮಾದರಿ ನೀತಿ ಸಂಹಿತೆಯು ಆಗಸ್ಟ್ 16 ರಿಂದ ಪ್ರಾರಂಭಗೊಂಡು ಸೆಪ್ಟಂಬರ್ 6 ರ ವರೆಗೆ ಜಾರಿಯಲ್ಲಿರುತ್ತದೆ. 

ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ನೀಡಿದ ನಿರ್ದೇಶನಗಳಂತೆ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಆದ್ದರಿಂದ ಎಲ್ಲ ಪಕ್ಷದವರು ಸಹಕರಿಸಲು ಹಾಗೂ ತಮ್ಮ ಪಕ್ಷದ ವತಿಯಿಂದ ಚುನಾವಣೆಗೆ ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳಿಗೆ ಸೂಚಿಸಲು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಸದಾಚಾರ ಸಂಹಿತೆ ತಂಡಗಳ ನೇಮಕಾತಿ*: ಮಹಾನಗರ ಪಾಲಿಕೆಯ ವ್ಯಾಪ್ತಿಯ ಒಟ್ಟು 82 ವಾರ್ಡಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿಡಿಯೋಗ್ರಾಫರ್‍ನ್ನು ಒಳಗೊಂಡಿರುವ ಒಟ್ಟು 8 ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಲಾಗಿದೆ.

ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. (ಮೊ9731008189, 7018897824) ಅವರನ್ನು ಮತ್ತು ಪ್ರತಿ 10 ವಾರ್ಡಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಿ ಆದೇಶಿಸಲಾಗಿದೆ.

ವಾರ್ಡ್ 1 ರಿಂದ 10 ರವರೆಗೆ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ರಾಘವೇಂದ್ರ ಬಮ್ಮಿಗಟ್ಟಿ (ಮೊ. 8277931274), ವಾರ್ಡ್ 11 ರಿಂದ 20 ರ ವರೆಗೆ ಧಾರವಾಡ ಎಪಿಎಂಸಿ ಕಾರ್ಯದರ್ಶಿ ವಿ.ಜಿ ಹಿರೇಮಠ (ಮೊ. 9901421363), ವಾರ್ಡ್ 21 ರಿಂದ 30 ರ ವರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣ ಜಾನುವಾರು ಸಂವರ್ದನ ಮತ್ತು ತರಬೇತಿ ಉಪನಿರ್ದೇಶಕ ರಮೇಶ ದೊಡಮನಿ (ಮೊ. 9916190345), ವಾರ್ಡ್ 31 ರಿಂದ 40 ರ ವರೆಗೆ ಎಮ್‍ಐ ಉಪವಿಭಾಗ ಸಹಾಯಕ ಕಾರ್ಯನಿರ್ವಾಹ ಅಭಿಯಂತರ ನಟೇಶ ಹೆಚ್.ಟಿ. (ಮೊ. 9902821359), ವಾರ್ಡ್ 41 ರಿಂದ 51 ರ ವರೆಗೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಮಡಿವಾಳಪ್ಪ (ಮೊ. 8867495018), ವಾರ್ಡ್ 52 ರಿಂದ 61 ರ ವರೆಗೆ ಹುಬ್ಬಳ್ಳಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿ.ವಾಯ್.ರ್ಯಾಗಿ, ವಾರ್ಡ್ 62 ರಿಂದ 71 ರ ವರೆಗೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕ್ವಾಲಿಟಿ ಕಂಟ್ರೋಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಹುರಕಡ್ಲಿ (ಮೊ. 9980516931), ವಾರ್ಡ್ 72 ರಿಂದ 82 ರವರೆಗೆ ಹುಬ್ಬಳ್ಳಿ ಪಂಚಾಯತ ರಾಜ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್.ವೀರಕರ (ಮೊ. 8277071511) ರವರನ್ನು ನೇಮಿಸಲಾಗಿದೆ.

*ವಿವಿಧ ಪರವಾನಿಗೆ ನೀಡಲು ಏಕಗವಾಕ್ಷಿ ಕೇಂದ್ರ (Single Window System)*: ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ವಿವಿಧ ಪರವಾನಿಗೆಗಳನ್ನು ನೀಡಲು 1 ರಿಂದ 30 ರ ವರೆಗಿನ ವಾರ್ಡ್‍ಗಳಿಗೆ ವಲಯ ಕಚೇರಿ ನಂ.1 ಸಹಾಯಕ ಆಯುಕ್ತ ಆರ್ ದಶವಂತ (ಮೊ. 9741089724) ಹಾಗೂ 31 ರಿಂದ 82 ರ ವರೆಗಿನ ವಾರ್ಡ್‍ಗಳಿಗೆ ವಲಯ ಕಚೇರಿ ನಂ.11 ಅಭಿವೃದ್ಧಿ ಅಧಿಕಾರಿ ಎ.ವಾಯ್.ಕಾಂಬಳೆ (ಮೊ. 9880422978) ಅವರನ್ನು ಏಕಗವಾಕ್ಷಿ ಕೇಂದ್ರಗಳಿಗೆ ನೇಮಿಸಲಾಗಿದೆ.

*ದೂರುಗಳ ನಿರ್ವಹಣೆಗೆ ಸಹಾಯವಾಣಿ:* ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ವಿವಿಧ ದೂರುಗಳ ನಿರ್ವಹಣೆಗಾಗಿ ಸಹಾಯವಾನಿಯನ್ನು ತೆರಯಲಾಗಿದ್ದು, ಮಹಾನಗರ ಪಾಲಿಕೆಯ ಹೊರ್ತಿ ರಾಜೇಂದ್ರ ಸಿ. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಪಾಲಿಕೆಯ ಸಾರ್ವತ್ರಿಕ ಚುಣಾವಣೆಗೆ ಸಂಬಂಧಿಸಿದ ದೂರುಗಳನ್ನು 0836-2213888, 2213869, 2213886 ಮತ್ತು 2213889 ಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *