ಅಂತಾರಾಷ್ಟ್ರೀಯ

ದೂರದೃಷ್ಟಿಯ, ನವಭಾರತ ನಿರ್ಮಾಣದ ಐತಿಹಾಸಿಕ ಬಜೆಟ್ : ಪ್ರಲ್ಹಾದ ಜೋಶಿ

ನವದೆಹಲಿ prajakiran. com ಫೆ.೦೧,  ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ೨೦೨೨-೨೩ ನೇ ಸಾಲಿನ ಆಯವ್ಯಯ ಆರೋಗ್ಯ ಹಾಗೂ ಸಮೃದ್ಧ ಭಾರತ ನವನಿರ್ಮಾಣದ ಐತಿಹಾಸಿಕ ಹೆಜ್ಜೆಯಾಗಿದೆಯೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.

ಈ ಅಯವ್ಯಯದಲ್ಲಿ ಆರು ಮುಖ್ಯ ಆಧಾರ ಸ್ಥಂಭಗಳನ್ನು ಪರಿಚಯಿಸಿದ ಅರ್ಥಸಚಿವರು ಇದರ ಒಟ್ಟು ಸಾರವಾಗಿ ಈ ದಶಮಾನದ ಪ್ರಥಮ ಅಯವ್ಯಯ ಹೇಗೆ ಕೋವಿಡ್ ನಂತರದ ಭಾರತ ದೇಶ ಮುಂಬರುವ ವರ್ಷಗಳಲ್ಲಿ ಆರೋಗ್ಯ ಹಾಗೂ ಸಮೃದ್ಧ ಭಾರತವಾಗಿ ಆತ್ಮ ನಿರ್ಭರ ದೇಶವಾಗಿ ಹೊರ ಹೊಮ್ಮುವುದೆಂಬುದನ್ನು ದೇಶದ ಮುಂದೆ ವಿಸ್ತೃತವಾಗಿ ವಿವರಿಸಿದ್ದಾರೆ.

ಹೊಸ ಆರೋಗ್ಯ ಹಾಗೂ ಸಮೃದ್ಧ ಭಾರತದ ನಿರ್ಮಾಣದ ಮುಖ್ಯ ಸಂಕೇತವಾಗಿದೆ ಎಂದು ಜೋಶಿ ಹೇಳಿದ್ದಾರೆ.

ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ೨೦೨೨-೨೩ ವರ್ಷದಿಂದಲೇ ಇ-ಪಾಸ್ಪೋರ್ಟ್ಗಳನ್ನು ಜಾರಿಗೆ ತರಲಾಗುವುದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವುದು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಬಾರಿ ಅನುಕೂಲವಾಗುವುದಲ್ಲದೇ ಈ ಮೂಲಕ ಪಾಸ್ಪೋರ್ಟ್ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದಂತಾಗಿದೆ ಎಂದಿದ್ದಾರೆ.

ಕೃಷಿ ಕಲ್ಯಾಣದ, ಗ್ರಾಮಾಭಿವೃದ್ಧಿ ಜೊತೆಯಾಗಿ ನಗರಾಭಿವೃದ್ಧಿ ಆಡಳಿತದ ಎಲ್ಲಾ ಸ್ಥರಗಳಲ್ಲಿ ತಂತ್ರಜ್ಞಾನದ ರಚನಾತ್ಮಕ ಉಪಯೋಗ ಮೂಲಭೂತ ನಿರ್ಮಾಣದ ಎಲ್ಲ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತದ ಕಲ್ಪನೆ ಬಡಜನರ ಹಾಗೂ ರೈತರ ಕಲ್ಯಾಣ ಹಾಸುಹೊಕ್ಕಾಗಿರುವಂತೆ ಅರ್ಥ ಸಚಿವರು ನೋಡಿಕೊಂಡಿರುವುದು ಮುಂಬರುವ ವರ್ಷಗಳಲ್ಲಿ ಭಾರತ ನವಭಾರತವಾಗಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಪಕ್ಕಾ ಭವಿಷ್ಯ ಇದರಲ್ಲಿ ಅಡಗಿದೆಯೆಂಬುದು ಸ್ಪಷ್ಟವಾಗಿದೆ ಎಂದು ಸಚಿವ ಜೋಶಿ ವಿವರಿಸಿದ್ದಾರೆ.

ಈ ಬಜೆಟ್ಟಿನ ಮತ್ತೊಂದು ಪ್ರಮುಖ ಧ್ಯೇಯ ಎಂದರೆ ಬಡವರ ಅಭಿವೃದ್ಧಿಯಾಗಿದೆ. ಬಡವರಿಗೆ ಮನೆ, ಶೌಚಾಲಯ, ಗ್ಯಾಸ್ ಸಂಪರ್ಕ, ಇಂಟರ್ನೆಟ್ ಸಂಪರ್ಕ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ.

ಇನ್ನು ಪರ್ವತ ಪ್ರದೇಶಗಳಲ್ಲಿನ ಜನರು ಮೂಲಭೂತ ಸೌಕರ್ಯಗಳಿಲ್ಲದೇ ಅಲ್ಲಿಂದ ಪಲಾಯನ ಮಾಡಬಾರದು.

ಹಿಮಾಲಯ ಉತ್ತರಖಂಡ, ಜಮ್ಮು ಕಾಶ್ಮೀರ ಸೇರಿದಂತೆ ಪರ್ವತ ಪ್ರದೇಶಗಳ ರಾಜ್ಯಗಳ ಅಭಿವೃದ್ಧಿಗೆ ಪರ್ವತ ಮಾಲಾ ಯೋಜನೆ ಜಾರಿಗೊಳಿಸಲಾಗಿದೆ.

ಮೂಲಸೌಕರ್ಯ, ಹೈವೇಗಳು, ೪೦೦ ರೈಲು ಯೋಜನೆಗಳು ಘೋಷಣೆಯಾಗಿದೆ. ಇದರಿಂದ ಕೋಟ್ಯಂತರ ಉದ್ಯೋಗಗಳು ಸಿಗಲಿವೆ. ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿ, ೨೦೨೩ ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಇದಾಗಿದೆ ಎಂದೂ ಜೋಶಿ ಹೇಳಿದ್ದಾರೆ.

ರಕ್ಷಣಾ ಕ್ಷೆತ್ರದಲ್ಲಿ ಶೇ. ೬೮% ರಷ್ಟು ದೇಶಿಯ ವಸ್ತು ಖರೀದಿ, ೨೦೨೨ ರ ೫ ಜಿ ತರಲು ಮುಂದಾಗಿ ಬಹುದಿನದ ಕನಸು ನನಸಾಗಿಸಿದ್ದಾರೆ. ದೇಶದಲ್ಲಿ ಎಲ್ಲೇ ಇದ್ರೂ ಭೂಮಿ ಖರಿದಿಸಲು ರಿಜಿಸ್ಟರ್ ಮಾಡಿಸಲು ಅನುವು ಮಾಡಿರೋದು ಒಳ್ಳೆಯದು. ಮಹಿಳೆಯ ಸಬಲೀಕರಣಕ್ಕಾಗಿ ಮಿಷನ್ ಶಕ್ತಿ ಜಾರಿಗೆ ತಂದಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಒತ್ತು ನೀಡಲಿದೆ. ಡಿಆರ್ಡಿಓ ಸಹಯೋಗದಲ್ಲಿ ಸಂಶೋಧನೆಗಳನ್ನು ನಡೆಸಲು ಆಸಕ್ತರಿಗೆ ಅವಕಾಶ ನೀಡಲಾಗುವುದು.

ಭದ್ರತೆಗೆ ಅಗತ್ಯವಿರುವ ಯುದ್ಧೋಪಕರಣಗಳೂ ಸೇರಿದಂತೆ ಎಲ್ಲ ಬಗೆಯ ಆಯುಧಗಳ ದೇಶೀ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು. ಅಗತ್ಯ ಅನುಕೂಲಗಳನ್ನೂ ಕಲ್ಪಿಸಲಾಗಿದೆಯಲ್ಲದೇ, ರೈತರಿಗಾಗಿ ‘ಒನ್ ಸ್ಟೇಷನ್ ಒನ್ ಪ್ರಾಡಕ್ಟ್’ ಯೋಜನೆ ಅನುಷ್ಠಾನಗೊಳಿಸಲಾಗುವುದು. ನಾಲ್ಕು ಸ್ಥಳಗಳಲ್ಲಿ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಿರುವುದು ರೈತ ವಲಯದಲ್ಲಿ ಹರ್ಷ ತಂದಿದೆ, ಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕೃಷಿ ವಲಯದಲ್ಲಿ ಡ್ರೋನ್ ಬಳಕೆಗೆ ಕೇಂದ್ರ ಮುಂದಾಗಿದೆ.

ಬೆಳೆ ದಾಖಲು, ಬೆಳೆ ಮೌಲ್ಯಮಾಪನಕ್ಕೆ, ಕೀಟನಾಶಕಗಳನ್ನು ಸಿಂಪಡಿಸಲು ಕಸಾನ್ ಡ್ರೋನ್ ಬಳಕೆ ಉಪಯೋಗವಾಗುತ್ತದೆ ಎಂದೂ ಜೋಶಿಯವರು ಪ್ರತಿಕ್ರಯಿಸಿದ್ದಾರೆ.
ಬಂಡವಾಳ ವೆಚ್ಚದ ೩೫% ರಷ್ಟು ಬೃಹತ್ ಹೆಚ್ಚಳದಂತಹ ಕ್ರಮಗಳು ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗಬಲ್ಲ ಉದ್ದಿಮೆ, ವ್ಯಾಪಾರ ವಹಿವಾಟುಗಳ ಮೇಲೆ ಅನುಕೂಲಕರ ಪರಿಣಾಮ ಬೀರಲಿದ್ದು ದೇಶದ ಮಾರುಕಟ್ಟೆಯಲ್ಲಿ ಹೊಸ ಚೈತನ್ಯ ತುಂಬುವುದಲ್ಲದೇ ಚೇತೋಹಾರಿ ವಾತಾವರಣ ಬರಲಿದೆ.

ಸರಕಾರದ ಪ್ರತಿ ರೂಪಾಯಿಯನ್ನೂ ಅರ್ಥ ಪೂರ್ಣವಾಗಿ ವೆಚ್ಚಮಾಡಿ ಮೋದಿಯವರ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವುದರೊಂದಿಗೆ ದೇಶ ಬಡಜನರ ಹಿಂದುಳಿದ ಹಾಗೂ ರೈತರ ಕಲ್ಯಾಣ ಹಾಗೂ ಅವರ ಆರ್ಥಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಅರ್ಥಪೂರ್ಣ ಸಮತೋಲನದ ಬಜೆಟ್ ಐತಿಹಾಸಿಕವಾಗಿದೆ.

ಭೂದಾಖಲೆಯ ಖಚಿತವಾದ ಮಾಹಿತಿ ನೀಡುವಲ್ಲಿ ಕೃಷಿ ಡ್ರೋನ್ಗಳ ಬಳಕೆ ಕ್ರಿಪ್ಟೋ ಕರೇನ್ಸಿ ಮೇಲಿನ ಕರ ಆಕರಣೆ ಡಿಜಿಟಲ್ ಕರೇನ್ಸಿ, ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ, ದೇಶದ ಎಲ್ಲಾ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕ ಸಾಧನೆಗಳ ಉಪಯೋಗದಂತಹ ಕ್ರಮಗಳು ಇದು ಹಿಂದಿನ ಭಾರತವಲ್ಲ, ಜಾಗತಿಕವಾಗಿ ಮುನ್ನಡೆಯುತ್ತಿರುವ ನವಭಾರತ ನಿರ್ಮಾಣದ ಬಜೆಟ್ ಎಂದು  ಜೋಶಿ ಕೊಂಡಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *