ಮಂಡ್ಯ prajakiran.com : ಕಿರುತೆರೆಯಲ್ಲಿ ಭಾರೀ ಸದ್ದು ಮಾಡಿದ್ದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4ರ ವಿಜೇತೆ ಮೆಬಿನಾ ಮೈಕಲ್ ದುರ್ಮರಣವನ್ನಪ್ಪಿದ್ದಾರೆ.
ಟ್ರಾಕ್ಟರ್-ಕಾರು ನಡುವೆ ಮುಖಾಮುಖಿ ಡಿಕ್ಕಿಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾ.ಹೆ.75 ರಲ್ಲಿ ನಡೆದ ಅಪಘಾತ ಇದಾಗಿದೆ. ಮಂಗಳವಾರ ಸಂಜೆ 4.30 ರ ವೇಳೆಗೆ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳಿಗೆ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ
ಮಾಡಲಾಯಿತು. ಬೆಂಗಳೂರಿನಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಕಾರು
ಹಾಸನ ಕಡೆಯಿಂದ ಯೂಟರ್ನ್ ಆಗುತ್ತಿದ್ದ ಟ್ರಾಕ್ಟರ್ ಪರಸ್ಪರ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಕಾರಿನಲ್ಲಿದ್ದವರನ್ನ ಹಳ್ಳಿಹೈದ ಪ್ಯಾಟೆಗ್ ಬಂದ ಕಾರ್ಯಕ್ರಮದ ತಂಡದವರು ಎಂದು ಗುರುತಿಸಲಾಗಿದ್ದು, ಮೇಬಿನಾ ಮೈಕಲ್ ಸೇರಿದಂತೆ ಮೂವರು ಸೋಮವಾರಪೇಟೆಗೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ.
ಈ ಕುರಿತು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.